ಆಮ್ ಆದ್ಮಿ ಪಕ್ಷದ ಕಚೇರಿಯಲ್ಲಿ ಇಂದು 74ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. 

Spread the love

ಆಮ್ ಆದ್ಮಿ ಪಕ್ಷದ ಕಚೇರಿಯಲ್ಲಿ ಇಂದು 74ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. 

ಆಮ್ ಆದ್ಮಿ ಪಕ್ಷದ ರಾಜ್ಯ ಜಂಟಿ ಕಾರ್ಯದರ್ಶಿಗಳು ಮತ್ತು ಗಂಗಾವತಿ ವಿಧಾನಸಭಾ ಕ್ಷೇತ್ರದ ಎಂಎಲ್ಎ ಆಕಾಂಕ್ಷಿಗಳಾದ ಶರಣಪ್ಪ ಸಜ್ಜಿಹೊಲ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡುತ್ತಾ-ನಾಡಿನ ಜನತೆಗೆ ಗಣರಾಜ್ಯೋತ್ಸವದ ಶುಭಾಶಯಗಳನ್ನು ತಿಳಿಸಿ, ಇಂದಿನ ರಾಜಕಾರಣ ಹಣಬಲ ಮತ್ತು ತೋಳಬಲ ಹಾಗೂ ಜಾತಿ ಆಧಾರಿತ ರಾಜಕೀಯ ವ್ಯವಸ್ಥೆಯು ನಮ್ಮ ದೇಶದ ಸಂವಿಧಾನಕ್ಕೆ ವಿರುದ್ಧವಾಗಿದ್ದು ಪ್ರಾಮಾಣಿಕ ರಾಜಕಾರಣದ ಅವಶ್ಯಕತೆ ನಮ್ಮ ನಾಡಿಗೆ ತುಂಬಾ ಇದೆ. ಸಂವಿಧಾನಿಕವಾದ ರಾಜಕಾರಣದ ಅವಶ್ಯಕತೆಯೂ ನಮ್ಮ ದೇಶಕ್ಕೆ ಇದೆ ಅದನ್ನು ಕೇವಲ ಆಮ್ ಆದ್ಮಿ ಪಕ್ಷ ಮಾತ್ರ ಕೊಡಲು ಸಾಧ್ಯ ಎಂದರು, ಜಿಲ್ಲಾಧ್ಯಕ್ಷರಾದ ಹುಸೇನ್ ಸಾಬ್ ಗಂಗನಾಳ ರವರು ಮಾತನಾಡಿ-ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರೂ ಜನರ ಮೂಲಭೂತ ಅವಶ್ಯಕತೆಗಳನ್ನು ಪೂರೈಸಲು ಸಾಧ್ಯವಿಲ್ಲದ ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಸರ್ಕಾರಗಳು ಜನಸಾಮಾನ್ಯರ ತೆರಿಗೆ ಹಣವನ್ನು ಜನಸಾಮಾನ್ಯರಿಗೆ ಮರಳಿ ನೀಡುವ ಆಮ್ ಆದ್ಮಿ ಪಕ್ಷದ ಯೋಜನೆಗಳನ್ನು ಹೀಯಾಳಿಸುತ್ತಿದ್ದಾರೆ. ದೆಹಲಿಯ ಆಮ್ ಆದ್ಮಿ ಸರ್ಕಾರ ಜನತೆಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಉಚಿತವಾಗಿ ನೀಡಿದರೂ ಕೊರತೆ ಬಜೆಟ್ ಮಂಡಿಸಿಲ್ಲ, ಯಾವುದೇ ಸೌಲಭ್ಯಗಳನ್ನು ನೀಡದ ಕರ್ನಾಟಕದ ಬಿಜೆಪಿ ಸರ್ಕಾರ ಲಕ್ಷಗಟ್ಟಲೆ ಕೊರತೆ ಬಜೆಟ್ ಮಂಡಿಸಿದೆ -ಎಂದು ಬಿಜೆಪಿ ಸರ್ಕಾರವನ್ನು ಕಟುವಾಗಿ ಟೀಕಿಸಿದರು. ರಾಘವೇಂದ್ರ ಸಿದ್ದಿಕೇರಿ  ಮಾತನಾಡುತ್ತಾ-ದೆಹಲಿ ಮತ್ತು ಪಂಜಾಬ್ ನ ಆಮ್ ಆದ್ಮಿ ಸರ್ಕಾರದ ಯೋಜನೆಗಳನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರಗಳು ಕಾಪಿ ಮಾಡುತ್ತಿವೆ. ಯೋಜನೆಗಳ ಅಸಲು ರೂಪ ಕರ್ನಾಟಕದಲ್ಲಿ ಆಮ್ ಆದ್ಮಿಪಕ್ಷದ ಮೂಲಕ ಲಭ್ಯವಿರುವಾಗ ಜನಸಾಮಾನ್ಯರು ನಕಲಿಯನ್ನು ಖಂಡಿತ ಆಯ್ಕೆ ಮಾಡುವುದಿಲ್ಲ. ಬರುವ ಚುನಾವಣೆಯಲ್ಲಿ ಜೆಸಿಬಿ ಪಕ್ಷಗಳಿಗೆ ತಕ್ಕ ಪಾಠವನ್ನು ಕರ್ನಾಟಕ ಜನತೆ ಕಲಿಸುತ್ತಾರೆ ಎಂದರು. ಈ ಸಂದರ್ಭದಲ್ಲಿ ಮುಖಂಡರಾದ ವಿಕ್ರಂ ರವರು ಮಾತನಾಡಿ -ಇದುವರೆಗಿನ ಬಿಜೆಪಿ,ಜೆಡಿಎಸ್, ಕಾಂಗ್ರೆಸ್ ಸರ್ಕಾರಗಳ ಜನವಿರೋಧಿ ನೀತಿಯನ್ನು ಖಂಡಿಸಿ ಮಹಿಳೆಯರಿಗೆ ಮೂಲಭೂತ ಸೌಕರ್ಯ ನೀಡದೆ ಕೇವಲ ಸ್ವಾರ್ಥಕ್ಕಾಗಿ ಲಿಪ್ ಸ್ಟಿಕ್ಕ್ ತಯಾರಿಕಾ ಕಾರ್ಖಾನೆಗೆ ಅನುಮತಿ ನೀಡಿದ ಹಿಂದಿನ ಕಾಂಗ್ರೆಸ್ ಸರ್ಕಾರದ ಉದಾಹರಣೆಯನ್ನು ಹೇಳಿದರು.ಪರಶುರಾಮ್ ಒಡೆಯರು ವಕೀಲರು, ಶರೀಫ್ ಸಾಬ್, ಹುಸೇನ್ ಮರಳಿ, ಚಂದ್ರಶೇಖರ್ ಒಗ್ಗ, ವಿರೂಪಣ್ಣ, ಕಿಶೋರ್ ಚಿಂದೆ, ಭೋಗೇಶ್ ಆನೆಗುಂದಿ ಇತರರು ಮಾತನಾಡಿ ದೇಶಕ್ಕೆ ಆಮ್ ಆದ್ಮಿ ಪಕ್ಷ ಒಂದೇ ಪರಿಹಾರ ಎಂದು ಹೇಳಿದರು. ಈ ಸಂದರ್ಭದಲ್ಲಿ ಮಂಜು ಬಡಿಗೇರ, ವೆಂಕಟೇಶ್. ಭಾಸ್ಕರ್ ಬಾಳಿಕಟ್ಟಿ ‌, ಬಸಮ್ಮ, ಕೊಟ್ರಮ್ಮ ಇತರರು ಸಹ ಭಾಗವಹಿಸಿದ್ದರು.

ವರದಿ – ಸಂಪಾದಕೀಯಾ

Leave a Reply

Your email address will not be published. Required fields are marked *