ಗಣೇಶ ಮೂರ್ತಿ ತಯಾರಕರ ಒಕ್ಕೂಟದ ಸದಸ್ಯತ್ವದ ಅಭಿಯಾನಕ್ಕೆ ಗೋಕಾಕ್ ಸಾಹುಕಾರ ಸತೀಶ ಜಾರಕಿಹೊಳಿ ಚಾಲನೆ….

Spread the love

ಗಣೇಶ ಮೂರ್ತಿ ತಯಾರಕರ ಒಕ್ಕೂಟದ ಸದಸ್ಯತ್ವದ ಅಭಿಯಾನಕ್ಕೆ ಗೋಕಾಕ್ ಸಾಹುಕಾರ ಸತೀಶ ಜಾರಕಿಹೊಳಿ ಚಾಲನೆ….

ಗದಗ ಜಿಲ್ಲೆಯಲ್ಲಿ ಇಂದು ಕರ್ನಾಟಕ ರಾಜ್ಯ ಪರಿಸರ ಸ್ನೇಹಿ ಗಣೇಶ ಮೂರ್ತಿ ತಯಾರಕರ ಒಕ್ಕೂಟದ ಸದಸ್ಯತ್ವದ ಅಭಿಯಾನಕ್ಕೆ ಇಂದು ಗೋಕಾಕ್ ಸಾಹುಕಾರ ಸತೀಶ ಜಾರಕಿಹೊಳಿ ಚಾಲನೆ ನೀಡಿ ಮಾತನಾಡಿ ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿ  ಕಲಾವಿದರು  ಕಳೆದ ಹಲವಾರು ದಶಕಗಳಿಂದ  ತಮ್ಮ ಕಲೆಯಿಂದ  ವಿಶಿಷ್ಟ ಕೊಡುಗೆ ನೀಡಿದ್ದಾರೆ ಕಳೆದ ಹಲವು ವರ್ಷಗಳ ಹಿಂದೆ ಪ್ಲಾಸ್ಟರ್ ಆಫ್ ಪ್ಯಾರಿಸ್ ಮೂರ್ತಿಗಳ ತಯಾರಿಕೆಯಿಂದ ಈ ಕಲೆಯು ನಶಿಸಿ ಹೋಗುತ್ತಿತ್ತು ಆದರೆ ಸರ್ಕಾರ ಅದನ್ನು ನಿಷೇಧಿಸುವ ಮೂಲಕ ಕಲಾವಿದರಿಗೆ ಅನುಕೂಲ ಮಾಡಿಕೊಟ್ಟಿದೆ. ಬೇರೆ ಬೇರೆ ಕಲಾವಿದರುಗಳಿಗೆ ದೊರಕುವ ಗುರುತಿನ ಚೀಟಿ  ವೃದ್ಧಾಪ್ಯ, ವೇತನ, ದಂತಹ  ಸೌಲಭ್ಯಗಳು ಮಣ್ಣಿನ ಮೂರ್ತಿ ತಯಾರಕರಿಗೂ ಸಿಗುವಂತಾಗಬೇಕು ಈ ಸದಸ್ಯತ್ವ ಅಭಿಯಾನವನ್ನು ರಾಜ್ಯದ ಕಲಾವಿದರು ಇದರ ಸದುಪಯೋಗ ಪಡೆದುಕೊಳ್ಳಿ  ಎಂದರು, ಜೊತೆಗೆ ಇದಕ್ಕೆ ಚಾಲನೆ ನೀಡಿದ್ದು ನನಗೆ ಸಂತಸ ತಂದಿದೆ ಎಂದು ಹೇಳಿದರು ಈ ಸಂದರ್ಭದಲ್ಲಿ ಕೊಣ್ಣೂರಿನ ಹಿರಿಯರ ಕಲಾವಿದರಾದ ಶಂಕರ ಕುಂಬಾರ.ಬಸವರಾಜ ಕುಂಬಾರ ಗೋಪಾಲ ಕುಂಬಾರ ಚನ್ನಬಸವ ತೀರಕಣ್ಣವರ ಯಮನಪ್ಪ ಕುಂಬಾರ. ಸುರೇಶ ಕುಂಬಾರ. ನಾಗೇಶ ಕುಂಬಾರ ರಾಜ್ಯ ಅಧ್ಯಕ್ಷರಾದ ಮೋಹನ ಚವ್ಹಾಣ. ರಾಜ್ಯ ಕಾರ್ಯದರ್ಶಿ ಮುತ್ತಣ್ಣ ಭರಡಿ. ಮಲ್ಲಿಕಾರ್ಜುನ ಅನಿಗೋಳ. ಶಂಕರ ಕಮ್ಮಾರ. ಭಿಮ್ಮಪ್ಪ ಕಮ್ಮಾರ. ಸೇರಿದಂತೆ ಹಲವಾರು ಕಲಾವಿದರು ಉಪಸ್ಥಿತರಿದ್ದರು.

ವರದಿ –  ಮುತ್ತಣ್ಣ ಭರಡಿ ಗದಗ

Leave a Reply

Your email address will not be published. Required fields are marked *