ಜುಮಲಾಪೂರ ಮುದೇನೂರ ರಸ್ತೆಯಲ್ಲಿ ದಿಡೀರನೇ ಕಾರಿಗೆ ಬೆಂಕಿ ಬಿದ್ದು ಕಾರಿನ ಮಾಲಿಕ ಅಡಿವೆಪ್ಪ ತೊಂಡಿಹಾಳ ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರು…..

Spread the love

ಜುಮಲಾಪೂರ ಮುದೇನೂರ ರಸ್ತೆಯಲ್ಲಿ ದಿಡೀರನೇ ಕಾರಿಗೆ ಬೆಂಕಿ ಬಿದ್ದು ಕಾರಿನ ಮಾಲಿಕ ಅಡಿವೆಪ್ಪ ತೊಂಡಿಹಾಳ ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರು…..

ತಾವರಗೇರ ಹೋಬಳಿಯ ಜುಮಲಾಪೂರ ಗ್ರಾಮದ ಹತ್ತಿರ ಅಡಿವೆಪ್ಪ ತೊಂಡಿಹಾಳ ಸಾಸ್ವಿಹಾಳ ಎಂಬುವರ ಕಾರಿಗೆ ದಿಡೀರ್ ನೇ ಬೆಂಕಿ ಬಿದ್ದು ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಜುಮಲಾಪೂರ ಮುದೇನೂರ ರಸ್ತೆಯ ಮಾರ್ಗದಲ್ಲಿ ನಡೆದಿದೆ.   ಜುಮಲಾಪೂರದಿಂದ  ಹೈಸ್ಕೂಲ್ ಹತ್ತಿರ ಇರುವ ಕಾರಿನ ಮಾಲಿಕ ಅವರ renot puls KA 37 1675 N  ಕಾರನ್ನು ಮನೆಕಡೆಗೆ ಹೊಗುವಾಗ ಮೊದಲು ಹೋಗೆ ಕಾಣಿಸಿಕೊಂಡು ಕೆಲವೆ ಸೆಕೆಂಡ್ಗಳಲ್ಲಿ ಬೆಂಕಿ ಅವಗಡ ಸಂಭವಿಸಿದೆ. ತಾಂತ್ರಿಕ ದೋಷದಿಂದ ಬೆಂಕಿಗಾಹುತಿಯಾದ ಕಾರನ್ನು ಅಗ್ನಿ ಶಾಮಕ ಸಿಬ್ಬಂದಿಯವರು ಬಂದು ಬೆಂಕಿ ನಂದಿಸುವಷ್ಟರಲ್ಲಿ  ಸಂಪೂರ್ಣವಾಗಿ ಸುಟ್ಟಿರುವದು ತಿಳಿದು ಬಂದಿದೆ.

ವರದಿ – ಉಪ-ಸಂಪಾದಕೀಯ

Leave a Reply

Your email address will not be published. Required fields are marked *