ಸಂಚಾರ ಜಾಗೃತಿಗಾಗಿ ಮೋಹನ್ ಕುಮಾರ್ ದಾನಪ್ಪರಿಂದ 2 ಗಂಟೆ ಮ್ಯಾರಥಾನ್ ಓಟ,
ಬೆಂಗಳೂರು: 15, 79ನೇ ಸ್ವಾತಂತ್ರ್ಯ ದಿನಾಚರಣೆಯ ದಿನದಂದು ಬಳ್ಳಾರಿ ಜಿಲ್ಲೆಯ ಕಂಪ್ಲಿ ನಿವಾಸಿ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯರಾದ ಮೋಹನ್ ಕುಮಾರ್ ದಾನಪ್ಪನವರು ಬೆಂಗಳೂರು ಮಹಾನಗರದಲ್ಲಿ ಸಂಚಾರ ಜಾಗೃತಿಗಾಗಿ ” ಸಂಚಾರದಲ್ಲಿ ಮೊಬೈಲ್ ಬಿಡಿ, ಜಾಗ್ರತೆಯಿಂದ ಮನೆಗೆ ನಡಿ” ಶೀರ್ಷಿಕೆಯಡಿ 2 ಗಂಟೆಗಳ ಕಾಲ 14 ಕಿಮೀ ನಷ್ಟು ಓಟ ನಡೆಸಿ ಜನತೆಯ ಗಮನ ಸೆಳೆದರು,ಬಲಗೈನಲ್ಲಿ ರಾಷ್ಟ್ರಧ್ವಜ ಹಿಡಿದು, ಎಡಗೈನಲ್ಲಿ ಜಾಗೃತಿ ಶೀರ್ಷಿಕೆಯ ಪೋಸ್ಟರ್ ಹಿಡಿದು ಜಕ್ಕೂರು ವಿಮಾನ ನಿಲ್ದಾಣದಿಂದ ಪ್ರಾರಂಭಿಸಿ ಜಿಕೆವಿಕೆ, ಬ್ಯಾಟರಾಯನಪುರ, ಕೊಡಿಗೇಹಳ್ಳಿ ಗೇಟ್, ಎಸ್ಟೀಮ್ ಮಾಲ್, ಹೆಬ್ಬಾಳ, ಪಶುವೈದ್ಯಕೀಯ ಕಾಲೇಜ್, ಸಿಬಿಐ, ಪ್ಯಾಲೇಸ್ ಗುಟ್ಟಹಳ್ಳಿ, ಕುಮಾರ ಕೃಪಾ, ಗಾಲ್ಫ್ ಕ್ಲಬ್, ರಾಜಭವನ, ಅಲಿ ಅಸ್ಕರ್ ರಸ್ತೆ, ವಿವಿ ಗೋಪುರ, ಹೈಕೋರ್ಟ್, ಮಾರ್ಗವಾಗಿ ವಿಧಾನ ಸೌಧ ತಲುಪಿದರು.ನಂತರ ಮಾತನಾಡಿದ ಮೋಹನ್ ಕುಮಾರ್ ದಾನಪ್ಪನವರು ದೇಶದಲ್ಲಿ ಅತಿ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸಿ ಜೀವ ಹಾನಿಯಾಗುತ್ತಿರುವ ಮೂಲ ಕಾರಣವೇ ಚಾಲನೆಯಲ್ಲಿ ಮೊಬೈಲ್ ಬಳಕೆ ಮಾಡುತ್ತಿರುವುದರಿಂದ, ವಾಹನ ಚಾಲನೆ ಮಾಡುವಾಗ ಮೊಬೈಲ್ ಸಂಭಾಷಣೆ ಮತ್ತು ಬಳಸುವುದು ದಂಡನೀಯ ಅಪರಾಧವಾಗಿದ್ದರೂ ಸಾರ್ವಜನಿಕರು ಚಾಲನೆಯಲ್ಲಿ ಯಥೇಚ್ಛ ಮೊಬೈಲ್ ಬಳಸುತ್ತಿರುವುದು ತಮ್ಮ ಜೀವಕ್ಕಲ್ಲದೆ ಇತರರ ಜೀವಕ್ಕೆ ಹಾನಿ ಉಂಟು ಮಾಡುತ್ತಿದ್ದು ಚಾಲನೆಯಲ್ಲಿ ಮೊಬೈಲ್ ಬಳಸದಂತೆ ತಿಳಿಸಿದರು! ಸದರಿ ಮ್ಯಾರಥಾನ್ ನಲ್ಲಿ ವಕೀಲರಾದ ಮನೋಜ್ ಕುಮಾರ್ ದಾನಪ್ಪನವರು ಪಾಲ್ಗೊಂಡಿದ್ದರು!