ಕೊಪ್ಪಳ : ಅಲೆಮಾರಿ ಸಮುದಾಯಕ್ಕೆ ಪ್ರತ್ಯೇಕ ಶೇ 1 ರಷ್ಟು ಮೀಸಲಾತಿ ಜಾರಿ ಆಗ್ರಹಿಸಿ ಇಂದು ಬೃಹತ್ ಪ್ರತಿಭಟನೆ.
ಕೊಪ್ಪಳ : ಅಲೆಮಾರಿ ಸಮುದಾಯಕ್ಕೆ ಪ್ರತ್ಯೇಕ ಶೇ 1 ರಷ್ಟು ಮೀಸಲಾತಿ ಜಾರಿ ಆಗ್ರಹಿಸಿ ಇಂದು ಬೃಹತ್ ಪ್ರತಿಭಟನೆ ನಡೆಸಲು ಅಲೆಮಾರಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಪ್ರವಾಸಿ ಮಂದಿರದಲ್ಲಿ ನಡೆದ ಪೂರ್ವ ಭಾವಿ ಸಭೆ ವಿವಿಧ ಸಂಘಟನೆಗಳು ತೀರ್ಮಾನಿಸಿದರು.
ಈ ನಾಡಿನ ಸಮಸ್ತ ಅಲೆಮಾರಿ ಸಮುದಾಯಕ್ಕೆ ಹಿತದೃಷ್ಟಿಯಿಂದ, ನಮ್ಮ ಹಕ್ಕನ್ನು ನಾವುಗಳು ಪಡೆಯಲು ನಮಗೆ ಮೀಸಲಾತಿಯಲ್ಲಿ ಸ್ಪ್ರಸ್ಯ -ಅಸ್ಪೃಶ್ಯ ಸಮುದಾಯಗಳನ್ನು ಒಟ್ಟು ಗುಡಿಸಿ ಬಾಲಾಡ್ಯ ಸಮುದಾಯದ ಜೊತೆಗೆ ನಮ್ಮನ್ನು ಸೇರಿಸುತ್ತಿರುವ ಸರಕಾರದ ವಿರುದ್ಧ ನಮ್ಮ ಹೋರಾಟ, ನಮ್ಮ ಬೇಡಿಕೆ ಅಸ್ಪೃಶ್ಯರಾದ ನಮ್ಮನ್ನು ಎಡ ಅಥವಾ ಬಲಗೈ ಕಡೆ ಸೇರಿಸಿ ಅಥವಾ ನಮ್ಮನ್ನೇ ಅಸ್ಪೃಶ್ಯರನ್ನಷ್ಟೇ ಬೇರೆ ಮಾಡಿ ಮೀಸಲಾತಿ ನೀಡಿ ಎನ್ನುವ ಶುಕ್ರವಾರ ಬೆಳಿಗ್ಗೆ 10.30ಕ್ಕೆ ರಾಜ್ಯ ವ್ಯಾಪಿ ಹೋರಾಟಕ್ಕೆ ಕರೆ ನೀಡಿದ ಹಿನ್ನೆಲೆಯಲ್ಲಿ ಕೊಪ್ಪಳ ನಗರದ ಅಶೋಕ ವೃತ್ತದ ಮೂಲಕ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪಾದ ಯಾತ್ರೆ ಮೂಲಕ ಸಮುದಾಯಗಳು ಅಸ್ಪೃಶ್ಯ49,ಸಮುದಾಯದಲ್ಲಿ ಬರುವ ಕೊಪ್ಪಳ ಜಿಲ್ಲಾ ಸಮುದಾಯದ ಸಮಸ್ತ ಪ್ರಮುಖರು ಮತ್ತು ಸರ್ವ ಜನತೆ ಹಾಗೂ ವಿವಿಧ ಸಂಘಟನೆಗಳೊಂದಿಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ.
ಅಲೆಮಾರಿ ಜಿಲ್ಲಾ ಸಮಿತಿಯ ಅಧ್ಯಕ್ಷ ಸಂಜಯ್ ದಾಸ್ ಕೌಜಗೇರಿ,ದಲಿತ ಮತ್ತು ಪ್ರಗತಿಪರ ಮುಖಂಡರಾದ ಅಲ್ಲಮ ಪ್ರಭು ಬೆಟ್ಟದೂರು. ಬಸವರಾಜ್ ಶೀಲವಂತರ. ಮಹಾಂತೇಶ್ ಕೊತಬಾಳ.ಮುದುಕಪ್ಪ ಹೊಸಮನಿ.ಎಸ್.ಎ.ಗಫಾರ್.ಕಾಶಪ್ಪ ಚಲವಾದಿ, ಮಲ್ಲಿಕಾರ್ಜುನ್ ಪೂಜಾರ್, ಗವಿ ಹಲಗಿ.ಶಿವಪ್ಪ ಹಡಪದ, ರಾಮಲಿoಗಯ್ಯ ಶಾಸ್ತ್ರಿ ಮಠ, ಪಾಸ್ಟರ್ ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷ ಚನ್ನಬಸಪ್ಪ ಅಪ್ಪಣವರ್. ಮಾರ್ಕoಡೆಯ ಬೆಲ್ಲದ,ಶೇಷಣ್ಣ ಶಹಪುರ್, ಬಸವರಾಜ್ ವಿಭೂತಿ. ಸುಂಕಪ್ಪ ಮೀಸಿ,ಲಲಿತಾ ಮಜ್ಜಿಗಿ.ಮಾರುತಿ ಕಟ್ಟಿಮನಿ. ರಂಗಪ್ಪ ಹಡಗಲಿ ಮುಂತಾದವರು ಭಾಗವಹಿಸಿದ್ದರು.