ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದು ಮಕ್ಕಳಿಗೆ ಹೃತ್ಪೂರ್ವಕವಾಗಿ ಅಭಿನಂದನೆ…💐💐
ಸರ್ಕಾರಿ ಪದವಿ ಪೂರ್ವ ಕಾಲೇಜು, ನದಿ -ಇಂಗಳಗಾಂವ, ತಾ:- ಅಥಣಿ , ಇಲ್ಲಿನ ವಿದ್ಯಾರ್ಥಿಗಳು 2024-25 ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದು ಊರಿನ, ತಾಲೂಕಿನ, ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿರುತ್ತಾರೆ…
ಕಲಾ ವಿಭಾಗದಲ್ಲಿ ಕುಮಾರಿ ಅಶ್ವಿನಿ ಒಂಟಿಹಟ್ಟಿ ಇತಿಹಾಸದಲ್ಲಿ 100/100 ಅಂಕದೊಂದಿಗೆ 554 ಅಂಕ ಪಡೆದು ಅಗ್ರಸ್ಥಾನಿಯಾದರೆ, ಐಶ್ವರ್ಯಾ ಟಕ್ಕಣ್ಣವರ ಕನ್ನಡದಲ್ಲಿ 100 ಕ್ಕೆ 100 ಅಂಕದೊಂದಿಗೆ 546 ಅಂಕ ಪಡೆದು ದ್ವಿತೀಯ ಸ್ಥಾನ ಪಡೆದರೆ, ಕನ್ನಡದಲ್ಲಿ 100ಕ್ಕೆ100 ಅಂಕದೊಂದಿಗೆ ತ್ರಿಶಲಾ ಪಾಟೀಲ 541 ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದಿದ್ದಾಳೆ…
ವಾಣಿಜ್ಯ ವಿಭಾಗದಲ್ಲಿ ಕನ್ನಡದಲ್ಲಿ 100ಕ್ಕೆ 100 ಅಂಕಗಳೊಂದಿಗೆ ಅಮೃತಾ ಬಿಳ್ಳೂರ 542 ಅಂಕಗಳೊಂದಿಗೆ ಪ್ರಥಮ ಸ್ಥಾನ, ಸೌಮ್ಯಾ ಘೂಳಪ್ಪನವರ 446 ಅಂಕಗಳೊಂದಿಗೆ ದ್ವಿತೀಯ ಸ್ಥಾನ, ಅಮೃತ ಕುಂಬಾರ ಕನ್ನಡದಲ್ಲಿ 100ಕ್ಕೆ 100 ಅಂಕದೊಂದಿಗೆ 457 ಅಂಕ ಪಡೆದು ತೃತೀಯ ಸ್ಥಾನಿಯಾಗಿದ್ದಾಳೆ,..
ವಿಜ್ಞಾನ ವಿಭಾಗದಲ್ಲಿ ಶ್ರೇಯಾ ಆರ್. ಕೆ. ಜೀವಶಾಸ್ತ್ರದಲ್ಲಿ 99, ಇಂಗ್ಲಿಷ್ ನಲ್ಲಿ 96 ಅಂಕಗಳೊಂದಿಗೆ ಒಟ್ಟು 548 ಅಂಕ ಪಡೆದು ಪ್ರಥಮ ಸ್ಥಾನಿಯಾದರೆ, ತಸ್ಲಿಂ ನದಾಫ್ ಕನ್ನಡದಲ್ಲಿ 100ಕ್ಕೆ 100 ಅಂಕಗಳೊಂದಿಗೆ ಒಟ್ಟು 537 ಅಂಕ ಪಡೆದು ದ್ವಿತೀಯ ಸ್ಥಾನ ಪಡೆದರೆ, ಅಮೃತಾ ಜಕ್ಕಪ್ಪಗೋಳ 508, ಅನಿಶಾ ಅವಟಿ ಕನ್ನಡದಲ್ಲಿ 100ಕ್ಕೆ 100 ಅಂಕಗಳೊಂದಿಗೆ 505 ಅಂಕ ಪಡೆದು ಕಾಲೇಜಿಗೆ ಕೀರ್ತಿ ತಂದಿರುತ್ತಾರೆ…
ಕನ್ನಡದಲ್ಲಿ ವಿಶೇಷ ಸಾಧನೆ ಕನ್ನಡ ವಿಷಯದಲ್ಲಿ ನೂರಕ್ಕೆ ನೂರು ಫಲಿತಾಂಶದೊಂದಿಗೆ ಪರೀಕ್ಷೆಗೆ ಹಾಜರಾದ ಒಟ್ಟು 146 ವಿದ್ಯಾರ್ಥಿಗಳಲ್ಲಿ 11 ವಿದ್ಯಾರ್ಥಿಗಳು 100ಕ್ಕೆ 100 ಅಂಕ,, 12 ವಿದ್ಯಾರ್ಥಿಗಳು 100ಕ್ಕೆ 99 ಅಂಕ,, 13 ವಿದ್ಯಾರ್ಥಿಗಳು 100ಕ್ಕೆ 98 ಅಂಕಗಳಿಸಿದರೆ,, ಒಟ್ಟು 77 ವಿದ್ಯಾರ್ಥಿಗಳು 90 ಕ್ಕಿಂತ ಹೆಚ್ಚಿಗೆ ಅಂಕಗಳಿಸಿದ್ದಾರೆ…
ಕಾಲೇಜಿನ ಕನ್ನಡ ಉಪನ್ಯಾಸಕರಾದ ಶ್ರೀ ಸಿದ್ದು ಎಸ್. ಅಥಣಿ ಅವರನ್ನು ಹಾಗೂ ಸಾಧನೆಗೈದ ಎಲ್ಲ ವಿದ್ಯಾರ್ಥಿಗಳನ್ನು ಕಾಲೇಜಿನ ಪ್ರಾಚಾರ್ಯರು, ಉಪನ್ಯಾಸಕ ವರ್ಗದವರು ಮತ್ತು ಊರಿನ ಸಮಸ್ತ ಗುರು-ಹಿರಿಯರು ಹಾಗೂ ಎಸ್ ಡಿ ಎಂ ಸಿ ಯ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆ…💐💐
💐 ನಮ್ಮ ಕಾಲೇಜಿನ ಕನ್ನಡ ವಿಷಯದ ಫಲಿತಾಂಶದ ವಿಶ್ಲೇಷಣೆ 🌹
ಕಾಲೇಜಿಗೆ ದಾಖಲಾದ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ— ೧೪೯
ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ಸಂಖ್ಯೆ— ೧೪೬
೧೦೦ಕ್ಕೆ ೧೦೦ ಅಂಕ ಗಳಿಸಿದವರ ಸಂಖ್ಯೆ— ೧೧
೯೯ ಅಂಕಗಳಿಸಿದವರ ಸಂಖ್ಯೆ— ೧೨ ( ಇದರಲ್ಲಿ ೬ ವಿದ್ಯಾರ್ಥಿಗಳು ಲಿಖಿತ ಪರೀಕ್ಷೆಯಲ್ಲಿ ೮0ಕ್ಕೆ ೮0 ಅಂಕ ಪಡೆದಿರುತ್ತಾರೆ )
೯೮ ಅಂಕ ಗಳಿಸಿದವರ ಸಂಖ್ಯೆ— ೧೩
೯೭ ಅಂಕಗಳಿಸಿದವರ ಸಂಖ್ಯೆ— ೮
೯೬ ಅಂಕಗಳಿಸಿದವರ ಸಂಖ್ಯೆ— ೫
೯೦-೯೫ ರವರೆಗೆ ಅಂಕ ಗಳಿಸಿದವರ ಸಂಖ್ಯೆ— ೨೮(ಹೀಗೆ ೯೦ರ ಮೇಲ್ಪಟ್ಟು ಅಂಕಗಳಿಸಿದವರ ಒಟ್ಟು ಸಂಖ್ಯೆ—೭೭)
೮೫-೮೯ ರವರೆಗೆ ಅಂಕ ಗಳಿಸಿದವರ ಸಂಖ್ಯೆ—೧೨(೮೫ರ ಮೇಲೆ ಅಂದರೆ ಡಿಸ್ಟಿಂಕ್ಷನ್ ಗಳಿಸಿದ ವಿದ್ಯಾರ್ಥಿಗಳ ಒಟ್ಟು ಸಂಖ್ಯೆ—೮೯)
೬೦-೭೪ ರವರಿಗೆ ಅಂಕಗಳಿಸಿದವರ ಸಂಖ್ಯೆ—೩೯(೬0ರ ಮೇಲೆ ಅಂಕಗಳಿಸಿದವರ ಒಟ್ಟು ಸಂಖ್ಯೆ— ೧೨೮)
೩೫-೫೯ ರವರೆಗೆ ಅಂಕ ಗಳಿಸಿದವರ ಸಂಖ್ಯೆ—೧೭
೦-೩೪ ರವರೆಗೆ ಅಂದರೆ ಅನುತ್ತೀರ್ಣರಾದವರ ಸಂಖ್ಯೆ—೧