ಬಸ್ ಅಪೇ ಆಟೋ ಡಿಕ್ಕಿ ಇಬ್ಬರು ಮೃತ ಹಲವರಿಗೆ ಗಾಯ……..

Spread the love

ಬಸ್ ಅಪೇ ಆಟೋ ಡಿಕ್ಕಿ ಇಬ್ಬರು ಮೃತ ಹಲವರಿಗೆ ಗಾಯ……..

ವಿಜಯನಗರ  ಜಿಲ್ಲೆ ಕೂಡ್ಲಿಗಿ ಪಟ್ಟಣದ ಹೊರವಲಯದಲ್ಲಿ, ಸಾರಿಗೆ ಬಸ್ ಅಪೇ ಆಟೋ ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ. ಇಬ್ಬರು ಮೃತ ಪಟ್ಟಿದ್ದು ಹಲವರಿಗೆ ಗಾಯವಾಗಿರುವ ದುರ್ಘಟನೆ ಸಂಜೆ ಜರುಗಿದೆ. ದಾವಣಗೆರೆ ಯಿಂದ ಬಳ್ಳಾರಿ ಕಡೆ ತೆರಳುತ್ತಿದ್ದ ಸಾರಿಗೆ ಬಸ್ , ಹಾಗೂ ಕೂಡ್ಲಿಗಿ ಯಿಂದ ಈಚಲ ಬೊಮ್ಮನಹಳ್ಳಿಗೆ ತೆರಳುತ್ತಿದ್ದ ಅಪೇ ಆಟೋ ನಡುವೆ ಅಪಘಾತ ಸಂಭವಿಸಿದೆ. ಸಾರಿಗೆ ಬಸ್ ನ ಮುಂಬದಿ ಚಕ್ರದ ಟೈರ್ ಬಸ್ಟ್ ಆಗಿದ್ದು, ಪರಿಣಾಮ ಬಸ್ ನಿಯಂತ್ರಣ ತಪ್ಪಿ ಆಟೋಗೆ ಡಿಕ್ಕಿ ಹೊಡೆದಿದೆ ಎಂದು ಹೇಳಲಾಗುತ್ತಿದೆ.  ಆಟೋದಲ್ಲಿದ್ದವರೆಲ್ಲರೂ ಈಚಲ ಬೊಮ್ಮನಹಳ್ಳಿ ವಾಸಿಗಳಾಗಿದ್ದು,ಬಹುತೇಕ ವಿದ್ಯಾರ್ಥಿಗಳಾಗಿದ್ದು  ತೀವ್ರ ಗಾಯಗೊಂಡಿದ್ದ ಇಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮದ್ಯದಲ್ಲಿ ಮೃತರಾಗಿದ್ದಾರೆ. ಮೃತರು ವಿದ್ಯಾರ್ಥಿನಿಯಾಗಿದ್ದು ಪುಷ್ಪಲತಾ(22) ಕೂಡ್ಲಿಗಿ ಆಸ್ಪತ್ರೆಗೆ ದಾಖಲಿಸುವಾಗ ಮೃತಪಟ್ಟಿದ್ದಾಳೆ. ಬಳ್ಳಾರಿ ವಿಮ್ಸ್ ಗೆ ದಾಖಲಿಸುವಾಗ ಈಡಿಗರ ಮೀನಾಕ್ಷಿ(30) ಮೃತಪಟ್ಟಿದ್ದಾಳೆ. ರಮೇಶ ಎಂಬುವರು ಎರೆಡು ಕಾಲುಗಳು ಜಖಂ ಗೊಂಡಿದ್ದು, ಗಾಯಾಳುಗಾಳಾಗಿರುವ ಸ್ವಾತಿ,ಈಡಿಗರ ಅನುಷಾ, ಅಭಿಲಾಷಾ, ಪ್ರಭಾವತಿ,ಕೆ. ಚಂದನ,ಕೆ.ನಾಗವೇಣಿ ಸೇರಿದಂತೆ ಇತರರು ಗಾಯಗೊಂಡಿದ್ದಾರೆ, ಕೆಲವರನ್ನು ಕೂಡ್ಲಿಗಿ ಹಾಗೂ ಇನ್ನೂ ಕೆಲವರನ್ನು ಬಳ್ಳಾರಿ ವಿಮ್ಸ್ ಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಹಾಗೂ ಕೂಡ್ಲಿಗಿ ಆಸ್ಪತ್ರೆಗೆ ಕೂಡ್ಲಿಗಿ ಡಿವೈಎಸ್ಪಿ ಜಿ.ಹರೀಶ, ಸಿಪಿಐ ವಸಂತ ಅಸೋದೆ ಬೆಟ್ಟಿ ನೀಡಿದ್ದಾರೆ.ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ಆಸ್ಪತ್ರೆ ಆವರಣದಲ್ಲಿ ಮೃತರ ಪೋಷಕರ ಹಾಗೂ ಕುಟುಂಬ ಸದಸ್ಯರ ಆಕ್ರಂಧನ ಮುಗಿಲು ಮುಟ್ಟಿತ್ತು.

ವರದಿ – ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428

Leave a Reply

Your email address will not be published.