ಸಸಿಗಳನ್ನು ನೆಟ್ಟು, ಪರಿಸರ ಸಂರಕ್ಷಿಸಿ: ಶೈಲೇಂದ್ರ ಕವಡಿ.

Spread the love

ಸಸಿಗಳನ್ನು ನೆಟ್ಟು, ಪರಿಸರ ಸಂರಕ್ಷಿಸಿ: ಶೈಲೇಂದ್ರ ಕವಡಿ.

ಕಮಲಾಪೂರ : ಸುಧಾರಿತ ತಂತ್ರಜ್ಞಾನಗಳು ಪರಿಸರವನ್ನು ನಾಶಪಡಿಸುತ್ತವೆ, ಇದು ಪ್ರಕೃತಿಯ ಅಸಮತೋಲನಕ್ಕೆ ಕಾರಣವಾಗುತ್ತದೆ. ಕೈಗಾರಿಕಾ ಕಂಪನಿಗಳಿಂದ ಪ್ರತಿದಿನ ಹೊರಸೂಸುವ ಹಾನಿಕಾರಕ ಹೊಗೆ ನೈಸರ್ಗಿಕ ಗಾಳಿಯನ್ನು ಕಲುಷಿತಗೊಳಿಸುತ್ತಿದೆ. ಈ ಗಾಳಿಯು ಮನುಷ್ಯರು, ಪ್ರಾಣಿಗಳು ಮತ್ತು ಇತರ ಜೀವಿಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ, ಅವರು ಅದನ್ನು ಪ್ರತಿದಿನ ಉಸಿರಾಡುತ್ತಾರೆ.ನಮ್ಮ ಬಿಡುವಿಲ್ಲದ ಮತ್ತು ಮುಂದುವರಿದ ಜೀವನಶೈಲಿಯಲ್ಲಿ, ನಾವು ಪ್ರತಿದಿನ ಈ ರೀತಿಯ ಸಣ್ಣ ಕೆಟ್ಟ ಅಭ್ಯಾಸಗಳ ಬಗೆ ಕಾಳಜಿ ವಹಿಸಬೇಕು. ಈ ನಿಟ್ಟಿನಲ್ಲಿ ಪರಿಸರ ನಾಶದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಎಲ್ಲರೂ ಸ್ವಲ್ಪ ಪ್ರಯತ್ನ ಮಾಡಬೇಕಾದುದು ಮುಖ್ಯ. ನಮ್ಮ ಪರಿಸರವನ್ನು ಸುರಕ್ಷಿತ ಮತ್ತು ಮಾಲಿನ್ಯ ಮುಕ್ತಗೊಳಿಸಲು ನಾವು ಉಪಕ್ರಮವನ್ನು ತೆಗೆದುಕೊಳ್ಳಬೇಕು.ಈ ಮೂಲಕ ಹೆಚ್ಚೆಚ್ಚು ಸಸಿಗಳನ್ನು ನೆಟ್ಟು, ಪರಿಸರ ಸಂರಕ್ಷಣೆ ಮಾಡಬೇಕೆಂದು ಪತ್ರಕರ್ತ,ಪರಿಸರವಾದಿ ಶೈಲೇಂದ್ರ ಕವಡಿಯವರು ಹೇಳಿದರು. ಪಟ್ಟಣದ ರೇವಣ್ಣಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಜರುಗಿದ ಗುರುಪಾದ ಶಂಕ್ರೇಪ್ಪಾ  ಮಾಲಿಪಾಟೀಲ ಕಲ್ಲಹಿಪ್ಪರಗಾ ಹಾಗೂ ಪಲ್ಲವಿ ಶಂಭುಲಿಂಗ ಬಿಜಾಪನೂರ ರಾಜನಾಳ ಇವರ ಭಾಷಣಕಿ ಕಾರ್ಯಕ್ರಮದಲ್ಲಿ ಮದುಮಕ್ಕಳಿಗೆ ಸಸಿಗಳನ್ನು ಕೊಟ್ಟು ಮಾತನಾಡಿದ ಅವರು ಪರಿಸರ ಜಾಗೃತಿ ಮೂಡಿಸುವ ಕೆಲಸ ನಿರಂತರವಾಗಿ ಮಾಡಲಾಗುತ್ತಿದೆ.ಇದಕ್ಕೆ ಸರ್ವರ ಸಹಕಾರ ಅಗತ್ಯವಾಗಿದೆ. ಈ ದಿಸೆಯಲ್ಲಿ ಮದುಮಕ್ಕಳು ಸಸಿಗಳನ್ನು ನೆಟ್ಟು, ಅವರ ಹೊಸ ಜೀವನಕ್ಕೆ ಪಾದಾರ್ಪಣೆ ಮಾಡಬೇಕು.ಈ ಮೂಲಕ ಪರಿಸರ ಸಂರಕ್ಷಣೆ ಮಾಡಲು ಮುಂದಾಗಬೇಕೆಂದರು.  ವಿಕಾಸ ಅಕಡಾಮಿಯ ಪ್ರಮುಖರು,ಸಾಹಿತಿಗಳಾದ ಶಿವಶಂಕರ್ ತರನ್ನಳ್ಳಿ ಹುಮನಾಬಾದರವರು ಮಾತನಾಡಿ ಪರಿಸರವನ್ನು ಉಳಿಸಲು ಜಾಗೃತಿ ಮತ್ತು ಸ್ಪೂರ್ತಿದಾಯಕ ಭಾಷಣಗಳು ಸಾಕಾಗುವುದಿಲ್ಲ. ಪರಿಸರವನ್ನು ರಕ್ಷಿಸಲು ನಾವು ಬಲವಾದ ಉಪಕ್ರಮವನ್ನು ತೆಗೆದುಕೊಳ್ಳಬೇಕು. ಆರೋಗ್ಯಕರ ವಾತಾವರಣ ನಿರ್ಮಿಸಲು ಜನರು ಗಿಡ ನೆಡುವ ಕಾರ್ಯದಲ್ಲಿ ಪಾಲ್ಗೊಳ್ಳಬೇಕು ಎಂದು ಕರೆಯನ್ನು ನೀಡಿದರು. ಸಮಾಜಿಕ ಕಾರ್ಯಕರ್ತ ಅಸ್ಲಾಂಮೀಯಾ ಆಜಾಮ್ ಸ್ವೀಟ್ ಹೌಸ್ ರವರು ಮಾತನಾಡಿ ಸ್ವಚ್ಛ ಮತ್ತು ಆರೋಗ್ಯಕರ ಪರಿಸರವನ್ನು ಕಾಪಾಡಿಕೊಳ್ಳಲು ಎಲ್ಲರೂ ಮುಂದಾಗಬೇಕು ಮತ್ತು ಒಟ್ಟಾಗಿ ಕೆಲಸ ಮಾಡಬೇಕು. ಸಭೆ ಸಮಾರಂಭಗಳಲ್ಲಿ ಪರಿಸರ ಕುರಿತು ಹೆಚ್ಚು ಹೆಚ್ಚು ಜಾಗೃತಿ ಮೂಡಿಸುವ,ಪರಿಸರ ಸಂರಕ್ಷಣೆಯ ಮಾಡುವ ಕಾರ್ಯ ಚಟುವಟಿಕೆಗಳು ಮಾಡಬೇಕೆಂದರು. ಕಾರ್ಯಕ್ರಮದಲ್ಲಿ ಸಾಹಿತಿ, ಪತ್ರಕರ್ತ ಸಂಗಮೇಶ ಎನ್ ಜವಾದಿ, ಚಂದ್ರಶೇಖರ ನಾರಾಯಣಪೇಟ,ರವಿ ಲಿಂಗಣಿ,ವಿಠಲರಾವ ಕೋರಿ,ರಾಜಪ್ಪಾ ಗಜ್ಜರೆ,ವಿಜಯಕುಮಾರ್ ಗಜ್ಜರೆ,ಚಂದ್ರಕಾಂತ ರಂಜೇರಿ, ಬಸವರಾಜ ಪಾಟೀಲ, ಶೇಖರ್ ಮಾಸ್ಟರ್, ನಾಗರಾಜ್ ಬಿಜಾಪನೂರ್, ಶರಣು ರಂಜೇರಿ, ಶೌರ್ಯ ಜವಾದಿ,ಲಕ್ಷ್ಮಿ ಬಿಜಾಪನೂರ್ ಸೇರಿದಂತೆ ಮಾಲಿಪಾಟೀಲ ಹಾಗೂ ಬಿಜಾಪನೂರ್ ಬಂಧುಗಳು ಉಪಸ್ಥಿತರಿದ್ದರು.

ವರದಿ – ಸಂಗಮೇಶ ಎನ್ ಜವಾದಿ.

Leave a Reply

Your email address will not be published. Required fields are marked *