ಪತ್ರಕರ್ತ ರಮೇಶ್ ಗೌಡರ ಮೇಲೆ ಹಲ್ಲೆ – ಬ್ರಷ್ಟಚಾರಿಗಳ ವಿರುದ್ದ ವರದಿ ಮಾಡಿದ್ದೆ ತಪ್ಪಾ..?

Spread the love

ಪತ್ರಕರ್ತ ರಮೇಶ್ ಗೌಡರ ಮೇಲೆ ಹಲ್ಲೆಬ್ರಷ್ಟಚಾರಿಗಳ ವಿರುದ್ದ ವರದಿ ಮಾಡಿದ್ದೆ ತಪ್ಪಾ..?

ಗುಬ್ಬಿ : ಹತ್ತಾರು ವರ್ಷಗಳಿಂದ ಪತ್ರಿಕೆಯ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ರಮೇಶ್ ಗೌಡ ಅವರು ಗುಬ್ಬಿ ತಾಲ್ಲೂಕು ಪತ್ರಿಕಾ ವರದಿಗಾರರಾಗಿ ತಾಲ್ಲೂಕಿನ ಹಲವು ಅಂಕು ಡೊಂಕುಗಳನ್ನು ತಿದ್ದುವಂತ ಕೆಲಸ ನಿರಂತರವಾಗಿ ಮಾಡುತ್ತಿದ್ದರು ತಾಲ್ಲೂಕಿನ ಜನರಿಗೆ ಸಾಮಾಜಿಕ ನ್ಯಾಯ ಒದಗಿಸುವ ಸಲುವಾಗಿ ಇದರ ಜೊತೆ ಸಾಮಾಜಿಕ ಹೋರಾಟಗಾರರಾಗಿ ಗುರುತಿಸಿಕೊಂಡು ಅನ್ಯಾಯದ ವಿರುದ್ಧ ಹೋರಾಟ ಮಾಡಿರುವ ಹಲವು ಉದಾಹರಣೆಗಳಿವೆ.ತಾಲ್ಲೂಕಿನಲ್ಲಿ ಆಗುತ್ತಿದ್ದ ಅನ್ಯಾಯದ ಬಗ್ಗೆ ಧ್ವನಿ ಎತ್ತುತ್ತಿದ್ದರು‌. ಕೆಲವು ದಿನಗಳ ಹಿಂದೆ ನೀರು ಪೋಲಾಗುವ ಬಗ್ಗೆ ದೂರು ಹೇಳಿದ ಮೆಡಿಕಲ್ ವಿದ್ಯಾರ್ಥಿಗಳಿಗೆ ಬೆದರಿಕೆಯೊಡ್ಡಿದ ಪ.ಪಂ ಮುಖ್ಯಾಧಿಕಾರಿ ಯೋಗೀಶ್ ಅವರ ಬಗ್ಗೆ ಸವಿಸ್ತಾರವಾದ ವರದಿ ಮಾಡಲಾಯಿತು.ಇದಕ್ಕೆ ಸಂಬಂಧಿಸಿದಂತೆ ಹತ್ತು ಯುವಕರ ದುರ್ಷ್ಕಮಿ ತಂಡವೊಂದು ಏಕಾಏಕಿ ಪತ್ರಕರ್ತ ರಮೇಶ್ ಗೌಡರ ಮೇಲೆ ಹಲ್ಲೆ ಮಾಡಿ ಬೈಕ್ ಅನ್ನು ಜಖಂ ಗೊಳಿಸಿದ್ದಾರೆ. ಏಕಾಏಕಿ ರಮೇಶ್ ಗೌಡರ ಮೇಲೆ ಹಲ್ಲೆ ಮಾಡಿದ್ದಾರೆ.ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡುವ ವರದಿಗಾರನಿಗೆ ರಕ್ಷಣೆ ಇಲ್ಲವಾದರೆ ನ್ಯಾಯಸಮ್ಮತ ವರದಿ ಮಾಡಲು ಹೇಗೆ ಸಾಧ್ಯ ಎನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ .ಮಾನವೀಯತೆ ಇಲ್ಲದೆ ಏಕಾಏಕಿ ಹಲ್ಲೆ ಮಾಡಿದ್ದು ತೀವ್ರವಾದ ಗಾಯಗಳಾಗಿವೆ ಹಲ್ಲೆಗೆ ಒಳಗಾದ ರಮೇಶ್ ಗೌಡರ ಮೊಬೈಲ್ ಕಿತ್ತುಕೊಂಡು ಹೋಗಿದ್ದಾರೆ.ಹೆಚ್ಚಿನ ಚಿಕಿತ್ಸೆಗೆ ತುಮಕೂರು ಜನರಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಈಗಾಗಲೇ ಪ್ರಕರಣ ದಾಖಲಾಗಿದೆ. ಪತ್ರಕರ್ತ ರಮೆಶ್ ಗೌಡರ ಮೇಲೆ ಹಲ್ಲೆಯ ವಿಷಯ ತಿಳಿದಿದ್ದು ಈಗಾಗಲೇ ಇನ್ಸ್‌ಪೆಕ್ಟರ್ ಅವರ ಬಳಿ ಮಾತನಾಡಿದ್ದೇನೆ. ಆರೋಪಿಗಳನ್ನು ಕೂಡಲೆ ಬಂಧಿಸುತ್ತೇವೆ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಾಪುರವಾಡ್ ತಿಳಿಸಿದ್ದಾರೆ.

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *