ಜುಮಲಾಪೂರ ಶಾಲೆಯಲ್ಲಿ ನೂತನ ಎಸ್ ಡಿ ಎಂ ಸಿ ರಚನೆ. ಅಧ್ಯಕ್ಷರಾಗಿ ಬಸವರಾಜ ಬಡಿಗೇರ  ಆಯ್ಕೆ,,,,,,,

Spread the love

ಜುಮಲಾಪೂರ ಶಾಲೆಯಲ್ಲಿ ನೂತನ ಎಸ್ ಡಿ ಎಂ ಸಿ ರಚನೆ. ಅಧ್ಯಕ್ಷರಾಗಿ ಬಸವರಾಜ ಬಡಿಗೇರ  ಆಯ್ಕೆ,,,,,,,

ಜುಮಲಾಪೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು  2022 = 2023ನೂತನ ಎಸ್ ಡಿ ಎಂ ಸಿ ರಚನೆ ಮಾಡಲಾಯಿತು. ಈ ಸಂಧರ್ಭದಲ್ಲಿ ಮುಖ್ಯವಾಗಿ ಈ ಸಭೆಗೆ ಪಾಲಕರನ್ನು  ಶಾಲಾ ಶಿಕ್ಷಕರಾದ ನಂದ ಬಸಪ್ಪ  ಸ್ವಾಗತಿಸಿದರು. ತದನಂತರದಲ್ಲಿ ಈ ಎಸ್ ಡಿ ಎಂ ಸಿ ಯ  ನೂತನ ಸದಸ್ಯರು ಆಯ್ಕೆ ಪ್ರಕ್ರಿಯೆಯನ್ನು ಸವಿಸ್ತರವಾಗಿ ತಿಳಿಸಿದರು. ಹಾಗೆ ಇದರಲ್ಲಿ ಒಟ್ಟು 18 ಸ್ಥಾನಗಳು ಇದ್ದು ಇದರಲ್ಲಿ ಪರಿಶಿಷ್ಟ ಜಾತಿ. ಪು 2. ಮ 1. ಪರಿಶಿಷ್ಟ ಪಂಗಡ. ಪು 3.ಮ 2. ಪ್ರ ವರ್ಗ 1 ಪು 1.ಮ 1. ಕುರುಬರು ಪು 2.ಮ 2.  ಮುಸ್ಲಿಂ ಮ 1. ಇತರೆ ಪು 1.ಮ 2. ಸ್ಥಾನಗಳು ಮಿಸಲು ಇದ್ದು ಇದರಂತೆ  ಆಯ್ಕೆ ಮಾಡಿ ಕೊಡಬೇಕೆಂದು ತಿಳಿಸಿದರು. ತದನಂತರದಲ್ಲಿ  ಶಾಲಾ ಪಾಲಕರು ಎಲ್ಲರೂ ಸೇರಿ  ಎಸ್ ಡಿ ಎಂ ಸಿ ಮಾರ್ಗಸೂಚಿಯಂತೆ  18 ಸದಸ್ಯರನ್ನು ಆಯ್ಕೆ ಮಾಡಿದರು. ತದನಂತರದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕೈ ಎತ್ತುವ ಮುಖಾಂತರ ಬಹುಮತದಿಂದ ಬಸವರಾಜ ಬಡಿಗೇರ ಅವರನ್ನು ಆಯ್ಕೆ ಮಾಡಿದರು. ಉಪಾಧ್ಯಕ್ಷ ಸ್ಥಾನಕ್ಕೆ ಆಸ್ಮಾ ಬೆಗಂ ಅವರನ್ನು ಸರ್ವ ಸದಸ್ಯರು ಕೈ ಎತ್ತುವ ಮುಖಾಂತರ ಆಯ್ಕೆ ಮಾಡಲಾಯಿತು. ಈ ಸಂಧರ್ಭದಲ್ಲಿ   ತಾವರಗೇರ ಪೊಲೀಸ್ ಠಾಣೆಯ ಎ ಎಸ್ ಐ ಮಲ್ಲಪ್ಪ ವಜ್ರದ ಇದ್ದರು  ಮತ್ತು ಶಾಲಾ ಮುಖ್ಯೋಪಾಧ್ಯಾಯರಾದ  ಶ್ರೀ ಗುರುಪಾದಮ್ಮರವರು  ನೂತನ ಅಧ್ಯಕ್ಷ ಸದಸ್ಯರನ್ನು ಶಾಲು ಹಾರ ಹಾಕಿ ಪುಸ್ಪ ನಿಡುವದರ ಮುಖಾಂತರ ಸ್ವಾಗತಿಸಿದರು. 1 ರಾಮಣ್ಣ ಭಜಂತ್ರಿ.  2 ಹುಲಗಪ್ಪ ಪೂಜಾರಿ. 3 ಪಾರ್ವತಿ ದುರುಗಪ್ಪ ಚಲವಾದಿ. 4 ಶರಣಪ್ಪ ದುರುಗಪ್ಪ ಹೊಸಪೇಟೆ. 5 ರಾಘವೇಂದ್ರ ಹನುಮಪ್ಪ ನಾಯಕ. 6 ಸಣ್ಣ ಹನುಮಪ್ಪ ಸಂಗಪ್ಪ ಕೆರಿಹೋಲ. 7 ಬಾಳಮ್ಮ ರಾಮಣ್ಣ ಕೆರಿಹೋಲ. 8 ಯಂಕಮ್ಮ ರಾಘವೇಂದ್ರ ನಾಯಕ. 9 ಅಮಾಜಪ್ಪ ಹುಲಗಪ್ಪ ಗಂಗಾಮತ. 10 ದುರಗಮ್ಮ ದೊಡ್ಡಬಸಪ್ಪ ಗಂಗಾಮತ. 11 ಪಾಂಡಪ್ಪ ಮಲ್ಲಪ್ಪ ಬಳೂಟಗಿ. 12 ಶಂಕ್ರಪ ಕೆಂಚಪ್ಪ ಬೊದುರ. 13 ಪಾರ್ವತಿ ಪಾಂಡಪ್ಪ ಟಕ್ಕಳಕಿ. 14 ಬಸಮ್ಮ ದೊಡ್ಡಪ್ಪ ದಂಡಿನ. 15 ಅಮರಮ್ಮ ಸೋಮಲಿಂಗಪ್ಪ ಹಿರೇಮಠ. 16 ದ್ರಾಕ್ಷಾಯಿಣಿ ದೇವಪ್ಪ ಮಾಸ್ತರ. ಸದಸ್ಯರಾಗಿ ಆಯ್ಕೆಯಾದರು. ಈ ಸಂಧರ್ಭದಲ್ಲಿ ಊರಿನ ಹಿರಿಯರು ಹಾಗೂ ಯುವಕರು ಶಾಲಾ ಶಿಕ್ಷಕರು ಹಾಜರಿದ್ದರು.

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *