ಎಸ್‌ಸಿ, ಎಸ್‌ಟಿ ಜಾಗೃತಿ ಸಭೆಗಳಿಗೆ ಪೊಲೀಸ್ ಅಧಿಕಾರಿಗಳು ಕಡ್ಡಾಯ ಹಾಜರಾಗುವಂತೆ ಡಿಜಿಪಿಗೆ ಪತ್ರ.
ಬೆಂಗಳೂರು: 01, ರಾಜ್ಯದಲ್ಲಿ ಅನುಸೂಚಿತ ಜಾತಿ, ಅನುಸೂಚಿತ ಬುಡುಕಟ್ಟುಗಳ
ದೌರ್ಜನ್ಯ ತಡೆ ಕಾಯ್ದೆಯಲ್ಲಿ ರಚಿಸಿರುವ ಜಿಲ್ಲಾ ಮತ್ತು ಉಪ ವಿಭಾಗ ಮಟ್ಟದ ಜಾಗೃತಿ ಮತ್ತು ಮೇಲುಸ್ತುವಾರಿ ಸಮಿತಿ ಸಭೆಗಳಿಗೆ ರಾಜ್ಯದ ಪೊಲೀಸ್ ಅಧಿಕಾರಿಗಳು ಕಡ್ಡಾಯ ಹಾಜರಾತಿಯಾಗಲು ಸೂಕ್ತ ಆದೇಶ ಹೊರಡಿಸುವಂತೆ ರಾಜ್ಯದ ಪೊಲೀಸ್ ಮಹಾನಿರ್ದೇಶಕ ಮತ್ತು ಮಹಾ ನಿರೀಕ್ಷಕರಾದ ಡಾ|| ಎಂ. ಎ. ಸಲೀಂರವರಿಗೆ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯರಾದ ಮೋಹನ್ ಕುಮಾರ್ ದಾನಪ್ಪನವರು ಪತ್ರ ಬರೆದಿದ್ದಾರೆ!
ಎಸ್‌ಸಿ, ಎಸ್‌ಟಿ ಸಮುದಾಯದವರ ಮೇಲಾಗುವ ದೌರ್ಜನ್ಯ, ಜಾತಿ ನಿಂದನೆ, ಅಸ್ಪೃಶ್ಯತೆ ಆಚರಣೆಯಂತಹ ಪ್ರಕರಣಗಳ ಸ್ಥಿತಿಗತಿಗಳ ಬಗ್ಗೆ ಮೇಲ್ವಿಚಾರಣೆ ಮತ್ತು ದಲಿತ ಸಮುದಾಯದವರ ಕುಂದುಕೊರತೆಗಳ ಹಾಗೂ ದೌರ್ಜನ್ಯ ತಡೆ ಕಾಯ್ದೆಯ ಬಗ್ಗೆ ಜಾಗೃತಿ ಮೂಢಿಸುವ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಜಿಲ್ಲಾ ಮಟ್ಟದ ಸಮಿತಿಗೆ ಆಯಾ ಜಿಲ್ಲೆಯ ಪೊಲೀಸ್ ಅಧೀಕ್ಷಕರುಗಳು(ಎಸ್ಪಿ) ಪದನಿಮಿತ್ತ ಸದಸ್ಯರುಗಳಾಗಿದ್ದು, ಮತ್ತು ಆಯಾ ಜಿಲ್ಲೆಯ ಸಹಾಯಕ ಆಯುಕ್ತರ ಅಧ್ಯಕ್ಷತೆಯ ಉಪ ವಿಭಾಗ ಮಟ್ಟದ ಸಮಿತಿಗೆ ಆಯಾ ಉಪ ವಿಭಾಗದ ವ್ಯಾಪ್ತಿಗೊಳಪಡುವ ಉಪ ಪೊಲೀಸ್ ಅಧೀಕ್ಷಕರುಗಳು (ಡಿವೈಎಸ್ಪಿ) ಪದನಿಮಿತ್ತ ಸದಸ್ಯರುಗಳಾಗಿದ್ದು, ಆದರೆ ಸದರಿ ಕಾಯ್ದೆ-1995ರ ನಿಯಮ-17ರಡಿಯಲ್ಲಿ ರಚನೆಯಾಗಿರುವ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಮೇಲ್ವಿಚಾರಣೆ ಸಮಿತಿಯ ಸಭೆಯಲ್ಲಿ ದೌರ್ಜನ್ಯ ಪ್ರಕರಣಗಳ ಸ್ಥಿತಿಗತಿಗಳ ಬಗ್ಗೆ ಚರ್ಚಿಸಲು ಪದನಿಮಿತ್ತ ಸದಸ್ಯರುಗಳಾದ ಆಯಾ ಜಿಲ್ಲೆಯ ಪೊಲೀಸ್ ಅಧೀಕ್ಷಕರುಗಳು ಮತ್ತು 17(ಎ)ರಡಿಯಲ್ಲಿ ರಚನೆಯಾಗಿರುವ ಉಪ ವಿಭಾಗ ಮಟ್ಟದ ಜಾಗೃತಿ ಸಮಿತಿಗೆ ಆಯಾ ಉಪ ವಿಭಾಗದ ವ್ಯಾಪ್ತಿಗೊಳಪಡುವ ಡಿವೈಎಸ್ಪಿಗಳು ಪದನಿಮಿತ್ತ ಸದಸ್ಯರುಗಳಾಗಿದ್ದು ಸಭೆಯಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳದೆ ಗೈರಾಗುತ್ತಿರುವುದಾಗಿ ಸದರಿ ಸಮಿತಿಯ ಕೆಲವು ಅಧಿಕಾರೇತರ ಸದಸ್ಯರುಗಳು ಮತ್ತು ಸಮುದಾಯದ ಮುಖಂಡರುಗಳು ಆಕ್ರೋಶ ವ್ಯಕ್ತಪಡಿಸಿರುತ್ತಾರೆ,
ಇತ್ತಿಚ್ಚೆಗೆ ರಾಜ್ಯ ಸರ್ಕಾರ ಎಸ್‌ಸಿ,ಎಸ್‌ಟಿ ಸಮುದಾಯದವರ ಮೇಲೆ ದೌರ್ಜನ್ಯವೆಸಗುವ ಆರೋಪಿಗಳ ವಿರುದ್ಧ ತ್ವರಿತವಾಗಿ ಕಾನೂನು ಕ್ರಮ ಕೈಗೊಳ್ಳಲು ಮತ್ತು ಸದರಿ ಕಾಯ್ದೆಯನ್ನು ಪರಿಣಾಮಕಾರಿಯಾಗಿಸಲು ರಾಜ್ಯದಲ್ಲಿ 33 ಡಿಸಿಆರ್‌ಇ ವಿಶೇಷ ಘಟಕಗಳನ್ನು ತೆರೆದು ಪೊಲೀಸ್ ಠಾಣೆಗಳ ಅಧಿಕಾರಗಳನ್ನು ನೀಡಿರುವುದು ಇತಿಹಾಸ,
ಆದ್ದರಿಂದ ಅನುಸೂಚಿತ ಜಾತಿ, ಅನುಸೂಚಿತ ಬುಡಕಟ್ಟುಗಳ (ದೌರ್ಜನ್ಯ ಪ್ರತಿಬಂದ) ಜಿಲ್ಲಾ ಮಟ್ಟದ ಮತ್ತು ಉಪ ವಿಭಾಗ ಮಟ್ಟದ ಜಾಗೃತಿ ಮತ್ತು ಮೇಲ್ವಿಚಾರಣಾ ಸಮಿತಿ ಸಭೆಯಲ್ಲಿ ಪದನಿಮಿತ್ತ ಸದಸ್ಯರುಗಳಾದ ಆಯಾ ಜಿಲ್ಲಾ ಪೊಲೀಸ್ ಅಧೀಕ್ಷಕರುಗಳು ಮತ್ತು ಆಯಾ ಉಪ ವಿಭಾಗದ ವ್ಯಾಪ್ತಿಗೊಳಪಡುವ ಡಿವೈಎಸ್ಪಿಗಳು ಕಡ್ಡಾಯವಾಗಿ ಪಾಲ್ಗೊಳ್ಳುವಂತೆ ಸೂಕ್ತ ನಿರ್ದೇಶನ/ಸುತ್ತೋಲೆ ಹೊರಡಿಸುವಂತೆ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯರಾದ ಮೋಹನ್ ಕುಮಾರ್ ದಾನಪ್ಪನವರು ಪತ್ರ ಬರೆದಿದ್ದಾರೆ!