ಅವ್ಯವಸ್ಥೆಯಿಂದ ತುಂಬಿರುವ ಇಟಗಿ ಮೂರಾರ್ಜಿ ದೇಸಾಯಿ ವಸತಿ ಶಾಲೆ…….

Spread the love

ಅವ್ಯವಸ್ಥೆಯಿಂದ ತುಂಬಿರುವ ಇಟಗಿ ಮೂರಾರ್ಜಿ ದೇಸಾಯಿ ವಸತಿ ಶಾಲೆ…….

ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಇಟಗಿಯಲ್ಲಿ ಇರುವ ಹಿಂದುಳಿದ ವರ್ಗದ ಮೊರಾರ್ಜಿ ದೇಸಾಯಿ ವಸತಿ ಶಾಲೆಯು ಅವ್ಯವಸ್ಥೆಯಿಂದ ತುಂಬಿದೆ ಶಾಲೆಯ ಯಾವ ಕಡೆ ನೋಡಿದರು ಅವ್ಯವಸ್ಥೆಗೆ ತುಂಬಿ ತುಳುಕಾಡುತ್ತಿದೆ ವಿಜಯನಗರ ಜಿಲ್ಲೆಯಲ್ಲಿ ಕೆಲವು ಮುರಾರ್ಜಿ ದೇಸಾಯಿ ಶಾಲೆಗಳಿಗೆ ಹೋಲಿಸಿದರೆ ನಮ್ಮ ಹೂವಿನ ಹಡಗಲಿ ತಾಲೂಕಿನ ಇಟಗಿ ಯಲ್ಲಿ ಇರುವ ಮೊರಾರ್ಜಿದೇಸಾಯಿ ಶಾಲೆಯು ವಿಭಿನ್ನವಾಗಿದೆ. ಶಾಲೆಯ ಗೋಡೆಗಳು ಕಟ್ಟಡಗಳು ಸುಮಾರು ವರ್ಷಗಳಿಂದ ಬಣ್ಣ ಸುಣ್ಣ ಗಳನ್ನು ಕಾಣದೆ ಹೋಗಿವೆ ಗೋಡೆಯ ಯಾವ ಕಡೆ ನೋಡಿದರು ಧೂಳು ಜಾಡು ಹೆಣೆದಿರುವುದು ಕಾಣಿಸುತ್ತದೆ. ಮತ್ತು ಬಿರುಕು ಬಿಟ್ಟಿರುವ ಗೋಡೆಗಳು ಶಾಲೆಯ ಸುತ್ತ ಇರುವ ಕಾಂಪೌಂಡ್ ಕೆಲವು ಕಡೆ ಬಿರುಕು ಬಿಟ್ಟಿರುವುದು ಬಿರುಕು ಬಿಟ್ಟು ಕೆಲವು ಕಡೆ ಕಾಂಪೌಂಡ್ ಬಿದ್ದು ಹೋದ ಜಾಗದಲ್ಲಿ ಮತ್ತೆ ಪುನರ್ ಕಾಂಪೌಂಡ್ ನಿರ್ಮಿಸಿದ್ದಾರೆ.ಇನ್ನು ಕೆಲವು ಕಡೆ ಕಾಂಪೌಂಡ್ ಬೀಳುವ ಸ್ಥಿತಿಯಲ್ಲಿ ಇವೆ. ಈ ಮುರಾರ್ಜಿ ದೇಸಾಯಿ ಶಾಲೆಯ ಕೆಲವು ವಿದ್ಯಾರ್ಥಿಗಳು ವ್ಯಾಸಂಗ ಮಾಡುವ ಕೊಠಡಿಗಳಿಗೆ ಸರಿಯಾದ ರೀತಿಯಲ್ಲಿ ಕಿಟಕಿ ಬಾಗಿಲುಗಳಿಲ್ಲ ಇದ್ದರೂ ಅರ್ಧ ಮುರಿದೂ ಬೀಳುವ ಸ್ಥಿತಿಯಲ್ಲಿ ಬಾಗಿಲುಗಳು ಇವೆ. ಶಾಲೆಯ ಮಕ್ಕಳು ಶೌಚಾಲಯವನ್ನು ಉಪಯೋಗಿಸಲು ಮಕ್ಕಳು ಮುಜುಗರ ಪಡುತ್ತಾರೆ ಏಕೆಂದರೆ ಶೌಚಾಲಯಗಳ ರೂಂ ಗಳಿಗೆ ಸರಿಯಾದ ರೀತಿಯಲ್ಲಿ ಬಾಗಿಲುಗಳು ಇಲ್ಲ ಬಾಗಿಲುಗಳು ಇದ್ದರು ಬಾಗಿಲಿನ ಮೇಲೆನ ಪ್ಲಾವುಡ್ ಇದೆ ಕೆಳಗಡೆ ಪೂರ್ತಿ ಕಟ್ ಆಗಿದೆ ಶೌಚಾಲಯದ ಡೋರ್  ಅರ್ಧಭಾಗ ಮುರಿದುಹೋದ ಸ್ಥಿತಿಯಲ್ಲಿ ಇದೆ ಇನ್ನೂ ಅರ್ಧ ಭಾಗ ಆಗೇ ಇದೆ. ಆದ್ದರಿಂದ ಮಕ್ಕಳು ಶೌಚಾಲಯವನ್ನು ಉಪಯೋಗಿಸಲು ಮುಜುಗರ ಪಡುತ್ತಾರೆ ಹಾಸ್ಟೆಲ್ ನಲ್ಲಿ ಬಾಲಕಿಯರ ಹಾಸ್ಟೆಲ್ ಕೋಡ ಇದ್ದು ಇನ್ನೂ ಆ ಮಕ್ಕಳ ಸ್ಥಿತಿ ಹೇಗೆ ನೀವೇ ಯೋಚಿಸಿ.ಇನ್ನು ಕೆಲವು ಕಡೆ ವಿದ್ಯುತ್ ವಯರ್ ಗಳು ಹಾಗೆ ಹೊರಗಡೆ ಇವೆ ಹಾಸ್ಟಲ್ ಮಕ್ಕಳಿಗೆ ವಿದ್ಯುತ್ ವಯರ್ ಮಕ್ಕಳಿಗೆ ತಗುಲಿದರೆ ಮಕ್ಕಳ ಪ್ರಾಣಕ್ಕೆ ಉಪಾಯವಿದೆ ವಿದ್ಯುತ್ ವಯರ್ ಗಳಿಗೆ  ಪ್ಯಾಚ್ ಕೂಡ ಸುತ್ತದೆ ಹಾಗೇ ಬಿಟ್ಟಿದ್ದಾರೆ ಯಾವುದೇ ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಂಡಿಲ್ಲ. ಶಾಲೆಯ ಆವರಣದಲ್ಲಿ ಸ್ವಲ್ಪವೂ ಸ್ವಚ್ಛತೆಯ ಇಲ್ಲ ಮಕ್ಕಳು ಹೊರಗಡೆ ಆಟವಾಡಲು ಹೊರಗಡೆ ಬಂದರೆ ಸ್ವಚ್ಛವಾದ ಒಂದು ಮೈದಾನವು ಕೂಡ ಇಲ್ಲ ಎತ್ತನೋಡಿದರತ್ತ ಬರೀ ಕಸಕಡ್ಡಿ ಕಾಣುತ್ತದೆ. ಹಾಸ್ಟೆಲ್ ಆವರಣದಲ್ಲಿ ಇರುವ ಶೌಚಾಲಯದ ಪೈಪುಗಳು ಶಾಲೆಯ ಮೈದಾನದಲ್ಲಿ ಇದ್ದು ಆ ಪೈಪುಗಳು ಹೊಡೆದು ಹೋಗಿವೆ ಮಕ್ಕಳು ಮೂತ್ರ ವಿಸರ್ಜನೆ ಮಾಡಿದ ಮತ್ತು ಮಲವಿಸರ್ಜನೆ ಮಾಡಿದ ಆ ಸೌಚಾಲಯದ ಪೈಪು  ಹೊಡೆದಿರುವ ಕಾರಣ ಹೊಲಸು ಹೊರಗಡೆ ಬರುತ್ತದೆ. ಮಕ್ಕಳು ಆಟ ಆಡುವಾಗ  ನಡೆದಾಡುವಾಗ ಆ ಪೈಪಿನಿಂದ ಬಂದಂತಹ ಹೊಲಸನ್ನು ತುಳಿದುಕೊಂಡೇ ನಡೆದಾಡಬೇಕು ಶೌಚಾಲಯದ ಪೈಪುಗಳು ಎಲ್ಲಿಯಾದರೂ ಕಟ್ಟಿಕೊಂಡರೆ ಕಟ್ಟಿಕೊಂಡರೆ ಸರಿಮಾಡಲು ಹಾಸ್ಟೆಲ್ ಮೈದಾನದಲ್ಲಿ ನಾಲ್ಕರಿಂದ ಐದು ಡ್ರೈನೇಜ್ ಗುಂಡಿಗಳನ್ನು ನಿರ್ಮಿಸಿದ್ದಾರೆ ಪೈಪುಗಳು  ಕಟ್ಟಿಕೊಂಡರೆ ಸರಿಪಡಿಸಲು ಗುಂಡಿಗಳನ್ನು ನಿರ್ಮಿಸಿದ್ದಾರೆ ಈ ಶೌಚಾಲಯದ ಗುಂಡಿ ಗಳು ಮಕ್ಕಳಿಗೆ ತಯಾರಿಸುವ ಊಟದ ಕೊಠಡಿಯ ಪಕ್ಕದಲ್ಲೇ ಈ ಗುಂಡಿಗಳು ಇವೆ. ಈ ಶೌಚಾಲಯದ ಗುಂಡಿಗಳಿಗೆ ಮೇಲ್ಭಾಗಕ್ಕೆ ಮುಚ್ಚ ಬೇಕು ಆದರೆ ಆದರೆ ಈ ಶಾಲೆಯಲ್ಲಿ ಕೆಲವೊಂದು ಗುಂಡಿಗಳು ಮುಚ್ಚಿವೆ ಇನ್ನೂ ಕೆಲವೊಂದು ಅರ್ಧ ಓಪನ್ ಇದ್ದರೆ ಇರುವ ಅರ್ಧ ಮುಚ್ಚಿರುತ್ತವೆ ಇನ್ನೂ ಒಂದೆರಡು ಗುಂಡಿಗಳು ಮೇಲ್ಭಾಗಕ್ಕೆ ಏನು ಮುಚ್ಚದೆ ಹಾಗೆಯೇ ಓಪನ್ ಇರುತ್ತವೆ. ಮಕ್ಕಳು ಮಾಡಿದ ಮೂತ್ರ ವಿಸರ್ಜನೆ ಮಲವಿಸರ್ಜನೆ  ಹಾಗೆಯೇ ಹೊರಗಡೆ ಕಾಣುತ್ತದೆ ಮಕ್ಕಳು ಆ ಗುಂಡಿಯ ಹತ್ತಿರ ಬಂದರೆ ದೂರ ಸರಿದು ಮೂಗು ಮುಚ್ಚಿಕೊಂಡು ಹೋಗುತ್ತಾರೆ. ಆ ಸೌಚಾಲಯದ ಗುಂಡಿಯ ಪಕ್ಕದಲ್ಲಿ ಇರುವ ಊಟದ ಕೊಠಡಿ ಶೌಚಾಲಯದ ಡ್ರೈನೇಜ್ ಗುಂಡಿಗಳು ಓಪನ್ ಇರುವುದರಿಂದ ಗುಂಡಿಯಲ್ಲಿರುವ ಹೊಲಸಿನ ಮೇಲೆ ಇರುವ ಕೀಟಗಳು ನೋಣಗಳು ಪಕ್ಕದಲ್ಲೇ ಇರುವ ಊಟದ ಕೊಠಡಿಯ ಮಕ್ಕಳು ಊಟ ಮಾಡುವ ಸಮಯದಲ್ಲಿ ಮಕ್ಕಳ ಊಟದ ತಟ್ಟೆಯಲ್ಲಿ ಗುಂಡಿಯ ಮೇಲೆ ಕುಳಿತ ಅಂತಹ ಕೀಟಗಳು ಮಕ್ಕಳ ತಟ್ಟೆಯಲ್ಲಿ ಬಂದು ಕುಳಿತುಕೊಳ್ಳುತ್ತವೆ ಆದ್ದರಿಂದ ಮಕ್ಕಳ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತದೆ. ವಾರದಲ್ಲಿ ಎರಡು ಮೂರು ಮಕ್ಕಳು ಹೊಟ್ಟೆನೋವು ವಾಂತಿ ಭೇದಿ ಎಂದು ಮಕ್ಕಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತವೆ.ಈ ಅವ್ಯವಸ್ಥೆಯ ಬಗ್ಗೆ ಅಸ್ಟಲ್ ಪ್ರಿನ್ಸಿಪಾಲ್ ಮತ್ತು ವಾರ್ಡನ್ ಕೇಳಿದರೆ ಅವರು ಹಿಂದುಳಿದ ವರ್ಗದ ಜಿಲ್ಲಾಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ ಅವರು ಯಾವುದೇ ಕ್ರಮ ಕೈಗೊಂಡಿಲ್ಲ ಮತ್ತು ಹೂವಿನಹಡಗಲಿ ಶಾಸಕರಿಗೂ ಮನವಿ ಮಾಡಿದ್ದೇವೆ ಶಾಸಕರು ಸಂಬಂಧಪಟ್ಟ ಅಧಿಕಾರಿಗಳಲ್ಲಿ ಮಾಡುತ್ತೇವೆ ಎಂದು ಹೇಳಿದ್ದಾರೆ ಅಸ್ಟಲ್ ಪ್ರಿನ್ಸಿಪಾಲ್ ಹೇಳಿದರು.

ವರದಿ – ಚಲುವಾದಿ ಅಣ್ಣಪ್ಪ

Leave a Reply

Your email address will not be published. Required fields are marked *