ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಆದಿತ್ಯಾ ಗಂಗಾಗೆ ಸನ್ಮಾನ.

Spread the love

ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಆದಿತ್ಯಾ ಗಂಗಾಗೆ ಸನ್ಮಾನ.

ಹುಮನಾಬಾದ : ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇಕಡ 99.84 ರಷ್ಟು ಅಂಕ ಗಳಿಸಿ, ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದು ಬೀದರ ಜಿಲ್ಲೆ ಮತ್ತು ಹುಮನಾಬಾದ ತಾಲೂಕಿಗೆ ಕೀರ್ತಿ ತಂದಿರುವ ಹಳ್ಳಿಖೇಡ(ಬಿ) ಗ್ರಾಮದ ಕುಮಾರ ಆದಿತ್ಯಾ ತಂದೆ ಸುಭಾಷ್ ಗಂಗಾ ರವರನ್ನು ಚಿಟಗುಪ್ಪಾ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ವತಿಯಿಂದ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಗೌರವ ಸನ್ಮಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಿದ ಪರಿಷತ್ತಿನ ಗೌರವಾಧ್ಯಕ್ಷ ಮಾಹಾರುದ್ರಪ್ಪಾ ಅಣದೂರ ರವರು ಮಾತನಾಡಿ ವಿಧ್ಯಾರ್ಥಿಗಳು ಕಷ್ಟಪಟ್ಟು ಅಭ್ಯಾಸ ಮಾಡಬೇಕು.ಶಿಸ್ತು ಮತ್ತು ತಾಳ್ಮೆ ಅಳವಡಿಸಿಕೊಂಡು ಮಾದರಿ ವಿಧ್ಯಾರ್ಥಿಗಳಾಗಿ ಬೆಳಗಬೇಕೆಂದರು. ಪರಿಷತ್ತಿನ ಗೌರವ ಸಲಹೆಗಾರರಾದ ಡಾ. ದಯಾನಂದ ಕಾರಬಾರಿಯವರು ಮಾತನಾಡಿ ಆದಿತ್ಯಾ ರವರ ಸಾಧನೆ ಇಂದಿನ ಎಲ್ಲಾ ಮಕ್ಕಳಿಗೆ ಪ್ರೇರಣೆ ಯಾಗಿದೆ. ಮುಂಬರುವ ದಿನಗಳಲ್ಲಿ ಎಲ್ಲಾ ಮಕ್ಕಳು ಉತ್ತಮ ದಿಸೆಯಲ್ಲಿ ಅಂಕಗಳು ಪಡೆಯಬೇಕೆಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪರಿಷತ್ತಿನ ಅಧ್ಯಕ್ಷರು ಸಾಹಿತಿಗಳಾದ ಸಂಗಮೇಶ ಎನ್ ಜವಾದಿಯವರು ಮಾತನಾಡಿ ಮಕ್ಕಳು ಮೊಬೈಲ್ ಬಳಕೆಯಿಂದ ದೂರವಿದ್ದು,ಶಿಕ್ಷಕರು  ಹೇಳುವ ಪಾಠವನ್ನು ಗಂಭೀರವಾಗಿ ಪರಿಗಣಿಸಬೇಕು. ಹೇಳಿದ ದಿನದ ಪಾಠವನ್ನು ಸಂಪೂರ್ಣವಾಗಿ ಮನನ್ನವನ್ನು ಮಾಡಿಕೊಂಡರೆ ಪರೀಕ್ಷೆಯಲ್ಲಿ ಅತ್ಯುತ್ತಮವಾಗಿ ಬರೆಯಲು ಸಾಧ್ಯವಾಗುತ್ತದೆ. ಆತ್ಮವಿಶ್ವಾಸ, ಛಲ ಮತ್ತು ಗುರಿ ವಿಧ್ಯಾರ್ಥಿಗಳ ಜೀವನದಲ್ಲಿ ಅವಳಸಿಕೊಂಡು ಮುನ್ನಡೆದರೆ ಯಶಸ್ವಿ ಗ್ಯಾರಂಟಿ,ಅದಕ್ಕಾಗಿ ಪರಿಶ್ರಮ ಪರಮ ಧ್ಯೇಯವಾಗಬೇಕು.ಈ ದಿಸೆಯಲ್ಲಿ ಆದಿತ್ಯಾ ಗಂಗಾ ರವರು ಪ್ರಮಾಣಿಕ ಪ್ರಯತ್ನ ಮಾಡಿದ ಫಲವಾಗಿ ಅವರು ರಾಜ್ಯಕ್ಕೆ ಎರಡನೇ ಸ್ಥಾನ ಪಡೆದುಕೊಂಡು ಈ ಭಾಗಕ್ಕೆ ಶ್ರೇಯಸ್ಸುನ್ನು ತಂದಿದ್ದಾರೆ. ಅವರಿಗೆ ತುಂಬು ಹೃದಯದ ಶುಭಾಶಯಗಳು ಮತ್ತು ಅಭಿನಂದನೆಗಳು ಎಂದು ತಿಳಿಸಿ,ಈ ನಿಟ್ಟಿನಲ್ಲಿ ಎಲ್ಲಾ ಮಕ್ಕಳು ಉತ್ತಮ ರೀತಿಯಲ್ಲಿ ಪರೀಕ್ಷೆ ಬರೆದು ಸರ್ವೋತ್ತಮರಾಗಿ ತೇರ್ಗಡೆ ಹೊಂದಿ ಈ ನಾಡಿಗೆ ಕೀರ್ತಿ ತರುವ ಕೆಲಸ ಮಾಡಬೇಕೆಂದರು. ಶಿಕ್ಷಕ ಸುಭಾಷ್ ಗಂಗಾರವರು ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು.ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರು,ಶಿಕ್ಷಕ ವರ್ಗದವರು ಸೇರಿದಂತೆ ಪಾಲಕರು ಮತ್ತು ವಿಧ್ಯಾರ್ಥಿಗಳು ಹಾಜರಿದ್ದರು.

ವರದಿ – ಸಂಗಮೇಶ ಎನ್ ಜವಾದಿ

Leave a Reply

Your email address will not be published. Required fields are marked *