ತಾವರಗೇರಾ ಪಟ್ಟಣದ ಪೂಜ್ಯ ಶ್ರೀ ಮಹೇಶ್ವರ ತಾತನವರಿಗೆ ಸಮಾಜ ಮುಖಿ ಸೇವಾ ಸಂಸ್ಥೆ (ರಿ) ಹಾಗೂ ಗೋವಾ ಕನ್ನಡಿಗರ ಸಂಘವು ಧಾರ್ಮಿಕ ಭೂಷಣ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Spread the love

ತಾವರಗೇರಾ ಪಟ್ಟಣದ ಪೂಜ್ಯ ಶ್ರೀ ಮಹೇಶ್ವರ ತಾತನವರಿಗೆ ಸಮಾಜ ಮುಖಿ ಸೇವಾ ಸಂಸ್ಥೆ (ರಿ) ಹಾಗೂ ಗೋವಾ ಕನ್ನಡಿಗರ ಸಂಘವು ಧಾರ್ಮಿಕ ಭೂಷಣ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ ಪೂಜ್ಯ ಶ್ರೀ ರುದ್ರಯ್ಯ ತಾತನವರ ಹಿರೇಮಠದ ಕಿರಿಯ ಪೂಜ್ಯರಾದ ಪೂಜ್ಯ ಶ್ರೀ ಮಹೇಶ್ವರ ತಾತನವರು ಶಿವಯೋಗಿ ಶರಣರು ಸುಕ್ಷೇತ್ರ ತಾವರಗೇರಾ ಇವರಿಗೆ ಇದೇ ದಿನಾಂಕ 27 ರವಿವಾರಂದು ಸಮಾಜ ಮುಖಿ ಸೇವಾ ಸಂಸ್ಥೆ (ರಿ) ಹಾಗೂ ಗೋವಾ ಕನ್ನಡಿಗರ ಸಂಘವು  ಧಾರ್ಮಿಕ ಭೂಷಣ ರಾಜ್ಯ ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ಇದು ನಮ್ಮೆಲ್ಲರಿಗೆ ಹೆಮ್ಮೆಯ ವಿಷಯ ಏಕೆಂದರೆ ಪೂಜ್ಯರು  ಎಲೆಮರೆಯ ಕಾಯಿಯಂತೆ ಕಿರಿಯ ವಯಸ್ಸಿನಲ್ಲಿಯೇ ಹಿರಿಯ ಸಾಧನೆ ಮಾಡುತ್ತಿದ್ದಾರೆ. ಪೂಜ್ಯರು ಜನಿಸಿದ್ದು  ದಿನಾಂಕ 01.11.1987 ರಲ್ಲಿ ತಾವರಗೇರಾ ಪಟ್ಟಣದ ಪೂಜ್ಯ ಶ್ರೀ ರುದ್ರಯ್ಯ ತಾತನವರ  ಮಾತೋಶ್ರೀ ಚನ್ನಮ್ಮನವರ ಉದರದಲ್ಲಿ ಜನಿಸಿದರು. ಇವರ  ತಂದೆ ತಾಯಿಗಳಂತೆ ಸದಾ ಸಮಾಜದ ಚಿಂತನೆ ಮಾಡುತ್ತಾ ಆಚಾರ ವಿಚಾರ ಸಂಸ್ಕೃತಿ ಮೈಗೂಡಿಸಿಕೊಂಡು ಮುನ್ನುಗುತ್ತಾ ಪ್ರಾಥಮಿಕ ಪ್ರೌಢ ಶಿಕ್ಷಣವನ್ನು ತಾವರಗೇರಾ  ಪಟ್ಟಣದಲ್ಲಿ ಮುಗಿಸಿ  ನಂತರ ಸಂಸ್ಕ್ರತ ಬಿ.ಎ.ಅಧ್ಯಯನ ಮಾಡಿದರು.ಶ್ರೀಶೈಲ ಜಗದ್ಗುರುಗಳಾದ ಲಿಂ.ಉಮಾಪತಿ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರ ಸೇವೆ ಮಾಡಿ ಪ್ರೀತಿ ಪಾತ್ರರಾಗಿದ್ದರು, ಅವರಿಂದ ದೀಕ್ಷೆ ಪಡೆದು ಧರ್ಮೋ ರಕ್ಷತಿ ರಕ್ಷಿತಾ ಎನ್ನುವಂತೆ  ಸದಾ ಧರ್ಮದ ಕಾರ್ಯಗಳನ್ನು ಮಾಡುತ್ತಾ ತಮ್ಮ ತಂದೆಯವರ ಮಾರ್ಗದರ್ಶನದಲ್ಲಿ ಜ್ಯೋತಿಷ್ಯ ರುದ್ರಾಭಿಷೇಕ ಪುರಾಣ ಪ್ರವಚನ ಜೊತೆಗೆ ಸಾಮಾಜಿಕ ಸೇವೆಗಳನ್ನು ಮಾಡುತ್ತಾ ಇದ್ದಾರೆ ಭಕ್ತರ ಕಷ್ಟ  ನಿವಾರಣೆಗಾಗಿ ಅಧಿಕ ಮಾಸದಲ್ಲಿ ಲಕ್ಷ ಬಿಲ್ಪಾರ್ಚನೆ ಕಾರ್ಯಕ್ರಮ ಮಾಡುತ್ತಾ ಸರ್ವ ಭಕ್ತರ ಕಷ್ಟಕ್ಕೆ ಮಾರ್ಗದರ್ಶನ ಮಾಡುತ್ತಿದ್ದಾರೆ.ಪೂಜ್ಯರ ಸಾಮಾಜಿಕ  ಧಾರ್ಮಿಕ ಸೇವೆಗಳನ್ನು ಗುರುತಿಸಿ ಈಗಾಗಲೇ ಅನೇಕ ಪ್ರಶಸ್ತಿ ಗೌರವಗಳು ಲಭಿಸಿವೆ. ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಬಿನ್ನಾಳ ಗ್ರಾಮದಲ್ಲಿ  23.10.2015 ರಲ್ಲಿ ಕರ್ನಾಟಕ ಪುರಾಣ ಪ್ರವಚನ ಕಲಾರತ್ನ‌, ಕೊಪ್ಪಳ ಜಿಲ್ಲೆಯ ನಾಗರಿಕ ವೇದಿಕೆ ಪ್ರತಿವರ್ಷ ಹಮ್ಮಿಕೂಳ್ಳುವ ಇಟಗಿ ಉತ್ಸವದಲ್ಲಿ 25.12.2019 ರಲ್ಲಿ ಚಾಲುಕ್ಯವಿಕ್ರಮಾದಿತ್ಯ ಪ್ರಶಸ್ತಿ, 02.2.2020 ರಲ್ಲಿ ಕರ್ನಾಟಕ ದರ್ಶನ ಸೇವಾಭಿವೃದ್ದಿ ಸಂಸ್ಥೆ ವತಿಯಿಂದ ಆರೂಢಶ್ರೀ, ಬಸವಶ್ರೀ, ಪ್ರಶಸ್ತಿಗಳು ರಾಜಧಾನಿ ಬೆಂಗಳೂರು ಮಹಾನಗರದಲ್ಲಿ 16,17,18 ರಂದು ಜನೇವರಿ 2021 ರಂದು ನೆಡೆದ ಅರ್ಚಕರ ಕಾರ್ಯಾಗಾರದಲ್ಲಿ ವೈದಿಕ ಚತುರ,ಶಿವಮೊಗ್ಗ ಜಿಲ್ಲೆಯ ಹೂನ್ನಾಳಿ ಸುಕ್ಷೇತ್ರ ಹಿರೇಕಲ್ಮಠದಲ್ಲಿ ಅರ್ಚಕ ಜ್ಯೋತಿಷಿ ಆಗಮಿಕರ ಆಚಾರ ವಿಚಾರ ಚಿಂತನಾ ಕಾರ್ಯಕ್ರಮದಲ್ಲಿ ಗೌರವ ಅಭಿನಂದನಾ ಪತ್ರ ಲಭಸಿವೆ.ಕರೊನಾ ಸಂದರ್ಭದಲ್ಲಿ  ತಮ್ಮ ಶ್ರೀಮಠದಲ್ಲಿ ಮಾಡಿದ ಸಮಾಜಿಕ ಧಾರ್ಮಿಕ ಸೇವೆ ಗುರುತಿಸಿ ಯುವ ಬಿಗ್ರೇಡ್ ವತಿಯಿಂದ ಮಂಗಳ ಸಾರಥಿ ಗೌರವ ಅಭಿನಂದನಾ ಪತ್ರ ನೀಡಿದ್ದಾರೆ, ಅಲ್ಲದೆ  26.12.2021ರಂದು ಸಂಗೀತ ನೃತ್ಯ ಕಲಾ ನಿಕೇತನ‌ ಟ್ರಸ್ಟ್ (ರಿ)ಮಂಡ್ಯ ಸಮಿತಿ ವತಿಯಿಂದ ಕನ್ನಡದ ಕಣ್ಮಣಿ ಸೇವಾ ರತ್ನ ಪ್ರಶಸ್ತಿ, 15.10. 2022 ರಂದು ಶ್ರೀ ಸರ್ವೇ ಜನಾ ಆರ್ಟ್ಸ್ ಮತ್ತು ಕಲ್ಚರ್ ಟ್ರಸ್ಟ್ (ರಿ)ನಾಗರಬಾವಿ ಬೆಂಗಳೂರು ಇವರಿಂದ ಬಾಗಲಕೋಟೆ ನವನಗರದಲ್ಲಿ  ಹೆಮ್ಮೆಯ ಕನ್ನಡಿಗ ರಾಜ್ಯ ಪ್ರಶಸ್ತಿ ಹಾಗೂ ಕರ್ನಾಟಕ ರಾಜ್ಯೋತ್ಸವದ  ಡಾ.ಪುನಿತ್ ರಾಜಕುಮಾರ ಇವರ ಪ್ರಥಮ ವರ್ಷದ ಪುಣ್ಯತಿಥಿ ಅಂಗವಾಗಿ ಹುಬ್ಬಳ್ಳಿ ಮಹಾನಗರದಲ್ಲಿ ಹೆತ್ತವರು ಹಾಗೂ ಮಕ್ಕಳ ವೇದಿಕೆ ವತಿಯಿಂದ ಕರುನಾಡ ಕಣ್ಮಣಿ ರಾಜ್ಯಪ್ರಶಸ್ತಿ ದೂರೆತಿವೆ.ಇದೆ ದಿನಾಂಕ 27.11.2022 ರಂದು ಧಾರ್ಮಿಕ ಭೂಷಣ ಪ್ರಶಸ್ತಿ ಪ್ರಧಾನ ಸಮಾರಂಭವೂ ಹೊರ ರಾಜ್ಯ ಗೊವಾದಲ್ಲಿ ನೆಡೆಯುತ್ತಿರುವದು ಸಂತಸದ ವಿಷಯ ಮತ್ತು ಬೀದರ್ ನಗರದಲ್ಲಿ ರಾಜ್ಯೋತ್ಸವದ ನಿಮಿತ್ಯ ದಿನಾಂಕ 29.11.2022 ರಂದು ಕರ್ನಾಟಕ ರಾಜ್ಯರತ್ನ  ಪ್ರಶಸ್ತಿ ಗೆ ಆಯ್ಕೆಯಾಗಿದ್ದಾರೆ.ಈ ಪೂಜ್ಯರು ಎಲ್ಲ ಭಕ್ತರ ಹಿತೈಷಿಗಳಾಗಿ ಭಕ್ತರ ಕಷ್ಟಗಳಿಗೆ ಮಾರ್ಗದರ್ಶಕರಾಗಿ ಎಲೆಮರೆಯ ಕಾಯಿಯಂತೆ  ಜೀವಿಸುತ್ತಿದ್ದಾರೆ. ಇವರಿಗೆ ಆ ಭಗವಂತ ಇನ್ನೂ ಹೆಚ್ಚು ಹೆಚ್ಚು  ಧಾರ್ಮಿಕ ಸಾಮಾಜಿಕ ಸೇವೆಗಳನ್ನು ಮಾಡುತ್ತಾ  ಎಲ್ಲಾ ಭಕ್ತರಿಗೆ ದಾರಿದೀಪವಾಗಿ ಪ್ರೇರಕ ಶಕ್ತಿಯಾಗಿಲಿ ಎಂದು ಹಾರೈಸೋಣ.

ವರದಿ – ಸಂಪಾದಕೀಯಾ

Leave a Reply

Your email address will not be published. Required fields are marked *