ತಾವರಗೇರಾ ಪಟ್ಟಣ ಪಂಚಾಯತಿಯ ಮುಂದೆ ಪ್ರತಿಭಟನೆ ನಡೆಸಿದ ದಿನಗೂಲಿ ನೌಕರರ…..

Spread the love

ತಾವರಗೇರಾ ಪಟ್ಟಣ ಪಂಚಾಯತಿಯ ಮುಂದೆ ಪ್ರತಿಭಟನೆ ನಡೆಸಿದ ದಿನಗೂಲಿ ನೌಕರರ…..

ತಾವರಗೇರಾ ಪಟ್ಟಣ ಪಂಚಾಯತಿಯ ಮುಂದೆ ದಿನಗೂಲಿ ನೌಕರರ ಪ್ರತಿಭಟನೆ  ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ  ವ್ಯಕ್ತಪಡಿಸಿದರು. ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಮುಖ್ಯಾಧಿಕಾರಿಗಳಿಗೆ ಮನವಿ ನೀಡಲು ಮುಂದಾದರು.  ಹೊರಗುತ್ತಿಗೆ ನೌಕರರನ್ನು ಖಾಯಂ ಸರ್ಕಾರಿ ನೌಕರರೆಂದು ಪರಿಗಣಿಸಿ ಹಾಗೂ ಕೆಲಸದಿಂದ ವಜಾಗೊಳಿಸಿದ ಉದ್ಯೋಗಿಗಳನ್ನು ವಾಪಸ್ ತಗೆದುಕೊಳ್ಳುವಂತೆ ಆಗ್ರಹಿಸಿ ಎ.ಐ.ಸಿ.ಸಿ.ಟಿ.ಯು. ದಿನಗೂಲಿ ನೌಕರರು ಪ್ರತಿಭಟನೆ ನಡೆಸಿದರು. ಪ್ರತಿಭಟನಕಾರರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದರು. ಸುಪ್ರೀಂಕೋರ್ಟ್ ನಿರ್ದೇಶನದಂತೆ ಹೊರಗುತ್ತಿಗೆ ನೌಕರರ ಹಿತರಕ್ಷಣೆ ಕಾಯುವಂತೆ ಸರ್ಕಾರ ಮುಂದಾಗಬೇಕು. ಹೊರ ರಾಜ್ಯಗಳಂತೆ ಕರ್ನಾಟಕದಲ್ಲೂ ಹೊರಗುತ್ತಿಗೆ ಕಾರ್ಮಿಕರನ್ನು ಖಾಯಂಗೊಳಿಸಿ ಅವರಿಗೆ ವೇತನ ಭತ್ಯೆ ನೀಡಬೇಕು ಎಂದು ಒತ್ತಾಯಿಸಿದರು. ಎ.ಐ.ಸಿ.ಸಿ.ಟಿ.ಯು. ಸಂಘಟನೆಯವರಿಗೆ ಕ.ನ.ಸೇ ಸಂಘಟನೆಯಿಂದ ಸಾಥ್ ನೀಡಿ ಈ ಹೋರಾಟಕ್ಕೆ ಬೆಂಬಲ ನೀಡಿದರು.

ವರದಿ – ಸೋಮನಾಥ ಎಚ್.ಎಮ್.

Leave a Reply

Your email address will not be published. Required fields are marked *