ತಾವರಗೇರಾ ಪಟ್ಟಣದ ವಸತಿ ರಹಿತ ನಿವಾಸಿಗಳಿಗೊಂದು ಸಿಹಿ ಸುದ್ದಿ,ಅರ್ಹ ಫಲಾನುಭವಿಗಳಿಗೆ ಈ ಯೋಜನೆ.

Spread the love

ತಾವರಗೇರಾ ಪಟ್ಟಣದ ವಸತಿ ರಹಿತ ನಿವಾಸಿಗಳಿಗೊಂದು ಸಿಹಿ ಸುದ್ದಿ,

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ ವಸತಿ ರಹಿತ ನಿವಾಸಿಗಳಿಗೊಂದು ಸಿಹಿ ಸುದ್ದಿ, ತಾವರಗೇರಾದ ವಸತಿ ರಹಿತ ಕುಟುಂಬಗಳು ಸದ್ಯದ ದಿನಮಾನಗಳಲ್ಲಿ ದುಡಿದು ಕುಟುಂಬ ಸಾಗಿಸುವುದು ತುಂಬಾ ಕಷ್ಟ  ಇಂತಹ ದಿನಮಾನದಲ್ಲಿ ವಸತಿ ರಹಿತ ಕುಟುಂಬಗಳು ಬಾಡಿಗೆ ಸರಿಯಾದ ಸಮಯಕ್ಕೆ ಕಟ್ಟದೆ, ಬಿದಿಗೆ ಬಂಂ ಕುಟುಂಬಗಳು  ನಮ್ಮ ಕಣ್ಣ ಮುಂದೆ ಹಲವು ಪ್ರಸಂಗಗಳಲ್ಲಿ ಕಂಡಿದ್ದೆವೆ, ಇನ್ನ ಕೆಲವು ಕುಟುಂಬಗಳು ಸರಿಯಾದ ಸಮಯಕ್ಕೆ ಬಾಡಿಗೆ ನೀಡಿದರು ವಸತಿಗಳು ಸಿಗದೆ ಇರುವ ಪ್ರಸಂಗಗಳು ಸಹ ನೋಡಿದ್ದೆವೆ. ಒಟ್ಟಿನಲ್ಲಿ ವಸತಿ ರಹಿತ ಕುಟುಂಬಗಳು ತಾವು ದುಡಿಯುವ ಹಣದಲ್ಲಿ ಬಾಡಿಗೆ ಹಣ ಕಟ್ಟಿ ಜೀವನ ಸಾಗಿಸುವವರು ಪಡುವ ಕಷ್ಟ ಸಾಮಾನ್ಯವಲ್ಲ, ಸರಕಾರವು ಇಂತಹ ಬಡ / ನಿರ್ಗತೀಕ ಕುಟುಂಬಗಳಿಗೆ ವಸತಿ ರಹಿತ ನಿವೇಶನಗಾಗಿ ವಾಜಪೇಯಿ ನಗರ ವಸತಿ ಯೋಜನೆಯಡಿಯಲ್ಲಿ  ಫಲಾನುಭವಿಗಳನ್ನ ಅರ್ಜಿ ಕರೆದು ನಿಜವಾದ ಕಡು ಬಡವರಿಗೆ ಈ ಯೋಜನೆ ತಲುಪಲೆಂದು ಸರಕಾರವು ಪಣ ತೊಟ್ಟಿದೆ, ಅದೇರಿತಿ ನಮ್ಮ ತಾವರಗೇರಾ ಪಟ್ಟಣ ಪಂಚಾಯತಿಯವರು ಈ ವಾಜಪೇಯಿ ನಗರ ವಸತಿ ಯೋಜನೆಯಡಿಯಲ್ಲಿ ತಾವರಗೇರಾ ಪಟ್ಟಣದ ಹತ್ತಿರಾ ಬರುವ ನಾರಿನಾಳ  ರಸ್ತೆಯ ಸಿದ್ದಶ್ರೀ ನಗರದ ಹಿಂಭಾಗದಲ್ಲಿ ಬರುವ ಸ.ನಂ 434/1 ಹಾಗೂ 434/4 ಒಟ್ಟು 9 ಎ 18 ಗುಂಎ ಜಮೀನಿನಲ್ಲಿ ಪ್ಲಾಟಗಳನ್ನು ಒದಗಿಸುವುದಕ್ಕಾಗಿ ಅರ್ಹರಿಂದ ಅರ್ಜಿ ಅಹ್ವಾನಿಸಲಾಗಿದೆ. ಅರ್ಹ ಫಲಾನುಭವಿಗಳು ಸೂಕ್ತ ದಾಖಲಾತಿಗಳೊಂದಿಗೆ ಅಂದರೆ 1) ಫಲಾನುಭವಿಯ ಆಧಾರ ಕಾರ್ಡ ಪ್ರತಿ, 2 ಚುನಾವಣೆಯ ವೋಟರ್ ಐ.ಡಿ.ಪ್ರತಿ, 3) ಪಡಿತರ ಚೀಟಿ, 4) ಫಲಾನುಭವಿಯ ಜಾತಿ ಮತ್ತು ಆಧಾಯದ ಪ್ರತಿ, 5) ಪಡಿತರ ಚೀಟಿಯಲ್ಲಿರುವ ಪ್ರತಿಯೊಬ್ಬರ ಆಧಾರ ಕಾಡ್ರ ಪ್ರತಿ, 6) ಕುಟುಂಬದ ಚುನಾವಣೆಯ ವೋಟರ್ ಐ.ಡಿ ಪ್ರತಿ, 7) 50 ರೂ/ ಛಾಪಾ ಖಾಗದ (ಭಾಂಡ) 8) ಫಲಾನುಭವಿಯ ಇತ್ತಿಚೀನ ಭಾವ ಚಿತ್ರ, 10) ಮೋಬೈಲ್ ಸಂಖ್ಯೆ  11) ಫಲಾನುಭವಿಯ ವಾಸಸ್ಥಳದ ಪ್ರತಿ, ಭ್ಯಾಂಕ್ ಪಾಸ್ ಬುಕ್ ಪ್ರತಿ, 12) ಫಲಾನುಭವಿಯು ಕನಿಷ್ಠ 5 ವರ್ಷ ವಾಸವಾಗಿರಬೇಕು. ಈ ಎಲ್ಲಾ ದಾಖಲಾತಿಗಳೊಂದಿಗೆ ದಿನಾಂಕ 10-05-2021 ರ ರೋಳಗೆ ಅರ್ಜಿ ಸಲ್ಲಿಸಲು ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿಗಳಾದ ಶಂಕರ ಕಾಳೆ, ಹಾಗೂ ಅಧ್ಯಕ್ಷರಾದ ವಿಕ್ರಮ ರಾಯ್ಕರ್ ಅವರು ವಸತಿ ರಹಿತ ಕುಟುಂಬಸ್ಥರಿಗೆ ಮನವಿ ಮಾಡಿಕೊಂಡಿದ್ದಾರೆ,.

ಸೂಚನೆ ( ಈ ಹಿಂದೆಯಾದ ವಾಜಪೇಯ ನಗರ ವಸತಿ ಯೋಜನೆಯಲ್ಲಾದ ಅಕ್ರಮಕ್ಕೆ ಅವಕಾಶ ಕೊಟ್ಟಿದ್ದು ಖಂಡಿಸುತ್ತ, ಮುಂದಾಗುವ ವಾಜಪೇಯಿ ನಗರ ವಸತಿ ಯೋಜನೆಯಲ್ಲಿ ಅಕ್ರಮಕ್ಕೆ ಅವಕಾಶ ನೀಡದೆ ಖುದ್ದಾಗಿ ಪಂಚಾಯತಿ ಕಾರ್ಯಲಯದ ಮುಖಾಂತರ ಪ್ರತಿ ವಾರ್ಡಗಳಿಗೆ ಬಂದು ವಾರ್ಡ ಸಭೆ ಮಾಡಿಕೊಂಡು ನಿಜವಾದ ಕಡು ಬಡವ, ನಿರ್ಗತೀಕರಾದವರನ್ನು ಪರೀಶಿಲಿಸಿ ಫಲಾನುಭವಿಗಳನ್ನು ಆಯ್ಕೆ ಮಾಡಬೇಕ್ಕಾಗಿ ತಮ್ಮಲ್ಲಿ ಈ ಮನವಿ, ಒಟ್ಟಿನಲ್ಲಿ ಬಡ ಫಲಾನುಭವಿಗಳಿಗೆ ಈ ಯೋಜನೆ ದೊರಕಲಿಯೆಂದು ಆಶಿಸುತ್ತೇವೆ.   ವರದಿ – ಸಂಪಾದಕೀಯ

Leave a Reply

Your email address will not be published. Required fields are marked *