ಕೂಡ್ಲಿಗಿ:ಬೀದಿ ನಾಯಿಗಳ ಹಾವಳಿ,ಪಪಂ ನಿರ್ಲಕ್ಷ್ಯ ನಾಗರೀಕರ ಆಕ್ರೋಶ,,,,,

Spread the love

ಕೂಡ್ಲಿಗಿ:ಬೀದಿ ನಾಯಿಗಳ ಹಾವಳಿ,ಪಪಂ ನಿರ್ಲಕ್ಷ್ಯ ನಾಗರೀಕರ ಆಕ್ರೋಶ,,,,,

ವಿಜಯನಗರ  ಜಿಲ್ಲೆ ಕೂಡ್ಲಿಗಿ ಪಟ್ಟಣದ 3ನೇ ವಾರ್ಡ್ ನಲ್ಲಿ, ಬಾಲಕನ ಮೇಲೆ ಬೀದಿನಾಯಿ ದಾಳಿಯಿಂದಾಗಿ ಬಾಲಕ ಎಮುನಪ್ಪ ತೀವ್ರ ಗಾಯಗೊಂಡಿರುವ ಹೃದಯ ವಿದ್ರಾವಕ ಘಟನೆ ಜರುಗಿದೆ. ನಾಯಿಗಳು ಒಟ್ಟಗೇ ದಾಳಿ ಮಾಡಿದ್ದು, ಹಂದಿಯಂತೆ ಬಾಲಕನನ್ನು ಹಿಡಿದೆಳೆದಾಡಿವೆ. ಅದೃಷ್ಟ  ಅರುಣ ಎಂಬುವರು ಬಾಲಕನನ್ನು ನಾಯಿಗಳಿಂದ ಕಾಪಾಡಿದ್ದಾರೆ ಘಟನೆಗೆ ಸಂಬಂಧಿಸಿದಂತೆ ಬಾಲಕರ ಪೋಷಕರು ಹಾಗೂ ನಾಗರೀಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ, ಬಯಲು ಅರ್ಕಸಾಲಿ ಪಕ್ಕೀಪ್ಪರವರ ಮಗ ಎಮುನಪ್ಪ  ಬಾಲಕ ಬೀದಿ ನಾಯಿಗಳ ದಾಳಿ ತೀವ್ರಗಾಯಗೊಂಡಿದ್ದಾನೆ. ಇದು ಕೇವಲ 2ನೇ ವಾರ್ಡಿನ ಸಮಸ್ಯೆ ಮಾತ್ರವಲ್ಲ, ಬೀದಿ ನಾಯಿಗಳ ಹಾವಳಿ ಪಟ್ಟಣದ ಗಲ್ಲಿ ಗಲ್ಲಿ ಗಳಲ್ಲಿದ್ದು, ನಾಗರೀಕರು ತಮ್ಮ ದೂರುಗಳನ್ನು ಸಾಕಷ್ಟು ಬಾರಿ  ಪಟ್ಟಣ ಪಂಚಾಯ್ತಿ ಗೆ ನೀಡಿದ್ದು. ನಿರ್ಲಕ್ಷ್ಯಕ್ಕೆ  ಸಂಬಂದಿಸಿದಂತೆ ನಾಗರೀಕರು ತೀವ್ರ ಆಕ್ರೋಶ ವ್ಯೆಕ್ತಪಡಿಸಿದ್ದಾರೆ. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಹಾಗೂ ಪ್ರಮಖ ವೃತ್ತ ಗಳಲ್ಲಿ, ಪ್ರತಿ ಗಲ್ಲಿಗಳಲ್ಲಿ ಹತ್ತಾರು ನಾಯಿಗಳಿದ್ದು ಸಂಚಾರಕ್ಕೆ ತೀವ್ರ ಅಡತಡೆ ಯಾಗುತ್ತಿದೆ. ಕೆಲ ಗಲ್ಲಿಗಳಲ್ಲಿ ಬೀದಿ ನಾಯಿಗಳ ಹಾವಳಿ  ಮಿತಿ ಮೀರಿದ್ದು, ಮಕ್ಕಳ ಮೇಲೆ ದಾಳಿ ಮಾಡಿರುವ ಘಟನೆಗಳು ಸಾಕಷ್ಟು ಬಾರಿ ಜರುಗಿದ್ದು ತಡವಾಗಿ ಬೆಳಕಿಗೆ ಬಂದಿವೆ. ಸಂಬಂಧಿಸಿದಂತೆ ನಾಗರೀಕರು ಕೆಲ ಪಪಂ ಜನಪ್ರತಿನಿಧಿಗಳಲ್ಲಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ, ತಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದ್ದಾರೆ. ಬೀದಿ ನಾಯಿಗಳ ಮಿತಿ ಮೀರಿದ  ಹಾವಳಿಯಿಂದಾಗಿ ನಾಗರೀಕರು ತೀವ್ರ ಆತಂಕ ದಿಂದ ಜೀವಿಸುವಂತಾಗಿದೆ, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಫೀರೋಜ್ ಖಾನ್ ನಿರ್ಲಕ್ಷ್ಯ ಮನೋಭಾವ ತೋರುತ್ತಿದ್ದಾರೆ, ಇದು ಪಪಂ ಅಮಾನವೀಯ ನಡೆಯಾಗಿದೆ ಎಂದು ಕಠೋರವಾಗಿ ಖಂಡಿಸಿದ್ದಾರೆ.ಇದು ಹೀಗೆ ಮುಂದುವರೆದಲ್ಲಿ ಮಾನವ ಹಕ್ಕು ಆಯೋಗಕ್ಕೆ ದೂರು ನೀಡಲಾಗುವುದು, ಹಾಗೂ ನ್ಯಾಯಾಲಯದಲ್ಲಿ ನಾಗರೀಕ ಹಿತಾಸಕ್ತಿ ಖಾಸಗೀ ದೂರು ದಾಖಲಿಸಲಾಗುವುದೆಂದು ಕೆಲ ಸಂಘಟನೆಗಳ ಹೋರಾಟಗಾರರು ಎಚ್ಚರಿಸಿದ್ದಾರೆ.ಈ ಸಂದರ್ಭದಲ್ಲಿ ಸಿಐಟಿಯು ಮುಖಂಡ ಗುನ್ನಳ್ಳಿ ರಾಘವೇಂದ್ರ, ವಾಲ್ಮೀಕಿ ಮುಖಂಡರಾದ ಕಡ್ಡಿ ಮಂಜುನಾಥ, ಬಾಣದ ಶಿವಶಂಕರ,ಈಶಪ್ಪ, ನಾಗರಾಜ, ಕುರುಬರ ಕೊಟ್ರಮ್ಮ,ವೀರಣ್ಣ, ವಂದೇ ಮಾತರಂ ಜಾಗೃತಿ ವೇದಿಕೆ ಜೂಗುಲರ ಸೊಲ್ಲೇಶ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ವರದಿ- ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428

Leave a Reply

Your email address will not be published.