ಜುಮಲಾಪೂರ ಪ್ರೌಢಶಾಲೆಯಲ್ಲಿ 15 ರಿಂದ 18 ಪ್ರಾಯದ ಮಕ್ಕಳಿಗೆ ಕೋವಿಡ್ ಲಸಿಕೆ ಹಾಕಲಾಯಿತು….

Spread the love

ಜುಮಲಾಪೂರ ಪ್ರೌಢಶಾಲೆಯಲ್ಲಿ 15 ರಿಂದ 18 ಪ್ರಾಯದ ಮಕ್ಕಳಿಗೆ ಕೋವಿಡ್ ಲಸಿಕೆ ಹಾಕಲಾಯಿತು….

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಜುಮಲಾಪೂರ ಗ್ರಾಮದಲ್ಲಿಂದು ಸರಕಾರಿ ಪ್ರೌಢಶಾಲೆಯಲ್ಲಿನ 15 ರಿಂದ 18 ವರ್ಷದ ಮಕ್ಕಳಿಗೆ ಕೋವಿಡ್ ಲಸಿಕೆ ಹಾಕಲಾಯಿತು. ಮುದೇನೂರ ಪ್ರಾಥಮಿಕ ಆರೋಗ್ಯ ಕೇಂದ್ರ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿತ್ತು. ಸರ್ಕಾರದ ಆದೇಶದಂತೆ 15 ರಿಂದ 18 ನೇ ವರ್ಷದ ಪ್ರತಿಯೊಬ್ಬ ಮಕ್ಕಳು ವ್ಯಾಕ್ಸಿನ್ ಹಾಕಿಸಿಕೊಳ್ಳಬೇಕು ಎನ್ನುವ ಮಾರ್ಗ ಸೂಚಿಯಂತೆ ಶಾಲಾ ಮಕ್ಕಳಿಗೆ ಲಸಿಕೆ ಹಾಕಲಾಯಿತು.9 10 ನೇ ತರಗತಿಯ ಮಕ್ಕಳಿಗೆ ವ್ಯಾಕ್ಸಿನ್ ಹಾಕಲಾಯಿತು ಈ ಸಂಧರ್ಭದಲ್ಲಿ ಮುದೇನೂರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ/ಅಖಿಲೇಶ ಹಾಗೂ ಡಾ/ರಾಮಕೃಷ್ಣ ಜೋಷಿ ನೇತೃತ್ವದಲ್ಲಿ ಶಾಲಾ ಮುಖ್ಯ ಗುರುಗಳಾದ ಸೋಮನಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಜಗನ್ನಾಥ ನಾಯ್ಕೋಡಿ ಆರೋಗ್ಯ ಕಾರ್ಯಕರ್ತರು ಆಶಾ ಹಾಗೂ ಶಿಕ್ಷಕ ವೃಂದದವರು ಇದ್ದರು.

ವರದಿ – ಉಪ-ಸಂಪಾದಕೀಯ

Leave a Reply

Your email address will not be published. Required fields are marked *