ಎಎಪಿ ಜಿಲ್ಲಾ ಘಟಕದವತಿಯಿಂದ ಮಾನ್ಯ ಜಿಲ್ಲಾಧಿಕಾರಿಗಳಿಗೆ ಹಾಗೂ ಸಹಾಯಕ ಆಯುಕ್ತರು ರವರಿಗೆ ಸರಕಾರಿ ಜಮೀನಿನಲ್ಲಿ ಕಾಣೆಯಾದ ಕೆ.ಎಸ್.ಆರ್.ಟಿ.ಸಿ. ಕಂಟ್ರೋಲ್ ಆಫೀಸ್ ಹುಡುಕಿ ಕೊಡುವ ಬಗ್ಗೆ ಹಾಗೂ ಅನಾಧಿಕೃತವಾಗಿ ಕಟ್ಟಿಕೊಂಡ ವ್ಯಾಪಾರ ಮಳಿಗೆಗಳನ್ನು ಕೂಡಲೇ ತೇರವುಗೊಳಿಸುವ ಕುರಿತು ಮನವಿ ಸಲ್ಲಿಸಲಾಯಿತು.

Spread the love

ಎಎಪಿ ಜಿಲ್ಲಾ ಘಟಕದವತಿಯಿಂದ ಮಾನ್ಯ ಜಿಲ್ಲಾಧಿಕಾರಿಗಳಿಗೆ ಹಾಗೂ ಸಹಾಯಕ ಆಯುಕ್ತರು ರವರಿಗೆ ಸರಕಾರಿ ಜಮೀನಿನಲ್ಲಿ ಕಾಣೆಯಾದ ಕೆ.ಎಸ್.ಆರ್.ಟಿ.ಸಿ. ಕಂಟ್ರೋಲ್ ಆಫೀಸ್ ಹುಡುಕಿ ಕೊಡುವ ಬಗ್ಗೆ ಹಾಗೂ ಅನಾಧಿಕೃತವಾಗಿ ಕಟ್ಟಿಕೊಂಡ ವ್ಯಾಪಾರ ಮಳಿಗೆಗಳನ್ನು ಕೂಡಲೇ ತೇರವುಗೊಳಿಸುವ ಕುರಿತು ಮನವಿ ಸಲ್ಲಿಸಲಾಯಿತು.

ಆಮ್ ಆದಿ ಪಾರ್ಟಿ  ಜಿಲ್ಲಾ ಘಟಕ ಹಾಗೂ  ತಾವರಗೇರಾ ಹೋಬಳಿ ಘಟಕದವತಿಯಿಂದ ಮನವಿ ಸಲ್ಲಿಸುವುದೇನಂದರೆ 1980 ರಿಂದ 1989 ರಲ್ಲಿ ಈ ಹಿಂದೆ ರಾಯಚೂರು ಜಿಲ್ಲೆ ಕುಷ್ಟಗಿ ತಾಲೂಕ ಇದ್ದ ಸಂದರ್ಭದಲ್ಲಿ ತಾವರಗೇರಾ ಪಟ್ಟಣದ ಸರಕಾರಿ ಜಮೀನಾದ ಸರ್ವೇ ನಂಬರ 51 ರಲ್ಲಿ 1 ಎಕರೆ 22 ಗುಂಟೆ ಜಮೀನಿದ್ದು , ಈ ಸರಕಾರಿ ಜಮೀನಿನಲ್ಲಿ ಮಾನ್ಯ ಸಹಾಯಕ ಆಯುಕ್ತರು ಲಿಂಗಸೂಗೂರು ಸರಕಾರದ ಆದೇಶದ ಪ್ರಕಾರ ಸುಮಾರು 17 ಜನರಿಗೆ ಬದುಕು ಕಟ್ಟಿ ಕೊಡಲು ಆದೇಶಸಿದ್ದು , ಕಾಯ್ದೆ G.O.No RD . 52. DGP , DATD 6.8.1981 ಈ ನಿಯಮದ ಪ್ರಕಾರ ಸರಕಾರಿ ಜಮೀನಿನಲ್ಲಿ ಅಂದರೆ ಸ.ನಂ 51 ರಲ್ಲಿ ಸುಮಾರು 17 ಜನರಿಗೆ ಮನೆಗಾಗಿ ಅತಿಕ್ರಮಿಸಲಾಗಿದವರಿಗೆ ಮೇಲಿನ ಖಾಯ್ದೆ ಪ್ರಕಾರ ಇವರ ಹೇಸರಿನಲ್ಲಿ ಆದೇಶ ಒರಡಿಸಲಾಗಿದ್ದು , ಅಂದರೆ ಸರಕಾರಿ ಆದೇಶದ ಪ್ರಕಾರ No. LND . HS . 84.85 ORDER ದಿನಾಂಕ : 13 / 12 / ರಿಂದ 1989 ರಲ್ಲಿ ಜನರಿಗೆ ಒಟ್ಟು 17 ಜಮೀನು ಆದೇಶ ನೀಡಿದ್ದು ಇರುತ್ತದೆ .. ಈ ಸದ್ಯ ಪಟ್ಟಣದ ಹೃದಯ ಭಾಗವಾಗಿದ್ದು , ಕೊಟೊಗಟ್ಟಲೆ ಬೆಲೆ ಬಾಳುವ ಆಸ್ಥಿಯಾಗಿದೆ.ಈ ಆದೇಶ ಪ್ರಕಾರ ಚಕ್ ಬಂದಿಯಲ್ಲಿ ಕೆ.ಎಸ್.ಆರ್.ಟಿ.ಸಿ. ಕಂಟ್ರೋಲ್ ಆಫೀಸ್ ಕಾರ್ಯಲಯ ಇದ್ದು , ಸದ್ಯ ಈ ಕೆ.ಎಸ್.ಆರ್.ಟಿ.ಸಿ. ಕಂಟ್ರೋಲ್ ಆಫೀಸ್ ಕಾಣೆಯಾಗಿದೆ . ಹಾಗಾಗಿ ಕಾಣೆಯಾದ ಕಂಟ್ರೋಲ್ ಆಫೀಸ್ ಹುಡುಕಿ ಕೊಡಬೇಕು , ಜೊತೆಗೆ ಇದೇ ಸರಕಾರಿ ಜಮೀನಿನಲ್ಲಿ ಅನಾಧಿಕೃತವಾಗಿ ಕಟ್ಟಿಕೊಂಡ ವ್ಯಾಪಾರ ಮಳಿಗೆಗಳನ್ನು ಕೂಡಲೇ ತೇರವುಗೊಳಿಸಬೇಕು , ಸಾರ್ವಜನಿಕರಿಗೆ ತೊಂದರೆಯಾಗದಂತೆ ಮುಂಜಾಗ್ರತೆ ವಹಿಸಬೇಕು , ಆದ್ದರಿಂದ ಈ ಜಮೀನಿನಲ್ಲಿ ಇದ್ದ ಕೆ.ಎಸ್.ಆರ್.ಟಿ.ಸಿ. ಕಂಟ್ರೋಲ್ ಆಫೀಸ್ ಮನಃಹ ಅದೇ ಜಾಗದಲ್ಲಿ ಸ್ಥಾಪಿತವಾಗಬೇಕೆಂದು ನಮ್ಮ ಪಾರ್ಟಿಯ ಆಗ್ರಹವಾಗಿದೆ. ಈ ಸಂದರ್ಭದಲ್ಲಿ ಎಎಪಿ ಜಿಲ್ಲಾ ಘಟಕದವತಿಯಿಂದ ಮನವಿ ಸಲ್ಲಿಸಿದರು. 1) ಚಕ್ ಬಂದಿಯ ಪ್ರತಿ 2) 51 ಸರಕಾರಿ ಜಮೀನಿನ ಪಹಣಿ ಪ್ರತಿ ದಿನಾಂಕ : 05/08/2022 3) ಮಾನ್ಯ ಸಹಾಯಕ ಆಯುಕ್ತರು ನೀಡಿದ ಆದೇಶದ ಪ್ರತಿ , 4) ಸರಕಾರಿ ಭೂಮಿಗೆ ಸಂಬಂದಿಸಿದ ಇತರ ದಾಖಲೆಗಳ ಪ್ರತಿ ಸಲ್ಲಿಸಲಾಗಿದೆ. ಈ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷರಾದ ಹುಸೇನ್ ಸಾಬ್ ಗಂಗನಾಳ ಕುಷ್ಟಗಿ ತಾಲೂಕು ಅಧ್ಯಕ್ಷರಾದ ರವಿಕುಮಾರ್ ಹೊಸಮನಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದಲಿಂಗೇಶ್ ಮುತ್ತಳ್ ಕುಷ್ಟಗಿ ತಾಲೂಕು ಪ್ರಧಾನ ಕಾರ್ಯದರ್ಶಿ ಬಾಲರಾಜ್ ಯಾದವ್ ತಾಲೂಕು ಸಂಘಟನಾ ಕಾರ್ಯದರ್ಶಿ ಯಮನೂರಪ್ಪ ಬೀಳೇಗುಡ್ಡ ಪಕ್ಷದ ಹಿರಿಯ ಮುಖಂಡರಾದ ತುಕಾರಾಮ ಲಮಾಣಿ ಮಾಧ್ಯಮ ಪ್ರತಿನಿಧಿ ಅಲಿ ಆದಿಲ್ ಜಿಲ್ಲಾ ಯುವ ಘಟಕ ಜಂಟಿ ಕಾರ್ಯದರ್ಶಿ ಎಲ್ಲಪ್ಪ ಭೋವಿ ಜಿಲ್ಲಾ ಮಾಧ್ಯಮ ಪ್ರತಿನಿಧಿ ರಾಘವೇಂದ್ರ ಸಿದ್ದಿಕೇರಿ ವಿರುಪಣ್ಣ ಗಣೇಶ್ ಬಸಮ್ಮ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವರದಿ – ಸಂಪಾದಿಕೀಯ

Leave a Reply

Your email address will not be published. Required fields are marked *