ನಾಗರತ್ನ ಸೌಹಾರ್ದ ಸೊಸೈಟಿಯ ಯಾವುದೇ ನಿಶ್ಚಿತ ಠೇವಣಿ ಸ್ವರ್ಣಭಾರತಿ ಸಹಕಾರ ಬ್ಯಾಂಕ್‌ನಲ್ಲಿ ಇರಿಸಲಾಗಿಲ್ಲ: ಅಧ್ಯಕ್ಷ ಪಿ. ಎಲ್‌. ವೆಂಕಟರಾಮ ರೆಡ್ಡಿ ಸ್ಪಷ್ಟನೆ….

Spread the love

ನಾಗರತ್ನ ಸೌಹಾರ್ದ ಸೊಸೈಟಿಯ ಯಾವುದೇ ನಿಶ್ಚಿತ ಠೇವಣಿ ಸ್ವರ್ಣಭಾರತಿ ಸಹಕಾರ ಬ್ಯಾಂಕ್ನಲ್ಲಿ ಇರಿಸಲಾಗಿಲ್ಲ: ಅಧ್ಯಕ್ಷ ಪಿ. ಎಲ್‌. ವೆಂಕಟರಾಮ ರೆಡ್ಡಿ ಸ್ಪಷ್ಟನೆ….

ಬೆಂಗಳೂರು ಜೂನ್‌ 21: ಸ್ವರ್ಣ ಭಾರತಿ ಸಹಕಾರ ಬ್ಯಾಂಕಿನಲ್ಲಿ ಅಶೋಕ ನಗರದ ನಾಗರತ್ನ ಸೌಹಾರ್ದ ಕೋ-ಆಪರೇಟಿವ್‌ ಸೊಸೈಟಿ ಯ ಯಾವುದೇ ನಿಶ್ಚಿತ ಠೇವಣಿಯನ್ನು ಇರಿಸಲಾಗಿಲ್ಲ ಎಂದು ಸ್ವರ್ಣ ಭಾರತಿ ಸಹಕಾರ ಬ್ಯಾಂಕಿನ ಅಧ್ಯಕ್ಷರಾದ ಪಿ.ಎಲ್‌. ವೆಂಕಟರಾಮ ರೆಡ್ಡಿ ಸ್ಪಷ್ಟಪಡಿಸಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ನಾಗರತ್ನ ಸೌಹಾರ್ದ ಸೊಸೈಟಿ ನಮ್ಮ ಸ್ವರ್ಣಭಾರತಿ ಸಹಕಾರ ಬ್ಯಾಂಕಿನಲ್ಲಿ ಕೇವಲ ಚಾಲ್ತಿ ಖಾತೆಯ ಮೂಲಕ ವ್ಯವಹರಿಸಿದ್ದಾರೆ. ಆದರೆ, ಇದುವರೆಗೂ ಯಾವುದೇ ನಿಶ್ಚಿತ ಠೇವಣಿಯನ್ನು ಸ್ವರ್ಣಭಾರತಿ ಸಹಕಾರ ಬ್ಯಾಂಕಿನಲ್ಲಿ ಇರಿಸಿರುವುದಿಲ್ಲ ಎಂದು ಈ ಮೂಲಕ ಸ್ಪಷ್ಟಪಡಿಸುತ್ತಿದ್ದೇನೆ. ಅಲ್ಲದೇ, ನಾಗರತ್ನ ಸೌಹಾರ್ದ ಸೊಸೈಟಿಯ ಅವ್ಯವಹಾರಕ್ಕೆ ಸಂಬಂಧಪಟ್ಟಂತೆ ನಮ್ಮ ಬ್ಯಾಂಕಿನ ವತಿಯಿಂದ ಪೊಲೀಸ್‌ ಇಲಾಖೆಗೆ ಸಂಪೂರ್ಣ ಸಹಕಾರ ನೀಡಲಾಗುತ್ತಿದ್ದು, ಇನ್ನು ಮುಂದೆಯೂ ಅಗತ್ಯವಿರುವ ಎಲ್ಲಾ ಸಹಕಾರ ನೀಡಲಾಗುವುದು. ಇದನ್ನು ಹೊರತು ಪಡಿಸಿ ನಮ್ಮ ಸ್ವರ್ಣಭಾರತಿ ಬ್ಯಾಂಕಿಗೆ ಮತ್ತು ನಾಗರತ್ನ ಸೊಸೈಟಿ ಅವ್ಯವಹಾರಕ್ಕೆ ಯಾವುದೇ ಸಂಬಂಧವಿರುವುದಿಲ್ಲ ಎಂದಿದ್ದಾರೆ.ಹೆಚ್ಚಿನ ಮಾಹಿತಿಗಾಗಿ  ಮುಖ್ಯಕಾರ್ಯನಿರ್ವಹಣಾಧಿಕಾರಿ ಮೊ: 9620379214

ವರದಿ – ಹರೀಶ ಶೇಟ್ಟಿ ಬೆಂಗಳೂರು

Leave a Reply

Your email address will not be published.