ಯೋಗದಿನಕ್ಕೆ ಜೂನ್ 21ನ್ನೇ ಆಯ್ಕೆ ಮಾಡಿದ್ದು ಯಾಕೆ..,!? ಯೋಗದಿನಕ್ಕೂ ಆರೆಸ್ಸೆಸ್ಸಿಗೂ ಜೂನ್ ಇಪ್ಪತ್ತೊಂದಕ್ಕೂ ಏನು ಸಂಬಂಧ..!?

Spread the love

ಯೋಗದಿನಕ್ಕೆ ಜೂನ್ 21ನ್ನೇ ಆಯ್ಕೆ ಮಾಡಿದ್ದು ಯಾಕೆ..,!? ಯೋಗದಿನಕ್ಕೂ ಆರೆಸ್ಸೆಸ್ಸಿಗೂ ಜೂನ್ ಇಪ್ಪತ್ತೊಂದಕ್ಕೂ ಏನು ಸಂಬಂಧ..!?

ಬಂಧುಗಳೇ, ಜೂನ್ 21, ಕೇವಲ RSS ಕಛೇರಿಯಲ್ಲಿ‌ ಆಚರಿಸುತ್ತಿದ್ದ ಒಂದು ಸಂತಾಪ ಸ್ಮರಣಾ ದಿನವಾಗಿತ್ತು ಆದರೆ ಈಗ..!? ಆರೆಸೆಸ್ಸ್  ಸಂಸ್ಥಾಪಕ ಹೆಡ್ಗೆವಾರ್ ನಿಧನವಾದ ದಿನ ಜೂನ್ 21. ಯೋಗಕ್ಕೂ ಹೆಡ್ಗೆವಾರ್ ಗೂ ಏನು ಸಂಬಂಧ.? ದಯಮಾಡಿ ತಿಳಿದವರು ತಿಳಿಸಿ. ಆದರೆ  ಅಂತರಾಷ್ಟ್ರೀಯ ಯೋಗದಿನಕ್ಕೆ ಈ‌ ದಿನವನ್ನೇ ನಿಗಧಿಪಡಿಸಿ ಅದನ್ನು ಸರ್ಕಾರವೇ ಮುಂದೆ ನಿಂತು ಶ್ರೀಮಾನ್ಯನ ಬೆವರಿನ ತೆರಿಗೆಹಣದ ಕೋಟ್ಯಂತರ ರೂಪಾಯಿ‌ ವ್ಯಯಿಸಿ ಅದ್ದೂರಿಯಾಗಿ ಆಯೋಜಿಸುವ ಮೂಲಕ ಇಡೀ ಭಾರತದ ಭಾಗಶಃ ಜನ ಆರೆಸೆಸ್ಸ್ ನಲ್ಲಿ   ಇಲ್ಲದವರೂ ಅದನ್ನು ಒಪ್ಪದವರೂ ಅದರ ಬಗ್ಗೆ ಏನೂ ಗೊತ್ತಿಲ್ಲದವರೂ ಕೂಡ ಇಂದು‌ ಯೋಗದ ಹೆಸರಲ್ಲಿ  ಹೆಡ್ಗೆವಾರ್ ಗೆ ನಿಂತು ಕುಂತು ಕೈಯೆತ್ತಿ ನಮಸ್ಕಾರ ಮಾಡುವಂತೆ ಮಾಡಲಾಗಿದೆ ಎಂಬುದನ್ನು‌ ನಾವಿಲ್ಲಿ ಅರ್ಥ ಮಾಡಿಕೊಳ್ಳಬೇಕು…!ಯೋಗವನ್ನೇನು ನಿತ್ಯವೂ ಮಾಡಬಹುದು. ಅದು‌ ದೇಹ ಮತ್ತು ಮನಸ್ಸಿನ ಆರೋಗ್ಯಕ್ಕೆ ಪೂರಕವಾದ ಉಸಿರಾಟದ ಒಂದು ವ್ಯಾಯಾಮ. ಎರಡುವರೆ ಸಾವಿರ ವರ್ಷಗಳ ಹಿಂದೆ ಭಗವಾನ್ ಬುದ್ಧರು ಮನಸ್ಸನ್ನು ಕೇಂದ್ರೀಕರಿಸಲು ತನ್ನೊಳಗನ್ನು ತಾ ನೋಡಿಕೊಳ್ಳಲು ಆರಂಭಿಸಿದ ದೀರ್ಘಮೌನ ಧ್ಯಾನದ ಒಂದು ಭಾಗ (ಬುದ್ಧರಿಗೂ ಮುನ್ನ ಋಷಿಮುನಿಗಳು ಮಾಡುತ್ತಿದ್ದದ್ದು ನಿರ್ಧಿಷ್ಟ ಕೋರಿಕೆಗಾಗಿ ದೇವರನ್ನು ಒಲಿಸಿಕೊಳ್ಳಲು ಮಾಡುತ್ತಿದ್ದದ್ದು ತಪಸ್ಸು. ತಪಸ್ಸೇ ಬೇರೆ ಧ್ಯಾನವೇ ಬೇರೆ) ಅದನ್ನು ವಿಪಸ್ಸನ ಧ್ಯಾನ ಎಂದು ಕರೆಯುತ್ತಾರೆ. ನಾವು ಎಚ್ಚರಿರುವಾಗ ಕೆಲಸ ಮಾಡುವಾಗ ಮಲಗಿದಾಗ ಸದಾ ಉಸಿರಾಡುತ್ತೇವೆ ಆದರೆ ಆ ಉಸಿರಾಟದ ಕಡೆ ಗಮನ ಹರಿಸುವುದಿಲ್ಲ. ಗಮನ ಹರಿಸಿದರೆ ಅದೇ ಧ್ಯಾನ ಅದೇ ಯೋಗ…!ಹೀಗೆ ಗಮನ ಹರಿಸಿ ಉಸಿರಾಡಲು ಹಾಗು ದೇಹ ಮತ್ತು ಮನಸ್ಸಿನ ಆರೋಗ್ಯಕ್ಕೆ ದೇಹ ಮನಸ್ಸನ್ನು ಪಕ್ಕುಗೊಳಿಸಲು ದೇಹ ಮತ್ತು ಮನಸ್ಸಿದ್ದರೆ ಸಾಕು. ಕೋಟ್ಯಾಂತರ ರೂಪಾಯಿಯಾಗಲಿ ಅದಕ್ಕೊಂದು ಸರ್ಕಾರದ ಒತ್ತಾಸೆಯಾಗಲಿ‌ ಬೇಕಾಗಲ್ಲ. ಒಟ್ಟಾರೆ ಒಂದು ಸಂಘದ ಸಂಸ್ಥಾಪಕ ಹೆಡ್ಗೆವಾರ್ ಗೆ ಗೊತ್ತೋ ಗೊತ್ತಿಲ್ಲದೆಯೋ ಇಡೀ ದೇಶದ ಜನರಿಂದ ಸ್ಮರಿಸಿ‌ ಕೈಮುಗಿಸಲು ಮಾಡಿದ ದುಂದುವೆಚ್ಚದ ಸ್ವೇಚ್ಛೆಯ ಹುನ್ನಾರವೇ ಈ ಅಂತರಾಷ್ಟ್ರೀಯ ಯೋಗದಿನ‌‌…!

ವ್ಯಾಟ್ಸಪ್ ಕೃಪೆ-ಹ.ರಾ.ಮಹಿಶ

Leave a Reply

Your email address will not be published. Required fields are marked *