ಕುಷ್ಟಗಿ ತಾಲೂಕಿನ ಸಂಗನಾಳ ಗ್ರಾಮದ ಪ್ರತಿ ಹಳ್ಳಿ ಹಳ್ಳಿಗೂ ಸ್ಯಾನಿಟೈಜರ್ ಸಿಂಪಡೆ ಕಾರ್ಯಕ್ರಮ,,

Spread the love

ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಸಂಗನಾಳ ಗ್ರಾಮ ಪಂಚಾಯತಿಯೊಂದ ಪ್ರತಿ ಹಳ್ಳಿ ಹಳ್ಳಿಗೂ ಸ್ಯಾನಿಟೈಜರ್ ಸಿಂಪಡೆ ಕಾರ್ಯ ಜರುಗಿತು.

ಕೋವಿಡ್ ಸೋಂಕು ತಡೆ ಹಿನ್ನೆಲೆಯಲ್ಲಿ ಕನ್ನಾಳ, ಪುರ,ಸಂಗನಾಳ ಗ್ರಾಮಗಳ ಗಲ್ಲಿ ಗಲ್ಲಿಗಳಲ್ಲಿ ಸ್ಯಾನಿಟೈಜನೇಶನ್ ಮಾಡಲಾಯಿತು. ಸಮೀಪದ ಸಂಗನಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಕನ್ನಾಳ, ಪುರ ಗ್ರಾಮ ಸೇರಿದಂತೆ ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಅಭಿವೃದ್ಧಿ ಅಧಿಕಾರಿ ಚಂದ್ರಶೇಖರ ಬಿ ಕಂದಕೂರ ಚುನಾಯಿತ ಪ್ರತಿನಿಧಿ ಮತ್ತು ಸಿಬ್ಬಂದಿಯ ತಂಡದೊಂದಿಗೆ ಗ್ರಾಮದಲ್ಲಿ ಸ್ಯಾನಿಟೈಜೇಷನ್ ಕಾರ್ಯ ಕೈಗೊಂಡರು. ಕೋವಿಡ್ ಸೋಂಕು ತಡೆ ಉದ್ದೇಶದಿಂದ ಗ್ರಾಮದ ಎಲ್ಲೆಡೆ ಸ್ಯಾನಿಟೈಜೇಶನ್ ಕೈಗೊಳ್ಳಲಾಯಿತು. ಟ್ರ್ಯಾಕ್ಟರ್‍ಗಳಲ್ಲಿ ಜಂತು ನಾಶಕ ಔಷಧವನ್ನು ಸಂಗ್ರಹಿಸಿ ಊರಿನ ಎಲ್ಲೆಡೆಯೂ ಸಿಂಪಡಿಸಿ, ಸಾರ್ವಜನಿಕರು ಮನೆಯಿಂದ ಹೊರಗೆ ಬರುವಾಗ ಕಡ್ಡಾಯವಾಗಿ ಮಾಸ್ಕ ಧರಿಸಿಕೊಂಡು ಸಂಚರಿಸಬೇಕು. ನೈರ್ಮಲ್ಯ ವಾತಾವರಣದಲ್ಲಿ ವಾಸಿಸಬೇಕು. ಯಾವುದೆ ರೋಗ ಲಕ್ಷಣಗಳು ಕಂಡು ಬಂದರೆ ತಕ್ಷಣವೇ ಸಮೀಪದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡು,ನೆಮ್ಮದಿ ಜೀವನ ನಡೆಸಿಕೊಂಡು, ಉತ್ತಮ ವಾತಾವರಣ ಕಲ್ಪಿಸಿಕೊಂಡು ಸುಂದರ ಜೀವನವನ್ನು ಕಳೆಯುತ್ತ,ಕರೋನದ ಬಗ್ಗೆ ಜಾಗ್ರತೆ ವಹಿಸಿಕೊಳ್ಳುವ ಮೂಲಕ ಇತರರಿಗೆ ಮಾದರಿಯಾಗಬೇಕು ಎಂದು PDO ಚಂದ್ರಶೇಖರ ಬಿ ಕಂದಕೂರ ಹೇಳಿದರು. ಗ್ರಾಮ ಪಂಚಾಯಿತಿ ಸದಸ್ಯ ಮಹೇಶ ಕನ್ನಾಳ ಸೇರಿದಂತೆ ಇತರೆ ಪಂಚಾಯಿತಿ ಸದಸ್ಯರು ಸ್ಯಾನಿಟೈಜೆಶನ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.   ವರದಿ – ಸುಭಾಷ್ ಚಂದ್ರ ಜುಮಲಾಪೂರ

Leave a Reply

Your email address will not be published. Required fields are marked *