ಹಂಪನಗೌಡ ಬಾದರ್ಲಿ ಅವರ ಹುಟ್ಟುಹಬ್ಬದ ಅಂಗವಾಗಿ ಕಾರುಣ್ಯಾಶ್ರಮಕ್ಕೆ ಅಡುಗೆ ಪಾತ್ರೆಗಳನ್ನು ವಿತರಿಸಿದ — ಆರ್. ಸಿ ಪಾಟೀಲ್ —

Spread the love

ಹಂಪನಗೌಡ ಬಾದರ್ಲಿ ಅವರ ಹುಟ್ಟುಹಬ್ಬದ ಅಂಗವಾಗಿ ಕಾರುಣ್ಯಾಶ್ರಮಕ್ಕೆ ಅಡುಗೆ ಪಾತ್ರೆಗಳನ್ನು ವಿತರಿಸಿದಆರ್. ಸಿ ಪಾಟೀಲ್

ಸಿಂಧನೂರು ನಗರದ ಕುಷ್ಟಗಿ ರಸ್ತೆಯಲ್ಲಿರುವ ಕಾರುಣ್ಯ ನೆಲೆ ವೃದ್ದಾಶ್ರಮ ವಯಸ್ಕರ ಬುದ್ದಿ ಮಾಂದ್ಯ ಆಶ್ರಮಕ್ಕೆ ದುದ್ದುಪುಡಿ ಮಹಿಳಾ ಮಹಾವಿದ್ಯಾಲಯದ  ಕಾರ್ಯದರ್ಶಿಗಳಾದ ಸಮಾಜಪರ ಚಿಂತಕ ಪರಿಸರ ಪ್ರೇಮಿ ನೊಂದು-ಬೆಂದ ಜೀವಿಗಳಿಗೆ ಪ್ರೀತಿಯ ಮಗ ಮೊಮ್ಮಗ ನಾಗಿರುವ ಆರ್. ಸಿ.ಪಾಟೀಲ್ ಅವರು ಮಾಜಿ ಶಾಸಕರಾದ ಹಂಪನಗೌಡ ಬಾದರ್ಲಿ ಅವರ ಹುಟ್ಟು ಹಬ್ಬದ ಪ್ರಯುಕ್ತ ಆಶ್ರಮಕ್ಕೆ ದಿನಬಳಕೆಗೆ ಬೇಕಾಗಿದ್ದ ಎಲ್ಲಾ ರೀತಿಯ ಅಡುಗೆ ಪಾತ್ರೆಗಳನ್ನು ವಿತರಿಸಿದರು. ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಬೀರಪ್ಪ ಶಂಭೋಜಿ ಮಾತನಾಡಿ ಹಂಪನಗೌಡ ಆದರ್ಶ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡು ಅವರ ಅಪಾರ ಪ್ರೀತಿ ಸಂಬಂಧವನ್ನು ಬೆಳೆಸಿದ ಆರ್. ಸಿ. ಪಾಟೀಲ್ ಹಂಪನಗೌಡ ರಂತೆ ಜನಪರ ಸಮಾಜಪರ ಪರಿಸರ ಪರ  ಅನಾಥಪರ ಕಾರ್ಯಗಳನ್ನು ಮಾಡುವುದರ ಮೂಲಕ ಯುವಕರಿಗೆ ಸ್ಫೂರ್ತಿಯಾಗಿದ್ದಾರೆ. ಇವರ ಆದರ್ಶವನ್ನು ಪ್ರತಿಯೊಬ್ಬ ಯುವಕರು ಮೈಗೂಡಿಸಿಕೊಳ್ಳಬೇಕು. ಹಂಪನ ಗೌಡರ ಸಾಧನೆಯು ಕೂಡ ಸಿಂಧನೂರಿನ ಜನ ಮರೆಯುವಂತಿಲ್ಲ ಇಂತಹ ಕಾರುಣ್ಯ ಕುಟುಂಬದ ಎಲ್ಲಾ ಕಷ್ಟ-ಸುಖಗಳಲ್ಲಿ ಭಾಗಿಯಾಗುವ ಆರ್ ಸಿ ಪಾಟೀಲ್ ಅವರ ಕುಟುಂಬಕ್ಕೆ ಆ ಭಗವಂತ ಆಯಸ್ಸು ಆರೋಗ್ಯ ಸುಖ ಶಾಂತಿ ನೆಮ್ಮದಿಯನ್ನು ಕರುಣಿಸಲಿ ಎಂದು ಮಾತನಾಡಿ ಹಂಪನಗೌಡ ಬಾದರ್ಲಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿ ಶುಭಹಾರೈಸಿದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆನಂದ್ ಪುರೋಹಿತ ಪ್ರಾಚಾರ್ಯರು ದುದ್ದು ಪುಡಿ ಮಹಿಳಾ ಮಹಾವಿದ್ಯಾಲಯ ಸಿಂಧನೂರು. ಆರ್ ಸಿ.ಪಾಟೀಲ್ ಕಾರ್ಯದರ್ಶಿಗಳು ದುದ್ದು ಪುಡಿ ಮಹಿಳಾ ಮಹಾವಿದ್ಯಾಲಯ ಸಿಂಧನೂರು. ಅಂಬಣ್ಣ ಸಾಸಲಮರಿ ಪತ್ರಕರ್ತರು ಸಿಂಧನೂರು. ಆಶ್ರಮದ ಆಡಳಿತಾಧಿಕಾರಿಗಳಾದ ಚನ್ನಬಸವಸ್ವಾಮಿ ಹಿರೇಮಠ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ನಂತರ ಮಾತನಾಡಿದ ಆಶ್ರಮದ ಆಡಳಿತಾಧಿಕಾರಿಗಳಾದ ಚನ್ನಬಸವಸ್ವಾಮಿ ಆರ್. ಸಿ. ಪಾಟೀಲ್ ಅವರು ಆಶ್ರಮದ ಎಲ್ಲಾ ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತ ವೈದ್ಯಕೀಯ ಈ ಹಿಂದೆ  ಡ್ರೈ ಫುಡ್ಸ್ ಹಾಗೂ ವೈದ್ಯಕೀಯ ಸಲಕರಣೆಗಳನ್ನು ವಿತರಿಸಿದ್ದರು. ದಿನಾಲು ಆಶ್ರಮದ ಎಲ್ಲಾ ಸಲಹೆಗಳನ್ನು ತೆಗೆದುಕೊಂಡು ಹೆಚ್ಚಿನ ಸಹಾಯ ಮಾಡುತ್ತಾ ನೊಂದು-ಬೆಂದ ಜೀವಿಗಳಿಗೆ  ಪ್ರೀತಿಯ ಮಗ ಮೊಮ್ಮಗ ನಾಗಿ ಜಿಲ್ಲೆಯಾದ್ಯಂತ ಒಳ್ಳೆಯ ಹೆಸರು ಮಾಡುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶಗಳನ್ನು ನೀಡುತ್ತಾ ತಮ್ಮ ವಿದ್ಯಾಸಂಸ್ಥೆಯಿಂದ ಹಲವಾರು ಬಡ ವಿದ್ಯಾರ್ಥಿಗಳಿಗೆ ಕಾಣದ ಕೈಯ್ಯಾಗಿ ಸಹಾಯ ಮಾಡುತ್ತಿದ್ದಾರೆ ಎಂದು ಮಾತನಾಡಿದರು.

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *