ದೇಶದ ಕೃಷಿ ಬಿಕ್ಕಟ್ಟಿಗೆ ಸಂಬಂಧಿಸಿ ಬೆಂಗಳೂರಿನಲ್ಲಿ   ಎರಡು (ಜೂನ್ 25,26-2022) ದಿನಗಳವರಿಗೆ ನಡೆದ ದುಂಡುಮೇಜಿನ ಸಭೆಯಲ್ಲಿ ಅನೇಕ ಮಹತ್ವವಾದ ವಿಷಯಗಳು ವ್ಯಕ್ತಪವಾದವು.

Spread the love

ದೇಶದ ಕೃಷಿ ಬಿಕ್ಕಟ್ಟಿಗೆ ಸಂಬಂಧಿಸಿ ಬೆಂಗಳೂರಿನಲ್ಲಿ   ಎರಡು (ಜೂನ್ 25,26-2022) ದಿನಗಳವರಿಗೆ ನಡೆದ ದುಂಡುಮೇಜಿನ ಸಭೆಯಲ್ಲಿ ಅನೇಕ ಮಹತ್ವವಾದ ವಿಷಯಗಳು ವ್ಯಕ್ತಪವಾದವು.

ಸಂಯುಕ್ತ ಕಿಸಾನ್ ಮೋರ್ಚಾ (SKM) ನ ಮುಖಂಡರಲ್ಲಿ ಒಬ್ಬರಾದ ಅಶೋಕ್ ಧವಳೆ  (ನವ ದೆಹಲಿ) ಮತ್ತು ಮಹಾರಾಷ್ಟ್ರದ ದತ್ತ ದೇಸಾಯಿ,  ಆನಂದ ಕುಮಾರ, ಉತ್ತರ ಪ್ರದೇಶದ ನಿವೃತ್ತ ಐಜಿಪಿ ಎಸ್.ಆರ್. ದಾರಾಪುರಿ ಮಧ್ಯಪ್ರದೇಶ, ಬೇರೆ ರಾಜ್ಯಗಳ ಅನೇಕ ಹೋರಾಟಗಾರರು, ಬುದ್ದಿ ಜೀವಿಗಳು ಸಭೆಯಲ್ಲಿ ಭಾಗವಹಿಸಿದ್ದರು. 1960 ದಶಕದಲ್ಲಿ ಆರಂಭಗೊಂಡ ಹಸಿರು ಕ್ರಾಂತಿ, 1992 ನೂತನ ಆರ್ಥಿಕ ನೀತಿಗಳು, 1994 WTO ಒಪ್ಪಂದದ ಸಾಧಕ ಬಾಧಕಗಳ ಕುರಿತು ಚರ್ಚೆಗಳು ನಡೆದವು. ಹಸಿರು ಕ್ರಾಂತಿಯ ಕೃಷಿ ಅಭಿವೃದ್ಧಿ ಯೋಜನೆಗಳು  ವಿಶ್ವ ಬ್ಯಾಂಕ್ , IMF ನಿರ್ದೇಶಿತ  ಯೋಜನೆಗಳಾಗಿದ್ದವು. ಈ ಕಾಲಾವಧಿಯಿಂದಲೆ‌  ಬಹುರಾಷ್ಟ್ರೀಯ ಕಂಪನಿಗಳು (ಆಳುವ ಸರ್ಕಾರದ ಮೂಲಕ) ಕೃಷಿಯಲ್ಲಿ ಬಂಡವಾಳ ಹೂಡಿಕೆ ಮಾಡಲು ಪ್ರಾರಂಭಿಸಿದವು.  ಉದಾಹರಣೆಗೆ, ಡ್ಯಾಂ ನಿರ್ಮಾಣ, ನೀರಾವರಿ ಯೋಜನೆಗಳು, ಟ್ರ್ಯಾಕ್ಟರ್ ಇತರೆ ಆಧುನಿಕ ಕೃಷಿ ಯಂತ್ರಗಳ ತಯಾರಿಕೆ, ಬೀಜ,  ರಸಗೊಬ್ಬರ  ಕಾರ್ಖಾನೆಗಳ ನಿರ್ಮಾಣ ಇತರೆ ಕೃಷಿ ಅಭಿವೃದ್ಧಿ ಯೋಜನೆಗಳಿಗೆ  ವಿಶ್ವ ಬ್ಯಾಂಕಿನಿಂದಲೆ ಸಾಲ ಪಡೆಯಲಾಗುತ್ತಿತ್ತು. ಅಂದರೆ ಅಮೆರಿಕ, ಬ್ರಿಟನ್, ಪ್ರಾನ್ಸ್ ಇತರೆ  ಬಲಿಷ್ಠ ದೇಶಗಳು ವಿಶ್ವ ಮೂಲಕ  ಸರ್ಕಾರ ಕ್ಕೆ ಸಾಲ ಕೊಟ್ಟು ಕೃಷಿಯ 90 ರಷ್ಟು ಲಾಭವನ್ನು ತಮ್ಮದಾಗಿಕೊಳ್ಳಲು ಪ್ರಾರಂಭಿಸಿದವು. ವಿಶ್ವ ಬ್ಯಾಂಕ್, IMF, ಬಹುರಾಷ್ಟ್ರೀಯ ಕಂಪನಿಗಳು   60 ವರ್ಷಗಳ ಹಿಂದಿನಿಂದಲೆ ತೆರೆಮರೆಯ ಮೂಲಕ  ಸರ್ಕಾರಗಳನ್ನು ನಿಯಂತ್ರಿಸುತ್ತಿದ್ದವು‌. 1991 ರಿಂದ ಅರೆ ತರೆಮರೆಯಲ್ಲಿ ನಿಯಂತ್ರಿದ್ದರೆ, 2014 ನಂತರ ಜಗಜ್ಜಾಹೀರಾಗಿ ಸರ್ಕಾರವನ್ನು ಸಂಪೂರ್ಣ ನಿಯಂತ್ರಿಸುತ್ತಿವೆ.  ಈ ಎಲ್ಲಾ ಹಿನ್ನೆಲೆಯಲ್ಲಿಯೇ ದೇಶದ ಸಾಲ 130 ಲಕ್ಷ ಕೋಟಿಗೆ ಹೇಳಿಕೆಯಾಗಿದೆ.ಅಂಬಾನಿ ಅದಾನಿ ಸಂಪತ್ತು 8,9 ಲಕ್ಷ ಕ್ಕಿಂತ ಹೆಚ್ಚಾಗಿದೆ. 1991 ರಿಂದ ಇಲ್ಲಿಯವರೆಗೆ 4.5 ಲಕ್ಷ ರೈತರು ಆತ್ಮಹತ್ಯೆಯಿಂದ ಪ್ರಾಣ ಕಳೆದುಕೊಂಡಿದ್ದಾರೆ.   (ಸರ್ಕಾರದ ವರದಿ ಪ್ರಕಾರ) ಮಾನವ ಹಕ್ಕುಗಳ  ತಜ್ಞರ  ಸರ್ವೇ ವರದಿ ಹತ್ತಾರು ಲಕ್ಷ ಎನ್ನುತ್ತಿದೆ.  ಸಂಯುಕ್ತ ಹೋರಾಟ-ಕರ್ನಾಟಕ ಬೆಂಬಲದೊಂದಿಗೆ ಜನಾಂದೋಲನ ಮಹಾ ಮೈತ್ರಿ, ಜನ ಸಂಗ್ರಾಮ ಪರಿಷತ್ ಇತರೆ ಸಂಘಟನೆಗಳು ಸಭೆಯನ್ನು ಆಯೋಜಿಸಿದ್ದವು. ಡಿ.ಹೆಚ್.ಪೂಜಾರ SKM ಪರವಾಗಿ.

ವರದಿ- ಸಂಪಾದಕೀಯ

Leave a Reply

Your email address will not be published. Required fields are marked *