ಎಲ್.ಪಿ.ಎಸ್.ಶಾಲಾ ಮಕ್ಕಳಿಂದ ಯೋಗ : ಸುಬ್ರಹ್ಮಣ್ಯ,,,,

Spread the love

ಎಲ್.ಪಿ.ಎಸ್.ಶಾಲಾ ಮಕ್ಕಳಿಂದ ಯೋಗ : ಸುಬ್ರಹ್ಮಣ್ಯ,,,,

ಕುಷ್ಟಗಿ: 1ರಿಂದ 5ನೇ ತರಗತಿ ವಿದ್ಯಾರ್ಥಿಗಳು ವ್ಯಾಯಾಮ ಅಥವಾ ಯೋಗಗಳಂತಹ ಕ್ರೀಡಾ ಚಟುವಟಿಕೆಗಳನ್ನು ಮಾಡುವುದು ಕಷ್ಟಸಾಧ್ಯ ಆದರೆ ನಮ್ಮ ಶಾಲೆಯ ಮುದ್ದು ವಿದ್ಯಾರ್ಥಿಗಳು ಉತ್ತಮವಾಗಿ ಯೋಗ ಯೋಗ ಮಾಡುವ ಮೂಲಕ ಮನಸ್ಸಿದ್ದರೆ ಎಲ್ಲವೂ ಸಾಧ್ಯ ಎನ್ನುವ ಮಾತನ್ನು ದೃಢ ಪಡಿಸಿದ್ದಾರೆ ಎಂದು ಶಾಲೆಯ ಮುಖ್ಯೋಪಾಧ್ಯಾಯ ಸುಬ್ರಹ್ಮಣ್ಯ ಹೇಳಿದರು.  ಅವರು ತಾಲೂಕಿನ ತಾವರಗೇರಾ ಹೋಬಳಿ ಜುಮಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಡವಿಭಾವಿ ಎಸ್ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ವಿಶ್ವ ಯೋಗ ದಿನಾಚರಣೆ ನಿಮಿತ್ಯ ಮಂಗಳವಾರ ಶಾಲಾ ಆವರಣದಲ್ಲಿ ಯೋಗ ಮಾಡುವ ಮೂಲಕ ಗ್ರಾಮದ ಪಾಲಕರ ಗಮನ ಸೆಳೆದರು. ಈ ಸಂದರ್ಭದಲ್ಲಿ ಅತಿಥಿ ಶಿಕ್ಷಕರಾದ ಕು.ಅಮರೇಶ ನಂದಿಹಾಳ,ಕು.ಉಮಾದೇವಿ, ವಿದ್ಯಾರ್ಥಿಗಳು ಸೇರಿದಂತೆ ಗ್ರಾಮದ ಶಾಲಾ ಸುಧಾರಣಾ ಸಮಿತಿಯವರು ಪಾಲಕರು ಇದ್ದರು. ಫೋಟೋ: ಕುಷ್ಟಗಿ:ತಾಲೂಕಿನ ತಾವರಗೇರಾ ಹೋಬಳಿ ಜುಮಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಡವಿಭಾವಿ ಎಸ್ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು  ಶಾಲಾ ಆವರಣದಲ್ಲಿ ಯೋಗ ಮಾಡಿದರು.

ವರದಿ – ಆದಪ್ಪ ಮಾಲಿಪಾಟೀಲ್

Leave a Reply

Your email address will not be published.