ಸಂಗೀತಕ್ಕೆ ತಲೆದೂಗದವರಿಲ್ಲ, ಪ್ರಶಾಂತ ಸಾಗರ ಸ್ವಾಮೀಜಿ,,,,,

Spread the love

ಸಂಗೀತಕ್ಕೆ ತಲೆದೂಗದವರಿಲ್ಲ, ಪ್ರಶಾಂತ ಸಾಗರ ಸ್ವಾಮೀಜಿ,,,,,

ವಿಜಯನಗರ  ಜಿಲ್ಲೆ  ಕೂಡ್ಲಿಗಿ, ಸಂಗೀತ ಸರ್ವರೋಗಗಳಿಗೂ ಮದ್ದು ಎಂಬ ಮಾತಿದೆ. ಸಂಗೀತಕ್ಕೆ ಎಂಥವರೂ ಕೂಡ ತಲೆದೂಗುತ್ತಾರೆ, ಸುರ ಕೂಡ ಸಂಗೀತಕ್ಕೆ ಮಾರು ಹೋಗಿರುವುದಾಗಿ ಪುರಾಣಗಳಿಂದ ತಿಳಿಯ ಬಹುದಾಗಿದೆ  ಎಂದು ಪ್ರಶಾಂತ ಸಾಗರ ಸ್ವಾಮೀಜಿ ನುಡಿದರು. ಅವರು ಕೂಡ್ಲಿಗಿ ಚಂದ್ರೇಶೇಖರ ಆಜಾದ್ ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ, ಶ್ರೀ ಮಾಯಮ್ಮ ದೇವಿ ತೊಗಲು ಗೊಂಬೆ ಕಲಾಟ್ರಸ್ಟ್ ವತಿಯಿಂದ ಯುವ ಗಾಯಕರಿ ಗೊಂದು ಕರೋಕೆ ಹಾಡಿನ ಸ್ಪರ್ದೆಯ ವೇದಿಕೆ ಸಾನಿಧ್ಯ ವಹಿಸಿ ಮಾತನಾಡಿದರು. ಅತ್ಯದ್ಭುತ ಶಕ್ತಿಯುತವಾದ ಕಲೆ ಸಂಗೀತ ಕಲೆಯಾಗಿದೆ ಆ ಕಲೆಯ ಆರಾಧಕರೇ ನಿಜವಾದ ಸಂಗೀತ ಕಲಾವಿದರು, ಈ ವೇದಿಕೆ ಮೂಲಕ ಪ್ರತಿಭಾನ್ವಿತ ಸಂಗೀತ ಕಲಾವಿದರನ್ನು ಗುರುತಿಸಿ. ಅವರಿಗೆ ವೇದಿಕೆ ಸೂಕ್ತ ವೇದಿಕೆ ಕಲ್ಪಿಸಿ ಪ್ರೋತ್ಸ‍ಾಯಿಸಲ‍ಾಗುತ್ತಿದೆ. ಅವರನ್ನು  ಸಮಾಜಕ್ಕೆ ಪರಿಚಯಿಸುವ ಮಹಾಕಾರ್ಯ  ನಡೆದಿದ್ದು, ಸ್ಪರ್ಧೆಯನ್ನು  ಆಯೋಜಿಸಿರುವವರು ನಿಜಕ್ಕೂ ಕಲ‍ಾರಾಧಕರೇ ‍ಆಗಿದ್ದಾರೆ  ಎಂದು ಸ್ವಾಮೀಜಿ ನುಡಿದರು. ಪಪಂ ಸದಸ್ಯ ಕಾವಲ್ಲಿ ಶಿವಪ್ಪ ಮಾತನಾಡಿದರು, ಕೂಡ್ಲಿಗಿ ಇತಿಹಾಸದಲ್ಲಿಯೇ ಅಚ್ಚಳಿಯದಂತಹ ವೇದಿಕೆಯಾಗಿದ್ದು. ಇಂತಹ ಉತ್ತಮ ವಾದ ವೇದಿಕೆಗಳ ಮೂಲಕ ತಾಲೂಕಿನ ಯುವ ಪೀಳಿಗೆ ಯೊಳಗಿನ, ಸಂಗೀತ ಪ್ರತಿಭೆಗಳನ್ನು ಅನಾವರಣ ಗೊಳಿಸುವ ಕಾರ್ಯಕ್ಕೆ ವೇದಿಕೆ ಸಾಕ್ಷಿಯಾಗಲಿದೆ. ಇಂತಹ ಚಟುವಟಿಕೆಗಳಿಗೆ ತಮ್ಮ ಸಹಕಾರ ಸದಾ ಇರುತ್ತದೆ,  ಸಂಗೀತ ಸ್ಪರ್ಧೆಯಂತಹ ಸ್ಪರ್ಧೆಗಳು ಪಟ್ಟಣದಲ್ಲಿ ಯುವಕರು ಆಯೋಜಿಸುತ್ತಿರಲಿ. ಪ್ರತಿಭೆಗಳನ್ನು ಮುಖ್ಯವಾಹಿನಿಗೆ ತರಲಿ ಈ ನಿಟ್ಟಿನಲ್ಲಿ ತಮ್ಮ ಸಹಕಾರ ಸದಾ ಇರುತ್ತದೆ ಎಂದರು.  ಪ್ರ‍ಸ್ತಾವಿಕವಾಗಿ ಕಾರ್ಯಕ್ರಮ ಆಯೋಜಕರು ಹಾಗೂ ಯುವ ಕವಿಗಳಾದ ಮಂಜುನಾಥ  ಮಾತನಾಡಿ, ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಮತ್ತು ಎಸ್ಪಿ ಬಾಲಸುಬ್ರಹ್ಮಣ್ಯಂ ಇವರ ಸವಿನೆನಪಿಗಾಗಿ ಕಾರ್ಯ ಆಯೋಜಿಸಲಾಗಿದೆ. ಕಾರ್ಯಕ್ರಮ ತಂದೆಯವರಾದ ಮಹಾಂತೇಶ, ತಾಯಿ ಹಾಗೂ ಶ್ರೀ ಮಾಯಮ್ಮ ದೇವಿ ತೊಗಲು ಗೊಂಬೆ ಕಲಾ ಟ್ರಸ್ಟ್ ನ ಅಧ್ಯಕ್ಷರಾದ ಗೌರಮ್ಮರ ಕನಸಿನ ಕೂಸಾಗಿದೆ, ಅವರ ಆಶೀರ್ವಾದ ಹಾಗೂ ಸಂಘಟನೆಯ ಸರ್ವ ಪದಾಧಿಕಾರಿಗಳ ಸಹಕಾರದಲ್ಲಿ ಸ್ಪರ್ಧೆ ಆಯೋಜಿಸಲಾಗಿದೆ ಎಂದರು.  ಕಾರ್ಯಕ್ರಮ  ಕೂಡ್ಲಿಗಿ ಕೋಗಿಲೆ ಸೀಸನ್1 ಕಾರ್ಯಕ್ರಮ ತೀರ್ಪುಗಾರರಾಗಿ, ಹಂಪಿ ವಿವಿಯ ಸಂಗೀತ ಮತ್ತು ನೃತ್ಯ ವಿಭಾಗದ ಪ್ರಾಧ್ಯಾಪಕರಾದ ಡಾ”ತೇಜಸ್ವಿ ಹೆಗಡೆ, ಹಾಗೂ ಸಂಗೀತ ಹಾಗೂ ನೃತ್ಯ ವಿಭಾಗದ ಡಾ”ತಿಮ್ಮಣ್ಣ ಭೀಮರಾಯ, ತೊಗಲುಗೊಂಬೆ ಕಲಾವಿದರು ಹಾಗೂ ಕಲಾರತ್ನ ಪ್ರಶಸ್ತಿ ಪುರಸ್ಕೃತರಾದ ಎಸ್.ತಿಪ್ಪೇಸ್ವಾಮಿ ಇದ್ದರು. ಕೃಷ್ಣಮೂರ್ತಿ, ಟಿ.ವೆಂಕಟೇಶ್  ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಅಂತಿಮವಾಗಿ ಕೂಡ್ಲಿಗಿ ಕೋಗಿಲೆಯ ಸೀಸನ್ 1 ರ ವಿಜೇತರಾಗಿ,  ಪ್ರಥಮ ಸ್ಥಾನ: ಅರುಣಾ ಕುಷ್ಟಗಿ, ದ್ವಿತೀಯ ಸ್ಥಾನ: ಮಹಮ್ಮದ್ ರಫಿ ಕೊಪ್ಪಳ, ತೃತಿಯ ಸ್ಥಾನ: ಅನುಷಾ ಕೂಡ್ಲಿಗಿ ವಿಜೇತರು. ಹಾಗೂ ಸ್ಪರ್ದೆಯಲ್ಲಿ ಭಾಗವಹಿಸಿದ ಎಲ್ಲಾ ಸ್ಪರ್ದರ್ತಿಗಳಿಗೆ ಅಭಿನಂದನಾ ಪತ್ರ ವಿತರಿಸಲಾಯಿತು. ಟ್ರಸ್ಟ್ ವತಿಯಿಂದ  ಹಾಗೂ ವಿಜೇತರಿಗೆ ಪ್ರಶಸ್ಥಿ ಪ್ರಮಾಣ ಪತ್ರ,ಜೊತೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

ವರದಿ –   ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428

Leave a Reply

Your email address will not be published.