ನೂತನ ಮಸ್ಕಿ ತಾಲೂಕಿನ ಮಟ್ಟೂರು ಗ್ರಾಮದಲ್ಲಿ ಸಂಗ್ರಹಿಸಿದ್ದ 514 ಚೀಲ ನಕಲಿ ಡಿಎಪಿ ಗೊಬ್ಬರ ಅಧಿಕಾರಿಗಳಿಂದ ವಶ ..!

Spread the love

ನೂತನ ಮಸ್ಕಿ ತಾಲೂಕಿನ ಮಟ್ಟೂರು ಗ್ರಾಮದಲ್ಲಿ ಸಂಗ್ರಹಿಸಿದ್ದ 514 ಚೀಲ ನಕಲಿ ಡಿಎಪಿ ಗೊಬ್ಬರ ಅಧಿಕಾರಿಗಳಿಂದ ವಶ ..!

ರಾಯಚೂರು ಜಿಲ್ಲೆಯ ನೂತನ ಮಸ್ಕಿ ತಾಲೂಕಿನ ಮಟ್ಟೂರು ಗ್ರಾಮದ ಖಾಸಗಿ ಗೋದಾಮಿನಲ್ಲಿ ಅಕ್ರಮವಾಗಿ ಶೇಖರಿಸಿದ್ದ ೫೧೪ ಚೀಲ ನಕಲಿ ಡಿ.ಎ.ಪಿ ಗೊಬ್ಬರವನ್ನು ತಾಲೂಕು ಕೃಷಿ ಅಧಿಕಾರಿಗಳಾದ ಮಂಜುಳಾ ಬಸರಡ್ಡಿ ಮತ್ತು ಮಹಾಂತೇಶ ಹವಲ್ದಾರ ಬುಧವಾರ ತಡ ರಾತ್ರಿ ವಶಪಡಿಸಿಕೊಂಡ ಘಟನೆ ನಡೆದಿದೆ. ಜಿಲ್ಲೆಯಲ್ಲಿ ಕಳೆದ ಎರಡು ಮೂರು ವರ್ಷಗಳಿಂದ ನಕಲಿ ಗೊಬ್ಬರ ಮಾರಾಟ ಮಾಡುವ ಜಾಲ ಅಸ್ಥಿತ್ವದಲ್ಲಿದೆ. ರೈತರ ಬೆಳೆ ಕೈಗೆಟುಕದೆ ಹಾನಿಗೋಳಗಾಗುತ್ತಿದ್ದರು ಬುಧವಾರ ಅಕ್ರಮವಾಗಿ ಗೊಬ್ಬರ ದಾಸ್ತಾನು ಮಾಡಿರುವದು ಗಂಗಾವತಿ ಪೋಲಿಸರಿಂದ ಕೃಷಿ ಅಧಿಕಾರಿಗಳಿಗೆ ಮಾಹಿತಿ ಸಿಕ್ಕ ನಂತರ ವಶಪಡಿಸಿಕೊಂಡಿದ್ದಾರೆ. ಗಂಗಾವತಿಯಲ್ಲಿ ಅಕ್ರಮವಾಗಿ ನಕಲಿ ಗೊಬ್ಬರ (ಮಣ್ಣು ಮಿಶ್ರಿತ) ತಯಾರಿಸಿ ಕೊಪ್ಪಳ ಮತ್ತು ರಾಯಚೂರು ಜಿಲ್ಲೆಯ ಸಿಂಧನೂರು , ಮಸ್ಕಿ ಭಾಗದಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದರು. ಬುಧವಾರ ಬೆಳಿಗ್ಗೆ ಗಂಗಾವತಿಯಲ್ಲಿ ವಡ್ಡರಹಟ್ಟಿಯ ಸಿದ್ದನಗೌಡ ಅವರಿಗೆ ಸೇರಿದ ಗೋಡಾನಲ್ಲಿ ಪ್ರಶಾಂತ, ರಾಮಚಂದ್ರ ಎನ್ನುವವರು ನಕಲಿ ಡಿಎಪಿ ಗೊಬ್ಬರವನ್ನು ಮಂಗಳ ಕಂಪನಿಯ ೫೦ ಕೆಜಿ. ಚೀಲದಲ್ಲಿ ತುಂಬಿ ಮಾರಾಟ ಮಾಡುತ್ತಿದ್ದರು. ಗಂಗಾವತಿ ಪೊಲೀಸರು ಬಂಧಿಸಿದ ನಂತರ ಅಕ್ರಮವಾಗಿ ಸಂಗ್ರಹಿಸಿದ್ದ ಸ್ಥಳಗಳನ್ನು ಬಾಯಿ ಬಿಟ್ಟಿದ್ದಾರೆ. ಕೋಟ್: ಮಸ್ಕಿ ತಾಲೂಕಿನ ಮಟ್ಟೂರು ಗ್ರಾಮದಲ್ಲಿ ಸಂಗ್ರಹಿಸಿದ್ದ ೫೧೪ ಚೀಲ ನಕಲಿ ಗೊಬ್ಬರ ಅಂದಾಜು ೬ ಲಕ್ಷ ರೂ ಮೌಲ್ಯದ ಗೊಬ್ಬರ ವಶಪಡಿಸಿಕೊಂಡು ಮಸ್ಕಿಯ ಖಾಸಗಿ ಮಳಿಗೆಯಲ್ಲಿ ಸಂಗ್ರಹಿಸಿ ಶೀಲ್ ಮಾಡಲಾಗಿದೆ ಎಂದು ಕೃಷಿ ಅಧಿಕಾರಿ ಮಹಾಂತೇಶ ಹವಲ್ದಾರ ತಿಳಿಸಿದರು. ಮಸ್ಕಿ ಕೃಷಿ ಸಹಾಯಕ ಅಧಿಕಾರಿ ಶರಣಬಸವ ಇದ್ದರು. ಮಟ್ಟೂರಿನಿಂದ ವಶಪಡಿಸಿಕೊಂಡಿದ್ದ ನಕಲಿ ಗೊಬ್ಬರವನ್ನು ಮಸ್ಕಿಯ ಖಾಸಗಿ ಮಳಿಗೆಯಲ್ಲಿ ಶೇಖರಿಸುತ್ತಿರುವದು. ಮನವಿ: (ಪಡಿತರ ಅಕ್ರಮ ಮಾರಾಟಕ್ಕೆ ಕಡಿವಾಣ ಹಾಕಿ-ಕೆಆರ್‌ಎಸ್ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆ ಮತ್ತು ಆಹಾರ ಭದ್ರತೆ ಯೋಜನೆ ಅನುಷ್ಠಾನ ಯೋಜನೆಯ ಆಹಾರ ಪದಾರ್ಥಗಳು ಜಿಲ್ಲೆಯಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆ. ಅಂತವರ ವಿರುದ್ದ ಕಠಿಣ ಕ್ರಮ ಜರುಗಿಸಬೇಕೆಂದು ಕರ್ನಾಟಕ ರೈತ ಸಂಘದ ತಾಲೂಕು ಅಧ್ಯಕ್ಷ ಸಂತೋಷ ಹಿರೇದಿನ್ನಿ ಒತ್ತಾಯಿಸಿದ್ದಾರೆ.) ಈ ಕುರಿತು ಗುರುವಾರ ತಹಸಿಲ್ದಾರ ಬಲರಾಮ ಕಟ್ಟಿಮನಿ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಈ ಕುರಿತು ಈಗಾಗಲೇ ಸಂಬಂಧಿಸಿದವರಿಗೆ ಎಚ್ಚರಿಕೆ ನೀಡಿದ್ದರು ಅಕ್ರಮ ಮಾರಾಟ ಅವ್ಯಹತವಾಗಿ ನಡೆದಿದೆ ಎಂದು ದೂರಿದ್ದಾರೆ. ಕೇಂದ್ರ ಸರ್ಕಾರ ಧೀಡಿರನೇ ರಸಗೊಬ್ಬರ ದರ ಏರಿಕೆ ಮಾಡಿದ್ದು ಸರಿಯಾದ ಕ್ರಮವಲ್ಲ. ಡಿಸೇಲ್, ಪೆಟ್ರೂಲ್ ಮತ್ತು ರಸಗೊಬ್ಬರಗಳ ಬೆಲೆ ಹೆಚ್ಚಳದಿಂದಾಗಿ ರೈತರಿಗೆ ತೊಂದರೆಯಾಗಿದೆ. ಕೂಡಲೇ ಸರ್ಕಾರ ರಸಗೊಬ್ಬರಗಳ ಮೇಲಿನ ದರ ಕಡಿಮೆ ಮಾಡಬೇಕೆಂದು ಒತ್ತಾಯಿಸಿದರು. ಕೆಆರ್ ಎಸ್ ತಾಲೂಕು ಪ್ರಧಾನ ಕಾರ್ಯದರ್ಶಿ ಮಾರುತಿ ಜಿನ್ನಾಪುರ, ಛತ್ರಗೌಡ ಘಂಟೇರ ಹಟ್ಟಿ, ಶರಣಪ್ಪಗೌಡ ಚಿಲ್ಕಾರಾಗಿ, ಹುಲುಗಪ್ಪ, ತಿರುಪತಿ ಮಸ್ಕಿ, ವಿರುಪಣ್ಣ, ಯಮನಪ್ಪ, ದ್ಯಾಮಣ್ಣ, ಯಲ್ಲಪ್ಪ ಹಾಗೂ ಇತರರು ಭಾಗವಹಿಸಿದ್ದರು.

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *