“ಭಾರತ ಸ್ವಾತಂತ್ರ್ಯ ಹೋರಾಟದ ಮಾರ್ಗಗಳು ಜಗತ್ತಿಗೆ ಸ್ಫೂರ್ತಿ – ಕೃಷಿಯೇ ಭಾರತದ ಆರ್ಥಿಕತೆಯ ಜೀವಾಳ” – ಡಾಕ್ಟರ್ ಶಶಿಧರ್ ಆರ್ .

Spread the love

ದಾವಣಗೆರೆ:ಅ15: ದಾವಣಗೆರೆ ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಅನುಭವಮಂಟಪದ ಶ್ರೀ ತರಳಬಾಳು ಜಗದ್ಗುರು ರೆಸಿಡೆನ್ಸಿಯಲ್ ಸ್ಕೂಲ್ ನಲ್ಲಿ 79ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಸಮಾರಂಭವು ಸಡಗರ ಸಂಭ್ರಮದಿಂದ ಜರಗಿತು. ಅನುಭವಮಂಟಪ ಶಾಲೆಯ ವಿದ್ಯಾರ್ಥಿಗಳ  ಶಿಸ್ತುಬದ್ಧವಾದ ಪಥಸಂಚಲನ, ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮಗಳು ಮನಸೂರೆಗೊಳ್ಳುವುದರ ಜೊತೆಗೆ ಪ್ರತಿಯೊಬ್ಬರಲ್ಲೂ ದೇಶಾಭಿಮಾನ ಮೂಡಿಸುವಂತಿವೆ. ಭಾರತ ಸ್ವಾತಂತ್ರ್ಯ ಹೋರಾಟದ ಮಾರ್ಗಗಳು ಜಗತ್ತಿಗೆ ಸ್ಫೂರ್ತಿದಾಯಕವಾಗಿವೆ. ಕೃಷಿ ಪ್ರಧಾನ ದೇಶವಾದ ಭಾರತದಲ್ಲಿ ಕೃಷಿಯಿಂದಲೇ 50ಕ್ಕೂ ಹೆಚ್ಚು ವಲಯಗಳ ಕೋಟ್ಯಂತರ ವ್ಯಾಪಾರ ವಹಿವಾಟು, ಲಕ್ಷಾಂತರ ಜನರಿಗೆ ಉದ್ಯೋಗ  ಭದ್ರತೆಯೂ ದೊರೆತಿದ್ದು ಕೃಷಿಯೇ ಭಾರತದ ಆರ್ಥಿಕತೆಯ ಜೀವಾಳವಾಗಿದೆಂದು ದಾವಣಗೆರೆ ವಿಶ್ವವಿದ್ಯಾನಿಲಯದ ಡೀನ್ ವಾಣಿಜ್ಯ ವಿಭಾಗ ಹಾಗೂ ಸಿಂಡಿಕೇಟ್ ಸದಸ್ಯರಾದ ಡಾಕ್ಟರ್ ಶಶಿಧರ್ ಆರ್  ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಅನುಭವಮಂಟಪ ಶಾಲಾ ಸಂಕೀರ್ಣದ ಆಡಳಿತಾಧಿಕಾರಿಗಳಾದ ಡಾಕ್ಟರ್ ಮಲ್ಲಿಕಾರ್ಜುನಪ್ಪ ಹೆಚ್ ಅವರು ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನಗೈದ ಮಹಾನೀಯರ ಆದರ್ಶಗಳನ್ನು ನಾವೆಲ್ಲ ದಿನನಿತ್ಯ ಸ್ಮರಿಸಬೇಕು ಎಂದು ತಮ್ಮ ಅಧ್ಯಕ್ಷೀಯ ನುಡಿಗಳನ್ನಾಡಿದರು. ಸಮಾರಂಭದ ವೇದಿಕೆಯ ಮೇಲೆ ಶ್ರೀ ತರಳಬಾಳು ಸೆಂಟ್ರಲ್ ಸ್ಕೂಲ್ ನಿರ್ದೇಶಕರು ಹಾಗೂ ಪ್ರಾಂಶುಪಾಲರು ಉಪಸ್ಥಿತರಿದ್ದರು. ಕಾರ್ಯಕ್ರಮದ ಮುಖ್ಯ ನಿರೂಪಣೆಯನ್ನು ಅಮೋದ್ ಬಿ ಶೆಟ್ಟಿ, ಭವಿನಿ ಎಂ ಕಳ್ಳಿಗಲ್, ಸ್ವಾಗತವನ್ನು ತನ್ಮಯಿ ಕೆ ಎಸ್, ಅತಿಥಿಗಳ ಪರಿಚಯವನ್ನು ನಿಹಾರಿಕ ವಿ ಆರ್, ಬಹುಮಾನ ವಿತರಣೆಯನ್ನು ಲಕ್ಷಿತಾ ಎಸ್, ಪಥ ಸಂಚಲನವನ್ನು ವಾಸುಕಿ ಹೆಚ್ ಎಸ್, ಮನಸ್ವಿ ಡಿ, ಹಾಶಿನಿ ರಮೇಶ್, ತೇಜಸ್ ನಾಯಕ್ ಜಿ ಎಸ್, ಗಗನ್ ಕೆ ಆರ್, ಸಾಂಸ್ಕೃತಿಕ ಕಾರ್ಯಕ್ರಮಗಳ ನಿರೂಪಣೆಯನ್ನು ಪ್ರಜ್ಞಾ ಹಿತೇಂದ್ರ, ಸಿರಿಗೌರಿ ಆರ್ ರಾಮಗಿರಿ, ವಂದನಾರ್ಪಣೆಯನ್ನು ವೈಣವಿ ಸಿ ಬಿ ಅವರು ನಡೆಸಿಕೊಟ್ಟರು. ಈ ಸುಂದರ ಸಮಾರಂಭದಲ್ಲಿ ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕರು ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *