ಸರಕಾರಿ ಪ್ರೌಢ ಶಾಲೆ ಜುಮಲಾಪುರ ಕುಷ್ಟಗಿ ತಾಲೂಕಿನ ಜುಮಲಾಪುರ…

Spread the love

ಸರಕಾರಿ ಪ್ರೌಢ ಶಾಲೆ ಜುಮಲಾಪುರ ಕುಷ್ಟಗಿ ತಾಲೂಕಿನ ಜುಮಲಾಪುರ

2022-23 ನೆಯ ಸಾಲಿನಲ್ಲಿ ಪೂರೈಕೆಯಾಗಿರುವ  ಉಚಿತ ಸಮವಸ್ತ್ರ ಗಳನ್ನು ಬಾಲಕರಿಗೆ ಈ ದಿನ  ವಿತರಿಸಲಾಯಿತು .ಇದೀಗ ಬಾಲಕರಿಗಾಗಿ ಸಮವಸ್ತ್ರ ಪೂರೈಕೆಯಾಗಿದ್ದು ಇನ್ನು ಕೆಲವೇ ದಿನಗಳಲ್ಲಿ ಬಾಲಕಿಯರಿಗೂ ಸಮವಸ್ತ್ರ ಪೂರೈಕೆ ಆಗುತ್ತಿದ್ದು ಅವರಿಗೂ ತಕ್ಷಣವೇ ವಿತರಿಸಲಾಗುವದು ಹಾಗೂ ಬೇಡಿಕೆಯಂತೆಯೇ ಎಲ್ಲಾ ವಿದ್ಯಾರ್ಥಿಗಳಿಗೂ ಸಮವಸ್ತ್ರ ಪೂರೈಕೆ ಆಗಿದ್ದು ಈ ದಿನವೇ  ಎಲ್ಲರಿಗೂ ವಿತರಿಸಲಾಗುವುದು  ಎಂದು ಸಮವಸ್ತ್ರಗಳನ್ನು ವಿತರಿಸಿದ ಮುಖ್ಯೋಪಾಧ್ಯಾಯರಾದ ಶ್ರೀ ಸೋಮನಗೌಡ ಪಾಟೀಲ್ ಹೇಳಿದರು. ವಾರದಲ್ಲಿ 4 ದಿನ ಕಡ್ಡಾಯವಾಗಿ ಸಮವಸ್ತ್ರಗಳನ್ನು ಧರಿಸಿಕೊಂಡು ಶಾಲೆಗೆ ಬರತಕ್ಕದ್ದು ಹಾಗೂ  ಇದೊಂದು ಶಿಸ್ತಿನ ಆಯಾಮ ಎಂದು ವಿದ್ಯಾರ್ಥಿಗಳಿಗೆ ಶಿಸ್ತಿನ ಪಾಠ ತಿಳಿಸಿಕೊಟ್ಟರು .ಇದೇ ಸಂದರ್ಭದಲ್ಲಿ ಸಮವಸ್ತ್ರ ಹಾಗೂ ಪಠ್ಯಪುಸ್ತಕಗಳ ನೋಡಲ್ ಶಿಕ್ಷಕಿ  ಶ್ರೀಮತಿ ಅಕ್ಕಮ್ಮ ಅರಳಿಕಟ್ಟಿ ಯವರು ರಿಜಿಸ್ಟರ್ ನಲ್ಲಿ ಸಹಿ ಪಡೆದು  ಎಲ್ಲಾ ಮಕ್ಕಳಿಗೆ ಸಮವಸ್ತ್ರ ವಿತರಿಸುವ ಕಾರ್ಯ ನೆರವೇರಿಸಿದರು . ಆಯಾ ತರಗತಿ ಶಿಕ್ಷಕರು ಸಮವಸ್ತ್ರ ವಿತರಿಸುವ ಕಾರ್ಯದಲ್ಲಿ ನೆರವು ನೀಡಿ ಎಲ್ಲಾ ವಿದ್ಯಾರ್ಥಿಗಳಿಗೂ ಸಮವಸ್ತ್ರ ವಿತರಿಸುವ ಕಾರ್ಯ ನೆರವೇರಿಸಲಾಯಿತು.

ವರದಿ – ಚಂದ್ರುಶೇಖರ ಕುಂಬಾರ ಮುದೇನೂರು

Leave a Reply

Your email address will not be published.