ಭಕ್ತರ ಪೊರೈವ ಅಯೋಧ್ಯೆಯ ಶ್ರೀರಾಮ

Spread the love

ಭಕ್ತರ ಪೊರೈವ ಅಯೋಧ್ಯೆಯ ಶ್ರೀರಾಮ

ರಘುಕುಲ ಶ್ರೇಷ್ಠ ನಂದನ ಶ್ರೀರಾಮ

ಭಕ್ತರ ಎದೆಯಲಿ ನಿನ್ನೆಯ ನಾಮ

 ಜಗವ ಗೆದ್ದ ನೀ ಪುರಷೋತ್ತಮ

ಹೃದಯದಿ ಮೆರೆಸಿದನು ಶ್ರೀಹನುಮ

 

ಚೈತ್ರ ಮಾಸದ ಶುಕ್ಲ ಪಕ್ಷ ನವಮಿ

ಭುವಿಗೆ ಅವತರಿಸಿದ ಮಹಾ ಸ್ವಾಮಿ

ಜಗದ ಜನರನು ಪೊರೆಯಲು ಬಂದ

ಧಮ೯ ರಕ್ಷಣೆಯ ಹೊನಲು ತಂದ

 

ಆದಶ೯ ಗುಣಗಳ ದೇವ ಶ್ರೀ ರಾಮ

ಭರತಖಂಡ ನಿನ್ನಿಂದ ಪುಣ್ಯಧಾಮ

ತಮ್ಮಂದಿರ ಪ್ರಿಯ ಅಣ್ಣನು ರಾಮ

ಕೊಟ್ಟ ಭಾಷೆಗೆ ಘನತೆ ಮೆರೆದ ರಾಮ

 

ಮಹಾವಿಷ್ಣುವಿನ ಅವತಾರವು ಶ್ರೀರಾಮ

ಲವಕುಶ ಪುತ್ರರ ಜನಕನು ಶ್ರೀರಾಮ

ಪಾವನ ಭೂಮಿ ಅಯೋಧ್ಯೆಯ ಶ್ರೀರಾಮ

ಭಕ್ತರ ಕಾಪಾಡುವ ಜಯರಾಮ ಶ್ರೀರಾಮ

 

ದಶರಥ ಕೌಶಲ್ಯರ ಜೇಷ್ಠ ಪುತ್ರ ಶ್ರೀರಾಮ

ಆದಶ೯ ಸೀತೆಯ ಪತಿರಾಯ ಶ್ರೀರಾಮ

ಮೌಲ್ಯ ಮೆರೆದು ವನವಾಸಗೈದ ಶ್ರೀರಾಮ

ದುಷ್ಟರ ಸಂಹವರಿಸಿದ ಮನುಮನ ಶ್ರೀರಾಮ

ಮಹಾವಿಷ್ಣುವಿನ ಅವತಾರವು ಶ್ರೀರಾಮ

ಪಾವನ ಭೂಮಿ ಅಯೋಧ್ಯೆಯ ಶ್ರೀರಾಮ

ಲವ ಕುಶ ಪುತ್ರರ ಜನಕನು ಸೀತಾರಾಮ

ಭಕ್ತರ ಪೊರೈವ ಜಯರಾಮ ಶ್ರೀ ರಾಮ

*  ರತ್ನಾ ಎಂ ಅಂಗಡಿ 🏽

      ಹುಬ್ಬಳ್ಳಿ

Leave a Reply

Your email address will not be published. Required fields are marked *