ಕ್ರಸ್ಟ್ ಅಳವಡಿಸದ ರಾಜ್ಯ ಸರ್ಕಾರ ಧೋರಣೆ ಖಂಡಿಸಿ ಇಂದು ತುಂಗಭದ್ರಾ ಡ್ಯಾಂ ಮುಂದುಗಡೆ ನಡೆದ ಹೋರಾಟದಲ್ಲಿ ಅನೇಕ ರೈತ ಸಂಘಟಕರು ಭಾಗವಹಿಸಿದ್ದರು.
ಮನವಿ ಪಡೆದುಕೊಡು ಚರ್ಚಿಸಿದ
ಅಧಿಕಾರಿಗಳನ್ನು ರೈತರು ತೀವ್ರ ತರಾಟೆಗೆ ತೆಗೆದುಕೊಂಡು ಆಕ್ರೋಶ ವ್ಯಕ್ತಪಡಿಸಿದರು.
ಪಕ್ಷಾತೀತ ರೈತರ ಹೋರಾಟ ಸಮಿತಿ-ರಾಯಚೂರು, ಕೊಪ್ಪಳ, ವಿಜಯನಗರ, ಬಳ್ಳಾರಿ
*****
ತುಂಗಭದ್ರಾ ಜಲಾಶಯ ಮರೆತು, ಹಬ್ಬಗಳ ಸಂಭ್ರಮದಲ್ಲಿ ಬಿಜಿಯಾದ ರಾಜಕಾರಣಿಗಳ ಧೋರಣೆ ಖಂಡಿಸಲೇಬೇಕು.
ಬೇಸಿಗೆ ಬೆಳೆಗೆ ನೀರು ಹರಿಸಲು ಆಗ್ರಹಿಸಿ ! ಮೇ, ಜೂನ್ ತಿಂಗಳಲ್ಲಿ ಕ್ರಸ್ಟ್ ಗೇಟ್ ಅಳವಡಿಸಲು ಒತ್ತಾಯಿಸಿ ! ಇಂದು (ಸೆಪ್ಟೆಂಬರ್ 8, 2025 ರಂದು) ತುಂಗಭದ್ರಾ ಡ್ಯಾಂ ನ ಕೇಂದ್ರ ಕಛೇರಿ ಮುಂದುಗಡೆ ರೈತರ ಬೃಹತ್ ಪ್ರತಿಭಟನೆ ನಡೆಯಿತು.
ಪಕ್ಷಾತೀತ ರೈತರ ಹೋರಾಟ ಸಮಿತಿ ನೇತೃತ್ವದಲ್ಲಿ ನಡೆದ ಈ ಹೋರಾಟದಲ್ಲಿ ಅನೇಕ ರೈತ ಸಂಘಟಕರು, ಮುಖಂಡರು ಭಾಗವಹಿಸಿದ್ದರು.
ಕಳೆದ 2024ರ ವರ್ಷ ಆಗಸ್ಟ್ 10 ರಂದು 19ನೇ ಕ್ರಸ್ಟ್ ಗೇಟ್ ಮುರಿದು 4 ಜಿಲ್ಲೆಯ ರೈತರಲ್ಲಿ ದೊಡ್ಡ ಆತಂಕ ಉಂಟು ಮಾಡಿತ್ತು. ಹಿರಿಯ ಇಂಜಿನೀಯರ್ ಕನಯ್ಯ ನಾಯ್ಡು ಇತರೆ ತಾಂತ್ರಿಕ ತಜ್ಞರ ನೇತೃತ್ವದಲ್ಲಿ ಒಂದು ವಾರದಲ್ಲಿ ತಾತ್ಕಾಲಿಕ ಗೇಟ್ ಅಳವಡಿಸಿ, ನೀರು ಉಳಿಸಿಕೊಳ್ಳಲಾಗಿತ್ತು.
ರಾಜ್ಯ ಸರ್ಕಾರ, ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡರೆ, ಸಾವಿರ ವರ್ಷ ಆಯುಷ್ಯ ಎನ್ನುವ ಗಾದೆಯಂತೆ, ನಂತರ ಜಲಾಶಯವನ್ನು ಮರೆತೇ ಬಿಟ್ಟಿತು.
70 ವರ್ಷದ ಹಳೆಯ ಕ್ರಸ್ಟ್ ಗೇಟ್ ಗಳು ತುಕ್ಕು ಹಿಡಿದಿದ್ದರಿಂದ ಹೊಸ ಗೇಟ್ ಅಳವಡಿಸಲು ತಜ್ಞರು ಸಲಹೆ ಕೊಟ್ಟಿದ್ದರೂ, ಸರ್ಕಾರ ಗಂಭೀರವಾಗಿ ಪರಿಗಣಿಸಲಿಲ್ಲ.
ಜಲ ಸಂಪನ್ಮೂಲ ಸಚಿವರು ಮತ್ತು ಉಪ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ ಅವರು, ಕೇಂದ್ರ ಮತ್ತು ತೆಲಂಗಾಣ, ಆಂಧ್ರಪ್ರದೇಶ ರಾಜ್ಯಗಳು ಹಣ ಕೊಡದಿದ್ದರೂ ಕೂಡ, ರಾಜ್ಯ ಸರ್ಕಾರವೆ ಕ್ರಸ್ಟ್ ಗೇಟ್ ಅಳವಡಿಸಿ ದುರಸ್ತಿ ಕಾರ್ಯ ಮಾಡುವುದಾಗಿ ವಾಗ್ದಾನ ಮಾಡಿದ್ದರು.
ಒಂದು ವರ್ಷ ಕಳೆದರೂ ಕ್ರಸ್ಟ್ ಗೇಟ್ ಅಳವಡಿಸುವ ಕಾರ್ಯ ಮಾಡದೆ, ಕೋಟ್ಯಾಂತರ ಜನರ ಬದುಕಿಗೆ ಆಸರೆಯಾಗಿರುವ ತುಂಗಭದ್ರಾ ಡ್ಯಾಂ ನ್ನು ನಿರ್ಲಕ್ಷಿಸಲಾಯಿತು.
ಕ್ರಸ್ಟ್ ಗೇಟ್ ತುಕ್ಕು ಹಿಡಿದು ದುರ್ಬಲಗೊಂಡ ಕಾರಣ 105 ಟಿಎಂಸಿ ನೀರು ಸಂಗ್ರಹ ಸೇರಿಕೊಳ್ಳಲು ಸಾಧ್ಯವಾಗದೆ, 85 TMC ನೀರು ಮಾತ್ರ ಉಳಿಸಿಕೊಂಡು 250 ಟಿಎಂಸಿ ನೀರು ನದಿಗೆ /ಸಮುದ್ರಕ್ಕೆ ಹರಿಸಲಾಯಿತು.
ರಾಜ್ಯ ಸರ್ಕಾರ ದಸರಾ ದರ್ಬಾರಿನಲ್ಲಿ ಬಿಜಿಯಾದರೆ, ವಿರೋಧ ಪಕ್ಷಗಳು ಗಣೇಶ ಚತುರ್ಥಿ ಹಬ್ಬದ ಸಂಭ್ರಮದಲ್ಲಿ ತೊಡಗಿಕೊಂಡಿದ್ದರಿಂದ ರೈತರ ಗೋಳು ಕೇಳುವವರೇ ಇಲ್ಲವಾಗಿದೆ.
ತುಂಗಭದ್ರಾ ಜಲಾಶಯದ ನೀರಿನ ರಾಜಕೀಯ ಮಾಡಿಕೊಂಡು ಆಯ್ಕೆಯಾಗುವ ರಾಯಚೂರು, ಕೊಪ್ಪಳ, ವಿಜಯ ನಗರ ಬಳ್ಳಾರಿ ಜಿಲ್ಲೆಯ ಶಾಸಕರು, ಸಂಸದರು ಸರ್ಕಾರಕ್ಕೆ ಒತ್ತಾಯಿಸದೆ ಮೌನ ವಹಿಸಿದ್ದಾರೆ.
ಎಡದಂಡೆ, ಬಲದಂಡೆ ಕಾಲುವೆ ನೀರಿನ ರಾಜಕೀಯದಿಂದ ಶಾಸಕರಾಗಿ, ಗೆಲ್ಲುವ ಮತ್ತು ಸೋಲುವ ರಾಜಕೀಯ ಮುಖಂಡರು ಗಣಪತಿ ಚತುರ್ಥಿ, ದಸರಾ ಸಂಭ್ರಮದಲ್ಲಿ ತೊಡಗಿಕೊಂಡು, ಕ್ರಸ್ಟ್ ಗೇಟ್ ಅಳವಡಿಕೆ ಸೇರಿದಂತೆ ರೈತರ ಸಮಸ್ಯೆಗಳ ನಿರ್ಲಕ್ಷ್ಯಿಸಿರುವುದು ದುರಂತದ ಸಂಗತಿಯಾಗಿದೆ.
ಸರ್ಕಾರ ಕ್ರಷ್ಟ್ ಗೇಟ್ ಗಳ ಅಳವಡಿಸುವ ಕಾರ್ಯ ಮಾಡದೆ ನಿರ್ಲಕ್ಷ್ಯಿಸಿದ ಕಾರಣ, ಹತ್ತಾರು ಲಕ್ಷ ಎಕರೆ ಭೂಮಿಯ ರೈತರು ಎರಡನೆ ಬೆಳೆ ಬೆಳೆಯುವ ಅವಕಾಶ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸರ್ಕಾರದ ನಿರ್ಲಕ್ಷ್ಯ,ದಿಂದ ರೈತರ ಕೃಷಿ, ವ್ಯಾಪಾರ, ಉದ್ದಿಮೆ ಕ್ಷೇತ್ರ ಮತ್ತು ಕೂಲಿ ಕಾರ್ಮಿಕರು ಸಾವಿರಾರು ಕೋಟಿ ರೂ, ನಷ್ಟ ಅನುಭವಿಸುವಂತಾಗಿದೆ.
ಸರ್ಕಾರ, ನಿದ್ದೆಯಿಂದ ಎದ್ದು ಯುದ್ದೋಪಾದಿಯಲ್ಲಿ ಕ್ರಷ್ಟ್ ಗೇಟ್ ಅಳವಡಿಸುವ ಕಾರ್ಯಕ್ಕೆ ಮುಂದಾಗಬೇಕು. ಎರಡನೇ ಬೆಳೆ ಬೆಳೆಯಲು ನೀರು ಹರಿಸಬೇಕೆಂದು ಒತ್ತಾಯಿಸುತ್ತೇವೆ.
ಹಕ್ಕೊತ್ತಾಯಗಳು
1) ಈ ವರ್ಷ ನಿರೀಕ್ಷೆಗೂ ಮೀರಿ ಹೆಚ್ಚಿನ ಒಳ ಹರಿವು ಇರುವುದರಿಂದ ಎರಡನೇ ಕೃಷಿಬೆಳೆಗೆ ನೀರು ಹರಿಸಬೇಕು.
2) ಈ ವರ್ಷ 19ನೇ ಕ್ರಷ್ಟ್ ಗೇಟ್ ಮತ್ತು ದುರ್ಬಲಗೊಂಡಿರುವ 6ನೇ ಕ್ರಷ್ಟ್ ಗೇಟ್ ಗಳನ್ನು ಮಾತ್ರ ಬದಲಾಯಿಸುವ ತೀರ್ಮಾನ ಮಾಡಬೇಕು. ಈ 6 ಗೇಟ್ ಗಳನ್ನು 2026 ಮೇ, ಜೂನ್ ತಿಂಗಳಲ್ಲಿ ಅಳವಡಿಸಬೇಕು.
ಇನ್ನುಳಿದ ಗೇಟ್ ಗಳನ್ನು 2027ರ ಅವಧಿಯಲ್ಲಿ ಅಳವಡಿಸುವ ಯೋಜನೆ ಕೈಗೆತ್ತಿಕೊಳ್ಳಬೇಕು.
3) ಕ್ರಷ್ಟ್ ಗೇಟ್ ತಯಾರಿಸುವ, ಮತ್ತು ಅಳವಡಿಸುವ ಕಾರ್ಯವನ್ನು ಒಂದೇ ಕಂಪನಿಗೆ ಕೊಟ್ಟಿರುವ ತೀರ್ಮಾನ ಬದಲಾಯಿಸಿ, ರಾಷ್ಟ್ರೀಯ ಅಂತಾರಾಷ್ಟ್ರೀಯ 6 ಕಂಪನಿಗಳಿಗೆ ಜವಾಬ್ದಾರಿ ವಹಿಸಬೇಕು.
4) ಕ್ರಷ್ಟ್ ಗೇಟ್ ಗಳನ್ನು ತಯಾರಿಸುವ ಕಂಪನಿಗಳ ಮೇಲೆ ತೀವ್ರ ಒತ್ತಡ ಹಾಕಬೆಕು ಮತ್ತು ಅತ್ಯಂತ ಶೀಘ್ರವಾಗಿ ಹಣ ಬಿಡುಗಡೆ ಮಾಡಬೇಕು.
5) ತುಂಗಭದ್ರಾ ಎಡದಂಡೆ ಮೇಲ್ಮಟ್ಟದ ಭಾಗದಲ್ಲಿ ಅಕ್ರಮವಾಗಿ ನೀರು ಬಳಕೆ ಮಾಡಿಕೊಳ್ಳುವುದನ್ನು ನಿಷೇಧಿಸಬೇಕು. ಮಾನ್ವಿ, ಸಿರವಾರ, ರಾಯಚೂರ ಸೆರಿದಂತೆ ಕಾಲುವೆ ಕೊನೆಯಿ ಭಾಗದದ ರೈತರ ಭೂಮಿಗೆ ಸಮರ್ಪಕವಾಗಿ ನೀರು ಹರಿಸಬೇಕು.
6) ನವಲಿ ಸಮಾನಂತರ ಜಲಾಶಯ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಬೇಕು.