ಮೋಹನ್ ಕುಮಾರ್ ದಾನಪ್ಪರ ಕಾರ್ಯ ಉನ್ನತ ಅಧಿಕಾರಿ ವರ್ಗಕ್ಕೆ ಮಾದರಿ- ಸಿಎಂ ಸಿದ್ದರಾಮಯ್ಯ.

Spread the love

ಮೋಹನ್ ಕುಮಾರ್ ದಾನಪ್ಪರ ಕಾರ್ಯ ಉನ್ನತ ಅಧಿಕಾರಿ ವರ್ಗಕ್ಕೆ ಮಾದರಿ- ಸಿಎಂ ಸಿದ್ದರಾಮಯ್ಯ.

ಬೆಂಗಳೂರು: 29, ಸಂಚಾರ ಜಾಗೃತಿಗಾಗಿ ಬೆಂಗಳೂರು ಮಹಾನಗರದಲ್ಲಿ ಆಗಸ್ಟ್ 15 ರಂದು “ಸಂಚಾರದಲ್ಲಿ ಮೊಬೈಲ್ ಬಿಡಿ, ಜಾಗ್ರತೆಯಿಂದ ಮನೆಗೆ ನಡಿ” ಶೀರ್ಷಿಕೆಯಡಿಯಲ್ಲಿ ಮ್ಯಾರಥಾನ್ ನಡೆಸಿ ರಾಜ್ಯದ ಗಮನ ಸೆಳೆದ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯರಾದ ಮೋಹನ್ ಕುಮಾರ್ ದಾನಪ್ಪನವರ ಕಾರ್ಯವನ್ನು ಪ್ರಶಂಸಿಸಿ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಪತ್ರದ ಮೂಲಕ ಅಭಿನಂದಿಸಿದ್ದಾರೆ

ಬಳ್ಳಾರಿ ಜಿಲ್ಲೆಯ ಕಂಪ್ಲಿ ನಗರ ನಿವಾಸಿ ಪ್ರಸ್ತುತ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯರಾದ ಮೋಹನ್ ಕುಮಾರ್ ದಾನಪ್ಪ ಅವರ ಸಾಮಾಜಿಕ ಕಾಳಜಿ ಅನನ್ಯವಾದದ್ದು,

ವಾಹನ ಚಾಲನೆಯಲ್ಲಿ ಮೊಬೈಲ್ ಬಳಕೆಯಿಂದಾಗುವ ಅಪಘಾತಗಳು ಜೀವಹಾನಿಗಳ ಬಗ್ಗೆ ಅಪಾರ ಕಾಳಜಿ ಹೊಂದಿ ಸಾರ್ವಜನಿಕರಿಗೆ ಸಂಚಾರ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ
“ಸಂಚಾರದಲ್ಲಿ ಮೊಬೈಲ್ ಬಿಡಿ, ಜಾಗೃತೆಯಿಂದ ಮನೆಗೆ ನಡಿ” ಎನ್ನುವ ಶೀರ್ಷಿಕೆಯಡಿ ಆಗಸ್ಟ್ 15, 2025 ರಂದು 79ನೇ ಸ್ವಾತಂತ್ರ್ಯೋತ್ಸವ ದಿನದ ಅಂಗವಾಗಿ ಬೆಂಗಳೂರು ಮಹಾನಗರದಲ್ಲಿ ಎರಡು ಗಂಟೆಗಳ ಕಾಲ ಬಲಗೈನಲ್ಲಿ ರಾಷ್ಟ್ರಧ್ವಜ, ಎಡಗೈನಲ್ಲಿ ಜಾಗೃತಿ ಭಿತ್ತಿಪತ್ರ ಹಿಡಿದು ವಿಭಿನ್ನವಾಗಿ ಸುಮಾರು 14 ಕಿಮೀ ಮ್ಯಾರಥಾನ್ ಓಟ ನಡೆಸಿ ರಾಜ್ಯದ ಗಮನ ಸೆಳೆದ ನಿಮ್ಮ ಕಾರ್ಯ ಶ್ಲಾಘನೀಯವಾದುದು,ತಮ್ಮ ದೇಶಾಭಿಮಾನ
ಸಾಮಾಜಿಕ ಸಮಸ್ಯೆಗಳ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ನಿಮ್ಮ ಕಳಕಳಿ, ವಿಶಿಷ್ಟ ಪ್ರಯತ್ನಗಳು ಅಭಿನಂದನಾರ್ಹ, ಮೋಹನ್ ಕುಮಾರ್ ದಾನಪ್ಪ ಅವರ ಸಮಾಜಮುಖಿ ಕಾರ್ಯಗಳು ಸರ್ಕಾರದ ಉನ್ನತ ಹುದ್ದೆಯ ಅಧಿಕಾರಿ ವರ್ಗಕ್ಕೂ ಮತ್ತು ಯುವಕರಿಗೆ ಮಾದರಿಯಾಗಿದೆ, ಮುಂದಿನ ದಿನಗಳಲ್ಲಿ ತಾವು ಇನ್ನಷ್ಟು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ರಾಜ್ಯದ ಕೀರ್ತಿ ಇನ್ನಷ್ಟು ಎತ್ತರಕ್ಕೆ ಎರುವಂತಾಗಲಿ ಎಂದು ಅಭಿನಂದಿಸಿದ್ದಾರೆ,

Leave a Reply

Your email address will not be published. Required fields are marked *