ದಕ್ಷಿಣ ಭಾರತದ ಬಿಜೆಪಿ ನೇತಾರ ಬಿ.ಎಸ್.ವೈ.ಯಡಿಯೂರಪ್ಪನವರು.

Spread the love

ದಕ್ಷಿಣ ಭಾರತದ ಬಿಜೆಪಿ ನೇತಾರ ಬಿ.ಎಸ್.ವೈ.ಯಡಿಯೂರಪ್ಪನವರು.

ದಕ್ಷಿಣ ಭಾರತದ ಬಿಜೆಪಿ ನೇತಾರ,ಯಾರು ಈ ಬಿಜೆಪಿ ನೇತಾರ , ದಕ್ಷಿಣ ಭಾರತಕ್ಕೆ ಏಕೆ ಬಿಜೆಪಿ ನೇತಾರ, ಅಂತ ಎಲ್ಲರ ತಲೆಯಲ್ಲಿ ಗೊಂದಲ ಶುರುವಾಗುತ್ತದೆ ಅಲ್ವಾ, ದಕ್ಷಿಣ ಭಾರತದ ಬಿಜೆಪಿ ನೇತಾರ ಎಂದರೆ ಅವರೇ ನಮ್ಮ ರಾಜ್ಯದ ಇಂದಿನ ಮುಖ್ಯಮಂತ್ರಿ ಬಿ, ಎಸ್ ಯಡಿಯೂರಪ್ಪನವರು ,ಅದು ಹೇಗೆ ದಕ್ಷಿಣ ಭಾರತದ ಬಿಜೆಪಿ ನೇತಾರ ಆಗಲು ಸಾಧ್ಯ ? ದಕ್ಷಿಣ ಭಾರತದಲ್ಲಿ ಬಿಜೆಪಿಯ ಮುಖಂಡರು ಇವರಿಗಿಂತ ರಾಜಕೀಯ ಬುದ್ಧಿವಂತರು , ನಮ್ಮ ಬಿ ,ಎಸ್, ವೈ .ಏಕೆ ಅಂತ ನಿಮ್ಮ ಪ್ರಶ್ನೆ ಅಲ್ವಾ , ನಿಮ್ಮ ಪ್ರಶ್ನೆಗೆ ನಿಧಾನವಾಗಿ ಉತ್ತರ ನೀಡುವೆ ,ಇದರ ಮಧ್ಯದಲ್ಲಿ ಯಡ್ಡಿಯೂರಪ್ಪರ ಬಗ್ಗೆ ತಿಳಿಯೋಣ.ಇವರು ಫೆಬ್ರವರಿ ೨೭,೧೯೪೩ ರಲ್ಲಿ ಬೂಕನಕೆರೆ ಎಂಬ ಊರು ಮಂಡ್ಯ ಜಿಲ್ಲೆಯಲ್ಲಿ ಜನಿಸುವರು , ಅಂದರೆ ನಮ್ಮ ಕರ್ನಾಟಕದವರೇ ಇವರು ಎಂದು ಖಾತ್ರಿ ಆಯಿತು.ಈಗೀನ ಕಾಲದಲ್ಲಿ ಎರಡು ಅಕ್ಷರಗಳ‌ ಸುಂದರ ಹೆಸರನ್ನು ಇಟ್ಟುಕೊಳ್ಳುವ ಜನರಲ್ಲಿ ,ಇವರ ಪೋಷಕರು , ತುಮಕೂರು ಜಿಲ್ಲೆಯ ಯಡಿಯೂರು ಊರಿನಲ್ಲಿ ಇರುವ ಸಿದ್ಧಲಿಂಗೇಶ್ವರ ದೇವರ ಹೆಸರನ್ನು ನಾಮಕರಣ ಮಾಡಿದರು.ತುಂಬಾ ಸರಳತೆಯ ಮನುಷ್ಯ ,ಪದವಿದಾರರು ಅಂತ ಗೂಗಲ್ ನಲ್ಲಿ ನೋಡಿದೆ ,ನನಗೆ ಅಷ್ಟೊಂದು ಗೊತ್ತಿಲ್ಲಾ ಲಿಖಿತ ರೂಪದಲ್ಲಿ ಇರುವುದನ್ನು ನಂಬಿದೆ ಅಷ್ಟೇ , ಹಲವಾರು ಬಾರಿ ಶಾಸಕರಾಗಿ , ವಿಧಾನ ಸಭೆಯ ಸದಸ್ಯರಾಗಿದ್ದರು ನಮ್ಮ ಯಡಿಯೂರಪ್ಪನವರು, ಶಿಕಾರಿಪುರ ಕ್ಷೇತ್ರದಿಂದ ಇವರ ಅತ್ಯುತ್ತಮ ರಾಜಕೀಯ ಜೀವನಹರಪನಹಳ್ಳಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ.

ಯಡಿಯೂರಪ್ಪನವರನ್ನು ಮೊದಲ ಬಾರಿಗೆ ನಾನು ನೇರವಾಗಿ ನೋಡಿದ್ದು ಶ್ರೀ ಸಿದ್ಧಗಂಗಾ ಮಠದಲ್ಲಿ ಏಕೆಂದರೆ ಆಗ ನಾನು ಮಠದ ವಿದ್ಯಾರ್ಥಿ ,ನಮ್ಮ ಮಠಕ್ಕೆ ಯಡಿಯೂರಪ್ಪನವರು ಮನೆಯ ಸದಸ್ಯನಂತೆ ಯಾವಾಗಲೂ ಶ್ರೀಗಳನ್ನು ನೋಡಲು ಬರುತ್ತಿದ್ರು ತುಂಬಾ ಸಂತೋಷಕಾರ ವಿಷಯ,ಶ್ರೀ ಮಠದ ಮನೆ ಮಗ ಕೂಡ ಹೌದ ಎಲ್ಲಾ ರೀತಿಯ ಸಹಾಯ ಸೌಲಭ್ಯಗಳನ್ನು ಮಠಕ್ಕೆ ಮಾಡಿಕೊಡುವ ವ್ಯಕ್ತಿ ಎಂದರೆ ಯಡಿಯೂರಪ್ಪನವರು,ನಾನು ಕೂಡ ಅವರ ಅನುಯಾಯಿ , ರಾಜಕೀಯದಲ್ಲಿ ಅಲ್ಲ,ನಿಜಾ ಜೀವನದಲ್ಲಿ .ಶ್ರೀಗಳ ಜೀವನದಲ್ಲಿ ಇವರು ಕೊನೆ ತನಕ ತಮ್ಮ ಸೇವೆಯನ್ನು ಮಾಡಿದರು , ಕೊನೆಗೆ ಲಿಂಗೈಕ್ಯವಾದ ಸಮಯದಲ್ಲಿ ಪಕ್ಕದಲ್ಲೇ ಇದ್ದು ಎಲ್ಲಾ ಸೇವೆಗಳನ್ನು ಮಾಡಿಕೊಟ್ಟವರು ,ನಮ್ಮ ಯಡಿಯೂರಪ್ಪನವರು .ಈಗ ಕೂಡ ಕಿರಿಯ ಶ್ರೀಗಳಿಗೆ ಸಹಾಯ ಮಾಡುತ್ತಾ ,ಮಕ್ಕಳ ಪ್ರೀತಿಗೆ ಪಾತ್ರರಾಗಿದ್ದಾರೆ .ತಿಂಗಳ ತಿಂಗಳ ಮಠಕ್ಕೆ ಬರುವರು ಅಲ್ವಾ ಆಗ ನಾನು ನೇರವಾಗಿ ಇವರನ್ನು ನೋಡುತ್ತಿದ್ದೆ ಆದರೆ ಈಗ ಸ್ವಲ್ಪ ವಿಮರ್ಶೆ ಮಾಡುವ ಗುಣ ಬಂದಿದೆ ಅಷ್ಟೇ .ಇವರು ರಾಜಕೀಯದಲ್ಲಿ ಸದಾ ಹಸನ್ಮುಖಿ , ರಾಜಕೀಯ ತತ್ವಗಳಲ್ಲಿ , ರಾಜಕೀಯ ಜ್ಞಾನದಲ್ಲಿ ಪ್ರಚಂಡ ನಮ್ಮ ಯಡಿಯೂರಪ್ಪನವರು , ಲಿಂಗಾಯತ ಧರ್ಮಕ್ಕೆ ಸೇರಿದವರಾದರು, ಜಾತಿ ಮತ ಪಂಥ ಧರ್ಮಗಳ ನಡುವಿನ ವ್ಯತ್ಯಾಸ ಇಲ್ಲದೆ ಎಲ್ಲರಿಗೂ ಸಹಾಯ ಮಾಡುವರು ಅಂತ ಎರಡು ಸಲ ಮುಖ್ಯಮಂತ್ರಿ ಆದಾಗ ಕೇಳಿದ್ದೇ , ಎಲ್ಲಾ ಬಡ ಯೋಜನೆಗಳನ್ನು ಕೂಡ ಜಾರಿಗೆ ತಂದಿರುವ ಇವರು ಬಡವರಿಗಾಗಿ ಹೋರಾಟ ಮಾಡುವರು ಅಂತ ನಮ್ಮ ಅಜ್ಜ ಹೇಳುತ್ತಿದ್ದ ಮಾತು ನೆನಪು ಆಯಿತು , ರಾಜಕೀಯ ಚತುರತೆ ಕೂಡ ಇವರ ಗುಣದಲ್ಲಿ ಇದೆ , ಒಟ್ಟಿನಲ್ಲಿ ಒಳ್ಳೆ ಮನಸಿನ ಮನುಷ್ಯ ಯಡ್ಡಿಯೂರಪ್ಪನವರು ಅಂತ ಕೇಳಿರುವೆ. ಈಗ ನಿಮಗೆ ತಿಳಿಸುವೆ , ದಕ್ಷಿಣ ಭಾರತದ ಬಿಜೆಪಿ ನೇತಾರ ಏಕೆ ಅಂತ ಹೇಳಿದೆ ಅಂದ್ರೆ ಭಾರತೀಯ ಜನತಾ ಪಕ್ಷದ ಮುಖಂಡರು ಆದ ಇವರು ಶಿಕಾರಿಪುರ ಕ್ಷೇತ್ರದಲ್ಲಿ ವಿಧಾನ ಸಭೆಯ ಅಭ್ಯರ್ಥಿಯಾಗಿ ನಿಂತು ಬಂಗಾರಪ್ಪನವರನ್ನು ಸೋಲಿಸಿ , ಬಿಜೆಪಿ ಪಕ್ಷದ ಧ್ವಜ ನೆಟ್ಟು ವಿಧಾನ ಸಭೆಯನ್ನು ಪ್ರವೇಶ ಮಾಡುತ್ತಾರೆ, ದಕ್ಷಿಣ ಭಾರತದಲ್ಲೇ ಮೊಟ್ಟ ಮೊದಲು ಬಿಜೆಪಿಯನ್ನು ಅಧಿಕಾರಕ್ಕೆ ತರುವ ಪ್ರಯತ್ನ ಯಡಿಯೂರಪ್ಪನವರಾದ್ದು ಅದಕ್ಕಾಗಿ ದಕ್ಷಿಣ ಭಾರತದ ಬಿಜೆಪಿ ನೇತಾರ ಎಂದು ಹೇಳಿದೆ .1965ರಲ್ಲಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಪ್ರಥಮ ದರ್ಜೆಯ ಗುಮಾಸ್ತರಾಗಿ ವೃತ್ತಿ ಜೀವನ ಆರಂಭಿಸಿದರು, ನಂತರ ಕೆಲಸಕ್ಕೆ ರಾಜೀನಾಮೆ ನೀಡಿ ಶಿಕಾರಿಪುರಕ್ಕೆ ತೆರಳಿ ವೀರಭದ್ರ ಶಾಸ್ತ್ರೀಯವರ ಅಕ್ಕಿ ಗಿರಣಿಯಲ್ಲಿ ಗುಮಾಸ್ತರಾಗಿ ಸೇರಿದರು,ಒಬ್ಬ ಸಾಧಕ ಹಿಂದೆ ನೂರಾರು ಕಷ್ಟಗಳ ಸರಮಾಲೆ ಇರುತ್ತದೆ ಅಂತ ಎಲ್ಲರಿಗೂ ಗೊತ್ತು ,ಇವರು ಕೂಡ ತುಂಬಾ ಕಷ್ಟದಲ್ಲಿ ಜೀವನ ಶೈಲಿ ನಡೆಸಿಕೊಂಡು ಬಂದ ವ್ಯಕ್ತಿ . ಯಡಿಯೂರಪ್ಪನವರು 1970 ರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯವಾಹಕರಾಗಿ ನೇಮಕಗೊಂಡರು ,ಇವರು ಕಾಲೇಜು ಶಿಕ್ಷಣ ಅವಧಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯರು ಕೂಡ ಆಗಿದ್ದರು ಪುರಸಭೆ ಸದಸ್ಯ, ಅಧ್ಯಕ್ಷರಾಗಿ, ಶಾಸಕರಾಗಿ, ಮುಖ್ಯಮಂತ್ರಿಯಾದರು, ವಿರುದ್ಧ ಪಕ್ಷದ ನಾಯಕ ಕೂಡ ಆಗಿಬಿಟ್ಟರು , ಕಾಂಗ್ರೆಸ್ ಸರ್ಕಾರ ಅವಧಿಯಲ್ಲಿ.

ಇವರೇ ನಮ್ಮ ಕರ್ನಾಟಕದ ಬಿಜೆಪಿ ಸರ್ಕಾರವನ್ನು ನಡೆಸಿಕೊಂಡು ಹೋಗುವ ರಥಗಾರ, ಚತುರತೆಗಾರ.ಬಿಜೆಪಿಯ ರಾಜ್ಯ ಮುಖ್ಯಮಂತ್ರಿಯ ಅಭ್ಯರ್ಥಿ. ಇವರು ಅಕ್ರಮ ಗಣಿಗಾರಿಕೆಯಲ್ಲಿ ಪಾಲುದಾರರು ಎಂದು ಲೋಕಾಯುಕ್ತರು ವರದಿ ನೀಡಿದಾಗ ಬಿಜೆಪಿ ಹೈಕಮಾಂಡ್ ಇವರನ್ನು ಮುಖ್ಯಮಂತ್ರಿ ಮತ್ತು ಶಾಸಕ ಸ್ಥಾನದಿಂದ ರಾಜೀನಾಮೆ ನೀಡಲು ಆದೇಶಿಸಿತು,ಇವರು ಜೈಲು ಶಿಕ್ಷೆಗೆ ಗುರಿಯಾದರು,ಆದರೂ ಮತ್ತೆ ರಾಜಕೀಯ ರಂಗದಲ್ಲಿ ಪ್ರವೇಶ ಮಾಡಿದರು ,ಅದು ಅವರ ಒಳಗುಟ್ಟು ನನಗೆ ಏಕೆ ಬೇಕು ಅಲ್ವಾ ಸಂವಿಧಾನದಲ್ಲಿ ಇರುವುದೇ ಬೇರೆ ಆದರೆ ಪಾಲಿಸುವುದೇ ಬೇರೆ ಇದು ನಮ್ಮ ದೇಶದ ಪರಿಸ್ಥಿತಿ ಏನು ಮಾಡಲು ಆಗುವುದಿಲ್ಲ , ಅಧಿಕಾರಿಗಳ ಕೈಯಲ್ಲಿ ಏನು ಇಲ್ಲ , ರಾಜಕಾರಣಿಗಳೇ ಇಲ್ಲಿ ಎಲ್ಲಾ .ಇವರು ಬಿಜೆಪಿಯನ್ನು ತೋರಿದು ಕೆಜೆಪಿ ಪಕ್ಷವನ್ನು ಕಟ್ಟಿದರು ,ಇದು ಕೂಡ ಒಳ್ಳೆಯ ವಿಷಯ , ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಕೂಗಾಡಿ ಗೆದ್ದ ಇವರು , ಮತ್ತೆ ಬಾಲನಿಂದ ಬಸವ ಅಂತ ಯಾವುದೇ ಆಕ್ಷೇಪಾರ್ಹ ಹೇಳಿಕೆ ಇಲ್ಲದೆ ಬಿಜೆಪಿ ಪಕ್ಷ ಸೇರಿಕೊಂಡರು, ಕೊನೆಗೆ 2006 ರಲ್ಲಿ ಮೈತ್ರಿ ಸರ್ಕಾರ ಕೂಡ ಆಯಿತು ಜೆಡಿಎಸ್ ಮತ್ತು ಬಿಜೆಪಿಗೆ ಇಪ್ಪತ್ತು ತಿಂಗಳು ಆಪತ್ತು ತಿಂಗಳಾಯಿತು 2008 ರಲ್ಲಿ ಯಡಿಯೂರಪ್ಪನವರು , ಕುಮಾರಸ್ವಾಮಿಯನ್ನು ರಾಜ್ಯದಾದ್ಯಂತ ವಚನ ಭ್ರಷ್ಟ ಎಂದು ಹೇಳಿಕೊಂಡು ಆಕಾಶದಲ್ಲಿ ಹಾರಾಡಿದರು ಆಗ ಗೆದ್ದೇ ಬಿಟ್ಟರು , ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂತು,ಕೆಲಸ ಹಾಗೆ ನಡೆಯಿತಿತ್ತು , ಅಧಿಕಾರದ ಆಸೆಗಾಗಿ ಮೂರು ಜನರ ಮುಖ್ಯಮಂತ್ರಿ ಸ್ಥಾನವನ್ನು ನೋಡಿದ ಜನರ ಕಣ್ಣ ತುಂಬ ಪ್ರೀತಿ ಸ್ನೇಹದ ಸಾಗರ ಸಾಗಿತ್ತು.ಅದಕ್ಕೆ 2014 ರಲ್ಲಿ ಸಿದ್ದಣ್ಣನ ನೇತೃತ್ವದಲ್ಲಿ ಸರ್ಕಾರ ರಚನೆ ಮಾಡಲು ಕಾಂಗ್ರೆಸ್ ಗೆ ಜನ ಕೂಗಿ ಬಿಟ್ಟರು ಇದು ರಾಜಕೀಯದಲ್ಲಿ ನಡೆಯುವ ವಿಚಾರ ಸಂಕಿರಣ ನನಗೇನು ಇಲ್ಲಿ ಕೆಲಸ.

ಎರಡು ಬಾರಿಯೂ ಮುಖ್ಯಮಂತ್ರಿ ಪದವಿ ಸುಖ ಕೊಟ್ಟ ಹಿನ್ನೆಲೆಯಲ್ಲಿ ಯಡಿಯೂರಪ್ಪನಿಗೆ ಖುಷಿ ಆಯ್ತು ಅದಕ್ಕಾಗಿ ಮೂರನೇ ಬಾರಿಗೆ ಮುಖ್ಯಮಂತ್ರಿಯಾಗುವ ಆಸೆಯಲ್ಲಿ ಉತ್ಸಾಹಿ ಆಗಿ ರೆಡಿಯಾಗಿ ಬಿಟ್ಟರು ಇವರು, ಆದರೆ ಇತ್ತೀಚೆಗೆ ಇವರ ಕಾಲುಗುಣ ಸರಿಯಾಗಿ ಇಲ್ಲ,ಇವರು ಮುಖ್ಯಮಂತ್ರಿಯಾದರೆ ಸಾಕು , ರಾಜ್ಯಕ್ಕೆ ಏನಾದರೂ ಒಂದು ಪ್ರಕೃತಿ ವಿಕೋಪ ಆಗುತ್ತಾ ಬರುತ್ತದೆ ,ಹೋದ ವರ್ಷ  ಉತ್ತರ ಕರ್ನಾಟಕದಲ್ಲಿ ಪ್ರವಾಹ ಆಗಿ ಎಷ್ಟೋ ಕುಟುಂಬಗಳು ಬೀದಿಗೆ ಬಂದವು, ಎಷ್ಟೋ ಪ್ರಾಣಿಗಳು ನೀರಿನಲ್ಲಿ ಕೊಚ್ಚಿ ಹೋದವು ,ಮನೆ ಎಲ್ಲಾ ಕೊಚ್ಚಿ ಹೋಯಿತು ಆದರೂ ಹೆದರದೆ ಎಲ್ಲ ಸಮಸ್ಯೆಗಳನ್ನೂ ಪರಿಹಾರಿಸಿರುವ ಕೀರ್ತಿ ಯಡಿಯೂರಪ್ಪನಿಗೆ ಸಲ್ಲುತ್ತದೆ,ಮನೆಗಳು ಬಡವರಿಗೆ ಮುಟ್ಟಿದವ ಇಲ್ಲ ನನಗೇನು ಗೊತ್ತು ಆದರೆ , ಕೊಡಗು ಜಿಲ್ಲೆಯಲ್ಲಿ ಆದ ಪ್ರಕೃತಿ ವಿಕೋಪಕ್ಕೆ ಕುಮಾರಸ್ವಾಮಿ ನಿರ್ಮಿಸಿದ ಮನೆಗಳಿಗೆ ಪೂಜೆ ಮಾಡಿ ಉದ್ಘಾಟನೆ ಮಾಡಿದ್ದು ಯಡಿಯೂರಪ್ಪನವರ ಸರ್ಕಾರ ಇದು ಮಾತ್ರ ನನಗೆ ಗೊತ್ತು,ಇವರು ಕೂಡ ಬಡ ಜನರಿಗೆ ಸಹಾಯ ಮಾಡಿದ ವ್ಯಕ್ತಿ , ರೈತರಿಗೆ ಕ್ಷಣದಲ್ಲೇ ಸ್ಪಂದಿಸುವ ಗುಣವುಳ್ಳ ವ್ಯಕ್ತಿ.ಕೆಲವೊಂದು ಸಲ ಹೋರಾಟಗಳನ್ನು ಕೂಡ ಮಾಡಿರುವ ಉನ್ನತ ನಾಯಕ,ಆದರೆ ಯಾವುದೋ ಒಂದು ಕೇಸ್ ಗೆ ಕಪ್ಪು ಬಿಂಬದ ಸ್ವರೂಪವನ್ನು ಸುಲಲಿತವಾಗಿ ಬಲಿಯಾದ ವ್ಯಕ್ತಿ ಈ ಯಡಿಯೂರಪ್ಪನವರು, ತುಂಬಾ ವರ್ಷಗಳಿಂದ ಇವರ ಮಂತ್ರಿಮಂಡಲದ ಸದಸ್ಯರು ಚೆನ್ನಾಗಿ ಇದ್ರು ಆದರೆ ಈಗ ಏಕೋ ಗೊತ್ತಿಲ್ಲ ಮಂಗನ ರೀತಿಯಲ್ಲಿ ಎಲ್ಲಾ ಕೆಲಸಗಳಿಗೆ ಯಡಿಯೂರಪ್ಪನವರನ್ನು ಬಲಿ ಪಶುವಾಗಿ ಮಾಡುತ್ತಿರುವರು. ಈ ವರ್ಷ ಅವರು ಅಧಿಕಾರ ಸ್ವೀಕರಿಸಿದ ನಂತರ ಕೊರೋನಾ ರೋಗ ಬಂತು ರಾಜ್ಯ ವಿಷಯಕ್ಕೆ ಮಾತ್ರ ಮಾತನಾಡುವೆ, ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಸಚಿವರು ಬಿಟ್ಟರೇ ಕೊರೋನಾ ಯುದ್ಧಕ್ಕೆ ಯಾರು ಕೈಜೋಡಿಸಲು ಬರಲಿಲ್ಲ,ಏನು ಮಾಡೋದು ಯಡಿಯೂರಪ್ಪನವರಿಗೆ ವಯಸ್ಸಾಯಿತು ಅಂತ ಮುಖ್ಯಮಂತ್ರಿ ಕುರ್ಚಿಗೆ ಕಣ್ಣು ಹಾಕಿದ ಗುಡ್ಡೆಗಳೇ ಜಾಸ್ತಿ ಮಂತ್ರಿ ಮಂಡಲದಲ್ಲಿ ,ಇವರು ಒಬ್ಬರೇ ಎಲ್ಲಾ ರೀತಿಯಲ್ಲಿ ರಾಜ್ಯ ಜನರಿಗೆ ಧೈರ್ಯ ತುಂಬಿದರು,ಯಾವ ಸಚಿವರೂ,ಶಾಸಕರು ಕೈಜೋಡಿಸಲಿಲ್ಲ ಆದಕಾರಣ ಇಂದು ರಾಜ್ಯಾದ್ಯಂತ ಕೊರೋನಾ ಜಾಸ್ತಿ ಆಗಿದೆ ,ಇವರ ಮಂತ್ರಿ ಮಂಡಲದಲ್ಲಿ ನಾಯಕನಿಗೆ ಬೆಲೆಯಿಲ್ಲ , ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಮಾತನಾಡುವರು ,ಆದರೆ ನಾಯಕನ ಮಾತು ಯಾವುದೋ ಒಂದು ಮೂಲೆಯಲ್ಲಿ , ಶಾಸಕರು ಅಧಿಕಾರಕ್ಕೆ ಹೋರಾಟ ಮಾಡುವರು , ಪಕ್ಷದಿಂದ ಪಕ್ಷಕ್ಕೆ ಹಾರುವ ಯೋಚನೆ ಕೂಡ.ಪಾಪ ನಮ್ಮ ಮುಖ್ಯಮಂತ್ರಿಗೆ ವಯಸ್ಸಾಯಿತು ಏನು ಮಾಡಬೇಕು , ಅದಕ್ಕಾಗಿ ಇವರು ಹೈಕಮಾಂಡ್ ನಲ್ಲಿ ಒಳ್ಳೆ ಹೆಸರು ತೆಗೆದುಕೊಳ್ಳಲು ರಾಜ್ಯದ ನಿರ್ಮಾಣವನ್ನು ಹೈಕಮಾಂಡ್ ಹೇಳಿದ ರೀತಿಯಲ್ಲಿ ಮಾಡುತ್ತಿರುವರು , ಸ್ವತಃ ಇವರ ಮಾತು ಕೇಂದ್ರ ಸರ್ಕಾರದ ಶಾ,ಮೋದಿ ತಾತನ ಕೈಯಲ್ಲಿ ಇದೆ ,ಅಂದು ಮನಮೋಹನ್ ಸಿಂಗ್ ಆದರೆ,ಇಂದು ರಾಜ್ಯದಲ್ಲಿ ಬಿಜೆಪಿ, ಎಸ್ ವೈ, ಅಂತ ರಾಜ್ಯದ ಜನತೆ ಹೇಳುತ್ತಿದೆ.ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಯಡಿಯೂರಪ್ಪನವರು ಸಾಮಾನ್ಯ ಬಿಜೆಪಿ ಕಾರ್ಯಕರ್ತ ಆಗುವ ಸಾಧ್ಯತೆ ಕೂಡ ಅತಿ ಹೆಚ್ಚು ಕಂಡು ಬರುತ್ತಿದೆ.ಏನೇ ಆಗಲಿ ರಾಜ್ಯದ ಜನತೆಗೆ ಒಳ್ಳೆಯ ಸೌಕರ್ಯಗಳನ್ನು, ಸೌಲಭ್ಯಗಳನ್ನು ಒದಗಿಸಲು ಸಹಾಯ ಮಾಡಿ , ರಾಜ್ಯವನ್ನು ರಾಮರಾಜ್ಯವಾಗಿ ಮಾಡಿ, ಭ್ರಷ್ಟಾಚಾರ ಮಾಡಬೇಡಿ, ದಕ್ಷವಾಗಿ ಆಡಳಿತ ಮಾಡಿ. ವಿಶೇಷ ವರದಿ ಸಂಗ್ರಹಗಾರರು ಭೋವಿ ರಾಮಚಂದ್ರ ಹರಪನಹಳ್ಳಿ

ವರದಿ – ಅಮಾಜಪ್ಪ ಹೆಚ್.ಜುಮಲಾಪೂರ

Leave a Reply

Your email address will not be published. Required fields are marked *