ಶಾಲೆಯಲ್ಲಿ ಸಂವಿಧಾನದ ಪಾಠ ಬರಲಿ: ಆಮಿರ್ ಅಶ್ಅರೀ.
ಯಲಬುರ್ಗಾ: ನಗರದ ಜ್ಞಾನ ಸಾಗರ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಲಾದ 79ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಯುವ ಸಾಹಿತಿ ಆಮಿರ್ ಅಶ್ಅರೀ ಬನ್ನೂರು ಭಾರತ ದೇಶವೇ ನಮಗೆ ಸಾರ್ವಭೌಮ. ವಿದ್ಯಾವಂತ ಸಮಾಜದಿಂದಲೇ ದೇಶದ ಪ್ರಗತಿ ಮತ್ತು ಹಿತ ಸಾಧ್ಯವಾಗಿದೆ. ದೇಶಪ್ರೇಮವನ್ನು ಮೈಗೂಡಿಸಿಕೊಂಡು ಬದುಕುವ ನಾಗರಿಕ ಸಮಾಜ ನಾವು ಆಗಬೇಕಾಗಿದೆ. ವರ್ತಮಾನದ ಮಕ್ಕಳಿಗೆ ಶಿಕ್ಷಣದ ಜೊತೆಗೆ ದೇಶಪ್ರೇಮ ಮತ್ತು ದೇಶಕ್ಕೆ ಹುತಾತ್ಮರಾದ ಸೇನಾನಿಗಳ ಹಾಗೂ ಸಂವಿಧಾನದ ಬಗೆಗಿನ ಅರಿವನ್ನು ಪ್ರತ್ಯೇಕವಾಗಿ ನೀಡಬೇಕು. ದೈನಂದಿನ ಶಿಕ್ಷಣದ ಜೊತೆಗೆ ಸಂವಿಧಾನದ ಅರಿವನ್ನು ಪ್ರಾಥಮಿಕ ಶಿಕ್ಷಣವಾಗಿ ಮಕ್ಕಳಿಗೆ ನೀಡುವಂತಹ ಯೋಜನೆಯನ್ನು ಸರ್ಕಾರಗಳು ರೂಪಿಸಬೇಕೆಂದು ಅಭಿಪ್ರಾಯಪಟ್ಟರು. ಸಂಸ್ಥೆಯ ಅಧ್ಯಕ್ಷ ಸಿ.ಎಚ್ ಪೋಲೀಸ್ ಪಾಟೀಲ್ ಮಾತನಾಡಿ ವಿದ್ಯಾರ್ಥಿಗಳು ಕಲಿಯುವುದಕ್ಕೆ ಹೆಚ್ಚು ಹೊತ್ತು ಕೊಡಬೇಕು. ಶಿಕ್ಷಣ ಪಡೆದುಕೊಳ್ಳುವುದೇ ವಿದ್ಯಾರ್ಥಿಗಳ ನಿಮ್ಮ ಮುಖ್ಯ ಗುರಿಯಾಗಬೇಕಾಗಿದೆ ಎಂದರು. ಇದೇ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ನಾಗರಾಜ್ ಕೊಪ್ಪಳ್, ಸಾಮಾಜಿಕ ಮುಂದಾಳು ಮಾಬುಸಾಬ್ ಆರಬಳ್ಳಿನ ಮುಧೋಳ ಮತ್ತು ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.