ಮಕ್ಕಳ‌ ದಿನಾಚರಣೆ: ಜವಾಹರಲಾಲ್ ಜನ್ಮಜಯಂತಿಯಂದು ಮುಖ್ಯಮಂತ್ರಿ‌ ಸೇರಿ ಗಣ್ಯರ ಸ್ಮರಣೆ…..

Spread the love

ಮಕ್ಕಳ‌ ದಿನಾಚರಣೆ: ಜವಾಹರಲಾಲ್ ಜನ್ಮಜಯಂತಿಯಂದು ಮುಖ್ಯಮಂತ್ರಿ‌ ಸೇರಿ ಗಣ್ಯರ ಸ್ಮರಣೆ…..

ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರ ಜನ್ಮದಿನದಂದು ಅವರಿಗೆ ಗೌರವ ಸಲ್ಲಿಸಲು ನವೆಂಬರ್ 14 ಅನ್ನು ಮಕ್ಕಳ ದಿನಾಚರಣೆ ಎಂದು ಆಚರಿಸಲಾಗುತ್ತದೆ. 1889 ರಲ್ಲಿ ಜನಿಸಿದ ಜವಹರಲಾಲ್ ನೆಹರೂ ಅವರನ್ನು ಮಕ್ಕಳು ಪ್ರೀತಿಯಿಂದ ಚಾಚಾ ನೆಹರು ಎಂದು ಕರೆಯುತ್ತಿದ್ದರು. ಮಕ್ಕಳ ಮೇಲೆ ಅವರಿಗೆ ವಿಶೇಷವಾದ ಪ್ರೀತಿ, ಕಾಳಜಿ. ಮಕ್ಕಳಿಗಾಗಿಯೇ ಸ್ಥಳೀಯ ಸಿನಿಮಾ ಮಾಡಲು ಮತ್ತು ಪ್ರತಿ ಮಕ್ಕಳ ಮನರಂಜನೆಯ ಹಕ್ಕನ್ನು ಉತ್ತೇಜಿಸಲು ನೆಹರು 1955 ರಲ್ಲಿ ಚಿಲ್ಡ್ರನ್ಸ್ ಫಿಲ್ಮ್ ಸೊಸೈಟಿ ಆಫ್ ಇಂಡಿಯಾವನ್ನು ಸ್ಥಾಪಿಸಿದರು. ಮಕ್ಕಳ ಮೇಲಿನ ಅವರ ಪ್ರೀತಿಯ ಜೊತೆಗೆ, ರಾಷ್ಟ್ರವನ್ನು ನಿರ್ಮಿಸಲು ಅವರು ನೀಡಿದ ಕೊಡುಗೆಗಾಗಿ ನೆಹರೂ ಅವರನ್ನು ಗೌರವಿಸಲು ಅವರ ಜನ್ಮ ವಾರ್ಷಿಕೋತ್ಸವದ ದಿನವನ್ನು ಸಹ ಈ ದಿನ ಆಚರಿಸಲಾಗುತ್ತದೆ. ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ನೆಹರೂ ಅವರನ್ನು ನೆನದು ಮಕ್ಕಳ ದಿನಾಚರಣೆಗೆ ಶುಭಕೋರಿದ್ದಾರೆ. ಇದಲ್ಲೆದೆ ರಾಜ್ಯದ ವಿವಿಧ ನಾಯಕರು ಕೂ ನಲ್ಲಿ ಮಕ್ಕಳ ದಿನಾಚರಣೆ ಶುಭಾಶಯ ಕೋರಿದ್ದಾರೆ.

ವರದಿ –  ಹರೀಶ ಶೇಟ್ಟಿ ಬೆಂಗಳೂರು

Leave a Reply

Your email address will not be published. Required fields are marked *