ಕರ್ಮಭೂಮಿಯ ದೀರ ಕನ್ನಡಿಗ ಹನುಮಂತ ರೆಡ್ಡಿ ಶಿರೂರ್ ರವರು..

Spread the love

ಕರ್ಮಭೂಮಿಯ ದೀರ ಕನ್ನಡಿಗ ಹನುಮಂತ ರೆಡ್ಡಿ ಶಿರೂರ್ ರವರು..

ಹನುಮಂತ ರೆಡ್ಡಿ ಶಿರೂರವರು ಅಖಿಲ ಗೋವಾ ಕನ್ನಡ ಮಹಾಸಂಗದ ಅಧ್ಯಕ್ಷರಾಗಿ ಕಳೆದ ನಾಲ್ಕು ವರ್ಷಗಳಿಂದಲೂ ಗೋವಾ ಕನ್ನಡಿಗರನ್ನ ಸಂಘಟಿಸಿ ಕನ್ನಡ ನಾಡಿನ ಸಂಸ್ಕೃತಿ ಪರಂಪರೆ ಸಾಹಿತ್ಯವನ್ನು ಕಡಲ ಕಿನಾರೆಯ ಗೋವಾದಲ್ಲಿಯೂ ಸಹ ಕನ್ನಡ ಡಿಂಡಿಮ ಬಾರಿ ಸುವ ಮೂಲಕ ತಾಯಿ ಭುವನೇಶ್ವರಿಯ ಕನ್ನಡ ಹೋರಾಟಗಾರರಾಗಿ ಸಮಾಜ ಸೇವಕರಾಗಿ ಗೋವಾ ಕನ್ನಡಿಗರಿಗೆ ಮಾರ್ಗದರ್ಶಿಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ… ಅನೇಕ ಬಡವರಿಗೆ ಕರೋನ ಸಂದರ್ಭದಲ್ಲಿ ಉಚಿತ ಪಡಿತರ ಹಾಗೂ ತರಕಾರಿಗಳನ್ನು ವಿತರಿಸಿದವರು.. ಹನುಮಂತ ರೆಡ್ಡಿ ಶಿರೂರ್ ಅವರು ಮೂಲತಃ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಆಡೂರು ಗ್ರಾಮದವರು. ಉದ್ಯೋಗವನ್ನು ಅರಸಿ ಅವರ ತಂದೆ-ತಾಯಿಗಳು ಗೋವಾಕ್ಕೆ ಬಂದು ನೆಲೆಸಿದವರು ಇವರು ಸಹ ಗೋವಾದಲ್ಲಿ ವ್ಯಾಪಾರ ಮಾಡಿಕೊಂಡು ಕನ್ನಡ ಪರ ಸೇವೆಯಲ್ಲಿದ್ದಾರೆ. ಅವರ ಊರಲ್ಲಿಯೂ ಸಹ ಅನೇಕ ಜನಪರ ಸೇವೆಗಳನ್ನ ಮಾಡುತ್ತಿದ್ದಾರೆ ಗ್ರಾಮಕ್ಕೆ ಅನೇಕ ಅಭಿವೃದ್ಧಿ ಕಾರ್ಯಗಳ ನಿರಂತರವಾಗಿ ನಡೆಯುವ ಹಾಗೆ ಸ್ಥಳೀಯ ಶಾಸಕರಿಗೆ ಕೈಜೋಡಿಸಿ ಅಭಿವೃದ್ಧಿ ಕಾರ್ಯಗಳಲ್ಲಿ ನಿರತರಾಗಿದ್ದಾರೆ. ಪ್ರತಿ ವರ್ಷ ಜಾತ್ರೆ ಮುನ್ನ ದಿನ ಅದ್ದೂರಿ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ ಮಾಡಿ ಸಂಸ್ಕೃತಿಕ ಸಂಘಟಕರಾಗಿ ಜನಪದರಾಗಿದ್ದಾರೆ. ಮೊದಲು ಕರ್ಮ ಭೂಮಿ ಕನ್ನಡ ಸಂಘದ ಅಧ್ಯಕ್ಷರಾಗಿ ಕಳೆದ ಆರು ವರ್ಷಗಳಿಂದ ಗೋವಾದ ಬಿಚ್ಚುಲಿಯಂನಲ್ಲಿ ಅದ್ದೂರಿ ಕನ್ನಡ ಸಾಂಸ್ಕೃತಿಕ ಸಮ್ಮೇಳನ ನಡೆಸುವ ಮೂಲಕ ಪ್ರಖ್ಯಾತ ಪಡೆದಿದ್ದಾರೆ ಕನ್ನಡ ಕರ್ನಾಟಕ ಕನ್ನಡಿಗ ಮೂಲ ಪರಿಕಲ್ಪನೆ ಯೊಂದಿಗೆ ಗೋವಾ ರಾಜ್ಯದಲ್ಲಿ ಕನ್ನಡಿಗರೊಂದಿಗೆ ಸೇರಿಕೊಂಡು ಅವರನ್ನು ಪ್ರೋತ್ಸಾಹಿಸುತ್ತಾ ಕನ್ನಡ ಸೇವೆಯಲ್ಲಿ ತೊಡಿಸಿಕೊಂಡಿದ್ದಾರೆ ಪ್ರತಿ ವರ್ಷ ಗೋವಾ ರಾಜ್ಯದ ಮುಖ್ಯಮಂತ್ರಿಗಳನ್ನು ಕರೆಸಿ, ಅದ್ದೂರಿ ಕನ್ನಡಿಗರ ಸಾಂಸ್ಕೃತಿಕ ಸಮಾವೇಶವನ್ನು ನೆಡ ಸುತ್ತಿರುವುದು ಸಂಘಟನಾ ಶಕ್ತಿಯ ಕಲ್ಪನೆಯನ್ನು ಬಿಂಬಿಸುತ್ತದೆ ಈ ಬಾರಿ ಗೋವಾದಲ್ಲಿ ನಡೆದ ಕನ್ನಡಿಗರ 14ನೇ ಸಾಂಸ್ಕೃತಿಕ ಸಮ್ಮೇಳನ ಸಮ್ಮೇಳನಕ್ಕೆ ನಾಲ್ಕುವರೆ ಸಾವಿರ ಜನ ಸೇರಿಸಿದ್ದು ಅಭಿನಂದನೆಯ…. ಅನೇಕ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ಮುಂದುವರಿಸುವಲ್ಲಿ ಸಹಕಾರಿಯಾಗಿದ್ದಾರೆ ಇವರ ಕನ್ನಡ ಪರ  ಗಾಗಿ ಅನೇಕ ಪ್ರಶಸ್ತಿಗಳು ಲಭಿಸಿವೆ ಇಟಗಿ ಉತ್ಸವದ ಚಾಲುಕ್ಯ  ವಿಕ್ರಮಾದಿತ್ಯ ಪ್ರಶಸ್ತಿ ಕರ್ನಾಟಕ ರಕ್ಷಣಾ ವೇದಿಕೆಯ ಕದಂಬ ಪ್ರಶಸ್ತಿ ಕರ್ನಾಟಕ ಜಾಗೃತಿ ವೇದಿಕೆಯ ಕರು ನಾಡ ಪದ್ಮಶ್ರೀ ಪ್ರಶಸ್ತಿ  ಕೊಪ್ಪಳ ಜಿಲ್ಲಾ ಉತ್ಸವದ ಸಿದ್ದಯ್ಯ ಪುರಾಣಿಕ ಪ್ರಶಸ್ತಿ ಹೀಗೆ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ ಯಶಸ್ವಿ  ಹೊರನಾಡ ಕನ್ನಡಿಗರ ಯಶೋ  ಚಿತ್ರಣ ಮಾಲಿಕೆಯಲ್ಲಿ  ಹನುಮಂತ್ ರೆಡ್ಡಿ ಶಿರೂರವರ ಚಿತ್ರಣವನ್ನು ನೀಡಿದೆ.ಅವರ ನೇತೃತ್ವದಲ್ಲಿ ಇನ್ನೂ ಹೆಚ್ಚಿನ ಸೇವೆಗಳು ಗೋವಾ ಕನ್ನಡಿಗರಿಗೆ ದೊರೆಯಲಿ ಎಂಬ ಸದಾಶಯ.

ವರದಿ – ಸಂಪಾದಕೀಯಾ

Leave a Reply

Your email address will not be published. Required fields are marked *