ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದ ಪುರಸಭೆ ಉಪಾಧ್ಯಕ್ಷೆ ನೇಣಿಗೆ ಶರಣು..

Spread the love

ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದ ಪುರಸಭೆ ಉಪಾಧ್ಯಕ್ಷೆ ನೇಣಿಗೆ ಶರಣು..

ಹುಟ್ಟು ಸಹಜ ಸಾವು ಖಚೀತ ಅನ್ನುವ ಹಾಗೇ ಈ ಹುಟ್ಟು ಸಾವಿನ ನಡುವೆ ಅಂತರವಿದೆ ಆ ಅಂತರವೇ ಮನಷ್ಯನಿಗೆ ಸಾಧಿಸಲು ಸಿಗುವ ಒಂದು ಅದ್ಬುತ ಅವಕಾಶ ಸರಿಯಾಗಿ ಆ ಅವಕಾಶ ಬಳಕಿ ಮಾಡಿಕೊಂಡು ಸಾಧನೆಗೈದರೆ, ಇತಿಹಾಸದ ಪುಟಗಳಲ್ಲಿ ನಮ್ಮದೊಂದು ಪುಟವಿರಬೇಕು, ಅದುವೇ ಸಾಧನೆ. ಈ ದೇಹ ನಾಡು, ನಡು, ನೀರು, ಮಣ್ಣಿಗಾಗಿ ಹೋರಾಟ ಮಾಡಿ ಜೀವನವೇ ಮುಡುಪಾಗಿಟ್ಟ ಇತಿಹಾಸಿಕರ ಇತಿಹಾಸವೇ ಇದೇ.  ಇಂತಹ ನಾಡಿನಲ್ಲಿ ಜನಿಸಿದ ನಾವು ನೀವು, ಸಾವಿಗೆ ಯಾಕೆ ಶರಣಾಗಬೇಕು ? ಅಲ್ಲವೇ ? ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದ ಪುರಸಭೆ ಉಪಾದ್ಯಕ್ಷೆ ನೇಣಿಗೆ ಶರಣಾದ ಘಟನೆ ನಿನ್ನೆ ಸಂಜೆ ನಡೆದಿದೆ, ಕುಷ್ಟಗಿ ಪಟ್ಟಣದ ಪುರಸಭೆ ಉಪಾಧ್ಯಕ್ಷೆ  ಶ್ರೀಮತಿ ರಾಜೇಶ್ವರಿ ಆಡೂರು ಸಂಜೆ ತಮ್ಮ ‌ನಿವಾಸದಲ್ಲಿ ನೇಣಿಗೆ ಶರಣಾಗಿದ್ದು ಮಾನಸಿಕ ಖಿನ್ನತೆಯಿಂದ ನೊಂದಿದ್ದರು. ಎನ್ನಲಾಗುತ್ತಿದೆ, ಗುರುವಾರ ಬೆಳಗ್ಗೆ ಪುರಸಭೆ ಸಭಾಂಗಣದಲ್ಲಿ  ಕೊವಿಡ್-19 ಮುಂಜಾಗ್ರತಾ ಸಭೆಯಲ್ಲಿ ಭಾಗವಹಿಸಿದ್ದರು. ನಂತರ ಕೊವಿಡ್-19 ಮುಂಜಾಗ್ರತಾ ಸಭೆ ಮುಗಿಸಿಕೊಂಡು ತಮ್ಮ ನಿವಾಸಕ್ಕೆ ತೆರಳಿದರು. ಶ್ರೀಮತಿ ರಾಜೇಶ್ವರಿಯವರು ಕುಷ್ಟಗಿ ಪಟ್ಟಣದ 16ನೇ ವಾರ್ಡ್ ಪಕ್ಷೇತರ ಸದಸ್ಯೆಯಾಗಿ ಚುನಾಯಿತರಾಗಿದ್ದರು. ತದ ನಂತರ ಕಳೆದ ನವೆಂಬರ್-4 ರಂದು ಪುರಸಭೆ ಉಪಾಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಇವರ ಪತಿ ಬೋದೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕರಾಗಿ  ಸೇವೆಯಲ್ಲಿದ್ದಾರೆ. ಇವರಿಗೆ ಓರ್ವ ಪುತ್ರ ಹಾಗೂ ಮೂವರು ಪುತ್ರಿಯರು ಇದ್ದು, ತುಂಬಿದ ಕುಟುಂಬವನ್ನು ಯೋಚಿಸದೆ ಮಾನಸಿಕವಾಗಿ ನೇಣಿಗೆ ಶರಣಾಗಿದ್ದಾರೆ, ಇವರ ಆತ್ಮಕ್ಕೆ ಶಾಂತಿ ದೊರೆಯಲಿ, ಕುಟುಂಬಸ್ಥರಿಗೆ ದುಃಖ ಸಹಿಸುವ ಶಕ್ತಿ ಆ ಭಗವಂತ ನೀಡಲಿ, ಪ್ರತಿಯೊಂದು ಸಮಸ್ಯಗಳಿಗೆ ಸಾವೇ ಅಂತೀಮವಲ್ಲ. ಒಂದು ಸಾರಿ ಯೋಚಿಸಿ ನಿಮಗಾಗಿ ನಿಮ್ಮ ಕುಟುಂಬವೆ ಕಾದು ಕುಳಿತಿದೆ,  ವರಧಿ – ಅಮಾಜಪ್ಪ ಹೆಚ್. ಜುಮಲಾಪೂರ

Leave a Reply

Your email address will not be published. Required fields are marked *