ಜಿಲ್ಲಾಧಿಕಾರಿಗಳ ನಡೆ ಹಳ್ಳಿಕಡೆ ಕಾರ್ಯಕ್ರಮಕ್ಕೆ : ಶಾಸಕ ಚಾಲನೆ,,

Spread the love

ಜಿಲ್ಲಾಧಿಕಾರಿಗಳ ನಡೆ ಹಳ್ಳಿಕಡೆ ಕಾರ್ಯಕ್ರಮಕ್ಕೆ : ಶಾಸಕ ಚಾಲನೆ,,

ಮುದಗಲ್ : ಕಂದಾಯ ಇಲಾಖೆವತಿಯಿಂದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಕಡೆ ಕಾರ್ಯಕ್ರಮವನ್ನು ಪಟ್ಟಣ ಸಮೀಪದ ಹಿರೇಯರದಿಹಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಲಿಂಗಸಗೂರು ಶಾಸಕ ಡಿ.ಎಸ್ ಹೂಲಗೇರಿ ಜ್ಯೋತಿ ಬೆಳಗುವದರ ಮೂಲಕ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಿದರು. ಬನ್ನಿಗೋಳ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಡುವ ಹಿರೇ ಯರದಿಹಾಳ ಗ್ರಾಮಸ್ಥರನ್ನು ಉದ್ದೇಶಿಸಿ ಶಾಸಕ ಹೂಲಗೇರಿ ಮಾತಾಡಿ ನಿಮ್ಮ ಗ್ರಾಮಕ್ಕೆ ಸರಕಾರವೇ ಬಂದಿದೆ ಗ್ರಾಮಸ್ಥರು ಕೊಡಲೇ ಅರ್ಜಿಸಲ್ಲಸಿ ಸರಕಾರದಿಂದ ಸಿಗುವ ಸೌಲಭ್ಯ ಪಡೆದುಕೊಳ್ಳಬೇಕು, ಹಿರಿಯನಾಗರಿಕರ ಪಿಂಚಣಿ, ರೈತರ ಕೃಷಿ ಸಲಕರಣೆ, ಹಾಗೂ ಗ್ರಾಮದ ಯಾವುದೇ ಮೂಲಭೂತ ಸೌಕರ್ಯಪಡೆಯಲು  ಸ್ಥಳದಲ್ಲಿಯೇ ಇತ್ಯರ್ತಮಾಡಿಕೊಡಲು ಅಧಿಕಾರಿಗಳು ತಯಾರಿದ್ದಾರೆ, ಇಲ್ಲಿ ಬಗೆಹರಿಯದ ಸಮಸ್ಯೆಗಳಿಗೆ ಪರಿಹಾರ ಒಂದು ವಾರದ ಒಳಗಾಗಿ ನಿಮ್ಮ ಮನೆಗೆ ಬಾಗಿಲಿಗೆ ಬರುವ ಹಾಗೆ ಸಮಸ್ಯೆ ಸರಿಪಡಿಸಿಕೊಡುತ್ತಾರೆಂದರು. ಕಾರ್ಯಕ್ರಮದಲ್ಲಿ ರೈತರ ಕೃಷಿ ಸಲಕರಣೆಗಳನ್ನು ಶಾಸಕ ಡಿಎಸ್ ಹೂಲಗೇರಿ, ಸಹಾಯಕ ಆಯುಕ್ತ ರಾಹುಲ್ ಸಂಕನೊರ, ತಹಶೀಲ್ದಾರ ಬಲರಾಮ ಕಟ್ಟಿಮನಿ, ಕೃಷಿ ಅಧಿಕಾರಿ ಆಕಾಶದಾನಿ ವಿತರಿಸಿದರು. ಸಹಾಯಕ ಆಯುಕ್ತ ರಾಹುಲ್ ಸಂಕನೂರು ಕಾರ್ಯಕ್ರಮ ಕುರಿತು ರೈತರಿಗೆ ಸಂಪೊರ್ಣ ಮಾಹಿತಿ ನೀಡಿದರು. ತಹಶೀಲ್ದಾರ ಬಲರಾಂ ಕಟ್ಟಿಮನಿ, ಪಶುಸಂಗೋಪನೆ ಇಲಾಖೆ ಅಧಿಕಾರಿ ರಾಚಪ್ಪ, ಉಪ ತಹಶೀಲ್ದಾರ ತುಳಜಾರಾಮ ಸಿಂಗ್, ಶಿಕ್ಷಣ ಇಲಖೆ ಅಧಿಕಾರಿ ಹೊಂಬಣ್ಣ ರಾಠೋಡ್, ಕಂದಾಯ ಇಲಾಖೆ ಅಧಿಕಾರಿ ಶಂಕ್ರಪ್ಪ ಪಟ್ಟಣ ಶೆಟ್ಟಿ, ಗ್ರಾಮ ಲೆಕ್ಕಾಧಿಕಾರಿ ಕಾಮಣ್ಣ ನಾಯಕ, ಕೃಷಿ ಅಧಿಕಾರಿ ಆಕಾಶದಾನಿ, ಮುಖಂಡರು ಚಂದ್ರ ಶೇಖರ ಪಾಟೀಲ್, ಬನ್ನಿಗೋಳ ಗ್ರಾಮ ಪಂಚಾಯತಿ ಅಧ್ಯಕ್ಷ ಹನುಮಂತ ಹಳ್ಳಿ, ಸದಸ್ಯ ಗೌಡಪ್ಪ, ಶರಣಮ್ಮ ಹನ್ಮಂತ ತೊಂಡಿಹಾಳ, ಯಲ್ಲಪ್ಪ ಬೋವಿ, ಇನ್ನಿತರರು ಇದ್ದರು.

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *