ದಿ// ಆನಂದ ಭಂಡಾರಿಯವರ ನುಡಿ ನಮನ ಕಾರ್ಯಾಕ್ರಮ ಯಶಸ್ವಿಯಾಗಿ ಜರುಗಿತು.

Spread the love

ದಿ// ಆನಂದ ಭಂಡಾರಿಯವರ ನುಡಿ ನಮನ ಕಾರ್ಯಾಕ್ರಮ ಯಶಸ್ವಿಯಾಗಿ ಜರುಗಿತು.

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ ಬುದ್ದ ವಿಹಾರದಲ್ಲಿ ನಡೆದ ದಿ॥ ಆನಂದ ಭಂಡಾರಿಯವರ ನುಡಿ ನಮನ ಕಾರ್ಯಕ್ರಮವು ಅದ್ದೂರಿಯಾಗಿ ಜರುಗಿತು. ಈ ನುಡಿ ನಮನ ಕಾರ್ಯಕ್ರಮಕ್ಕೆ ಹೋರಾಟದ ಸಂಗಾತಿಗಳು ಕರ್ನಾಟಕದ ಮೂಲೆ ಮೂಲೆಯಿಂದ ಹಾಗೂ ರಾಯಿಚೂರು ಜಿಲ್ಲೆ ಮತ್ತು ಕೊಪ್ಪಳ ಜಿಲ್ಲೆಯ ಸಂಗಾತಿಗಳು ಆಗಮಿಸಿ. ಹೋರಾಟದ ಹಾಡುಗಳ ಮುಖಾಂತರ ಈ ನುಡಿ ನಮನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.  ಮಾನವ ಬಂದುತ್ವ ವೇದಿಕೆ ಕರ್ನಾಕ ಹಾಗೂ ಪ್ರಗತಿಪರ ಸಂಘಟನೆಗಳು ರಾಯಚೂರು-ಕೊಪ್ಪಳದವತಿಯಿಂದ ನಡೆಯುವ ನುಡಿ ನಮನ ಕಾರ್ಯಾಕ್ರಮಕ್ಕೆ ಸ್ವಾಗತಿಸಿದರು. ದಲಿತ ಸಂಘರ್ಷ ಸಮಿತಿಯ ಹಿರಿಯ ಹೋರಾಟಗಾರ ರಾಯಚೂರ-ಕೊಪ್ಪಳ ಅವಿಭಜಿತ ಜಿಲ್ಲೆಯ ಹಿರಿಯ,ದಮನಿತರ ನಾಯಕ ನವ್ಹಂಬರ್ 12-2023 ನಮ್ಮನ್ನಗಲಿದ ಆನಂದ ಭಂಡಾರಿ ಇವರಿಗೆ ನುಡಿ-ನಮನ ಕಾರ್ಯಕ್ರಮಕ್ಕೆ ಹೋರಾಟಗಾರರ ಸಂಗಾತಿಗಳ ಮುಖಾಂತರ  ಶ್ರದ್ಧಾಂಜಲಿ ಸಲ್ಲಿಸಲಾಯಿತು. ಡಾ//ಬಿ.ಆರ್.ಅಂಬೇಡ್ಕರ್ ಅನುಯಾಯಿಗಳು, ದಲಿತ, ರೈತ,ಪ್ರಗತಿಪರ, ಸಂಘಟನೆಗಳ ಮುಖಂಡರು ಹೋರಾಟದ ಒಡನಾಡಿಗಳು, ಸಾಹಿತಿಗಳು, ಸಾಮಾಜಿಕ ಚಿಂತಕರು, ಯುವಜನತೆ ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಧಾನಪ್ಪ ನಿಲೋಗಲ್. ಶ್ರೀಮತಿ ಗುರುಪಾದಮ್ಮ ಆನಂದ ಭಂಡಾರಿಯವರು. ಹೆಚ್,ಎನ್ ಬಡಿಗೇರ್. ಭಾರತಧ್ವಜ. ಶುಕರಾಜ್ ಸರ್. ಬಾಗಲಕೋಟೆ ಜಿಲ್ಲೆಯ ಸಂಚಾಲಕರು ಶ್ರೀ ಶೈಲ್ ಎಮ.ಎಲ್.ಎ. ಬಸಲಿಂಗಪ್ಪ ಲಿಂಗಸೂಗೂರು. ಚಿನ್ನಪ್ಪ ಕೊಟ್ರೂಕಿ. ಆರ್.ಕೆ.ದೇಸಾಯಿ. ರಾಜಾಸಾಬ ಬಾಳೆಕಾಯಿ.ಅಲ್ಲಮ್ ಪ್ರಭು ಪೂಜಾರಿ. ಡಿ.ಹೆಚ್.ಪೂಜಾರಿ. ಮಹಿಳಾ ಬಂದುತ್ವ ವೇದಿಕೆ ಮಾಲ್ತಿ ನಾಯಕ್. ರಾಮಣ್ಣ ಬೇರಿಗಿ. ಈ ದೇಶದ ಶೋಷಿತ ಜನರಿಗಾಗಿ, ನೋವಿನಿಂದ ನರಳುತ್ತಿರುವ ಜನರ ಏಳ್ಗಿಗೆಗಾ ಶ್ರಮೀಸಿದ್ದಾರೆ ಅಂತವರಲ್ಲಿ ಆನಂದ ಭಂಡಾರಿ ಒಬ್ಬರು ಎಂದು ಹಿರಿಯ ಹೋರಾಟಗಾರ ಹೆಚ್ ಎನ್ ಬಡಿಗೇರ ಹೇಳಿದರು. ಪಟ್ಟಣದ ಬುದ್ದ ವಿಹಾರದಲ್ಲಿ ಮಾನವ ಬಂಧುತ್ವ ವೇದಿಕೆ ಕರ್ನಾಟಕ ಹಾಗೂ ಪ್ರಗತಿಪರ ದಲಿತ ಸಂಘಟನೆಗಳು ರಾಯಚೂರು-ಕೊಪ್ಪಳ  ವತಿಯಿಂದ ಹಮ್ಮಿಕೊಂಡಿದ್ದ ಹಿರಿಯ ದಲಿತ ನಾಯಕ ದಿ. ಆನಂದ ಭಂಡಾರಿ ಯವರಿಗೆ ನುಡಿ ನಮನ ಕಾರ್ಯ ಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದಲಿತರನ್ನು ನಾಯಿ, ನರಿಗಳಿಗಿಂತ ಕೀಳಾಗಿ ಕಾಣುತ್ತಿದ್ದ ಆ ಕಾಲದಲ್ಲಿ ನಮ್ಮ ದಲಿತ ನಾಯಕರು ಅವರ ವಿರುದ್ಧ ಧ್ವನಿ ಎತ್ತಿ ಹೋರಾಟ ಮಾಡಿದರು. ತಮ್ಮ‌ಕುಟುಂಬವನ್ನು ದಿಕ್ಕರಿಸಿ ಜನರಿಗಾಗಿ ಶ್ರಮಿಸಿದ್ದಾರೆ. ಸಿದ್ದಾಂತ ಇರದ ಹೋರಾಟಗಳು ನಮ್ಮನ್ನು ದಿಕ್ಕು ತಪ್ಪಿಸುತ್ತವೆ. ಹೋರಾಟಕ್ಕೆ ಸಿದ್ದಾಂತ ಮತ್ತು ಬದ್ದತೆ ಇರಬೇಕು.  ನಾವು ನಿರಂತರವಾಗಿ ಹೋರಾಟ ಮಾಡುತ್ತು ಹಲವು ನಾಯಕರು ತಮ್ಮ ಪ್ರಾಣವನ್ನೆ ತೆತ್ತಿದ್ದಾರೆ.  ಜನರಿಗೆ ನ್ಯಾಯಕೊಡಿಸುವಲ್ಲಿ ಶ್ರಮಿಸಿದ ಶ್ರಮಿಕರಲ್ಲಿ ಆನಂದ ಭಂಡಾರಿ ಒಬ್ಬರು. ಲಕ್ಷಾಂತರ ಜನರ‌ ಬದುಕು ಬದಲಾವಣೆ ಮಾಡಿದ್ದಾರೆ. ಎಲ್ಲಾ ವರ್ಗದ ಜನರಿಗೆ ಸಮನವಾಗಿ ಬದುಕುವ ಹಕ್ಕನ್ನು ನೀಡಿದ್ದಾರೆ. ಡಿ ಹೆಚ್ ಪೂಜಾರ ಮಾತನಾಡಿ, ಬೌತಿಕವಾಗಿ ನಮ್ಮಿಂದ ದೂರವಿರ ಬಹುದು ಭಂಡಾರಿಯವರು ಆದರೆ ಅವರ ಹೋರಾಟ ಹೆಜ್ಜೆಗಳು ಅವರ ಮಾರ್ಗದರ್ಶನಗಳು ನಮ್ಮೊಂದಿಗಿವೆ. ಹೋರಾಟದ ಹಾದಿಗಳು ಗಟ್ಟಿಯಾಗಬೇಕು. ಹೋರಾಟಗಾರರನ್ನು ಭ್ರಷ್ಟನ್ನಾಗಿ ಮಾಡಿ ಅವರನ್ನು ಅತ್ತಿಕ್ಕುವ ಹುನ್ನಾರ ನಡೆಯುತ್ತಿವೆ. ಆರ್ ಕೆ ದೇಸಾಯಿ ಮಾತನಾಡಿ, ಚಳುವಳಿಗಳನ್ನು ಬಲಿಷ್ಠ ಗೊಳಿಸಬೇಕು. ದಲಿತ ಕೆರೆಗಳು ಸಿಸಿ ರಸ್ತೆಗಳಾಗಿವೆ. ಆದರೆ ಶೈಕ್ಷಣಿಕ, ಆರ್ಥಿಕವಾಗಿ ಮುಂದೆ ಬರಬೇಕಾಗಿದೆ. ಎಂ‌ ವೀರುಪಾಕ್ಷ, ಮಾತನಾಡಿದರು.ಸಾಹಿತಿ ಹಾಗೂ ಹೋರಾಟಗಾರ ಶ್ರೀ ದಾನಪ್ಪ ನಿಲೋಗಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗುರುಪಾದಮ್ಮ ಭಂಡಾರಿ, ಎಂ ವೀರುಪಾಕ್ಷ, ಹೆಚ್ ಎನ್ ಬಡಿಗೇರ, ಎ.ಕೆ ಭಾರಧ್ವಜ, ಬಸಲಿಂಗಪ್ಪ ಲಿಂಗಸೂರು, ವಕೀಲ ಆರ್ ಕೆ ದೇಸಾಯಿ, ರಾಜಾಸಾಬ ಬಾಳೆಕಾಯಿ, ಡಿ ಹೆಚ್ ಪೂಜಾರ, ಚಿನ್ನಪ್ಪ ಕೊಟ್ರಕಿ,  ಅಲ್ಲಮ್ಮಪ್ರಭು ಪೂಜಾರಿ, ರಾಮಣ್ಣ ಬೇರಗಿ, ಶುಕ್ರರಾಜ ತಾಳಕೇರಿ, ಶ್ರೀಶೈಲ, ಮಾಲತಿ ನಾಯಕ‌, ಕರಿಯಪ್ಪ ಗುಡಿಮನಿ, ರಂಗಪ್ಪ, ಎಂ,ಆರ್,ಭೇರಿ, ಸ್ಥಳಿಯ ಮುಖಂಡರಾದ ಸಾಗರ ಭೇರಿ, ದುರಗೇಶ ನಾರಿನಾಳ, ಸಂಜೀವ ಚಲುವಾದಿ, ಗೌತಮ್ ಭಂಡಾರಿ, ಅಮರೇಶ ಚಲುವಾದಿ, ಹುಸೇನಪ್ಪ ಮುದೇನೂರು,ನಾಗರಾಜ ನಂದಾಪೂರು, ದುರಗೇಶ, ಗಣೇಶ ಸೇರಿದಂತೆ ಸಾವಿರಾರು ಜನರು ಪಾಲ್ಗೊಂಡಿದ್ದರು. ಶರಣಪ್ಪ ನಿರೂಪಿಸಿದರು, ಭೀಮಣ್ಣ ಹವಳೆ ಸ್ವಾಗತಿಸಿ, ವಂದಿಸಿದರು.

ವಿಶೇಷ ವರದಿ- ಭೀಮನಗೌಡ ಮಂಡಲಮರಿ ಮತ್ತು ಉಪಳೇಶ ವಿ.ನಾರಿನಾಳ.

Leave a Reply

Your email address will not be published. Required fields are marked *