ಗಜೇಂದ್ರಗಡದಲ್ಲಿ ಸಂವಿಧಾನ ಶಿಲ್ಪಿ, ಜಗತ್ತಿನ 4 ಜನ ವಿದ್ವಾಂಸರಲ್ಲಿ ಒಬ್ಬರಾದ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಮಾಜಿ ಪ್ರಧಾನಿ ಜಗಜೀವನರಾಂ ಜನ್ಮದಿನಾಚರಣೆ ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು..

Spread the love

ಗಜೇಂದ್ರಗಡದಲ್ಲಿ ಸಂವಿಧಾನ ಶಿಲ್ಪಿ, ಜಗತ್ತಿನ 4 ಜನ ವಿದ್ವಾಂಸರಲ್ಲಿ ಒಬ್ಬರಾದ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಮಾಜಿ ಪ್ರಧಾನಿ ಜಗಜೀವನರಾಂ ಜನ್ಮದಿನಾಚರಣೆ ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು..

ಗದಗ ಜಿಲ್ಲೆಯ ಗಜೇಂದ್ರಗಡದಲ್ಲಿ ಸಂವಿಧಾನ ಶಿಲ್ಪಿ, ಜಗತ್ತಿನ 4 ಜನ ವಿದ್ವಾಂಸರಲ್ಲಿ ಒಬ್ಬರಾದ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಮಾಜಿ ಪ್ರಧಾನಿ ಜಗಜೀವನರಾಂ  ಜನ್ಮದಿನಾಚರಣೆ ಅತ್ಯಂತ ಸಂಭ್ರಮದಿಂದ ಜರುಗಿತು. ಅನೇಕ ಜಾತಿ ಜನಾಂಗದ  ಜನರು ಭಾಗವಹಿಸಿ  ಹಬ್ಬದ ರೀತಿಯಲ್ಲಿ ಸಂಭ್ರಮಿಸಿ ಕುಣಿದು ಕುಪ್ಪಳಿಸಿ ದರು.ಸರ್ಕಾರಿ ಕಾರ್ಯಕ್ರಮ ವಾಗಿದ್ದರಿಂದ ಬಾಬು ಜಗಜೀವನರಾಂ ಕುರಿತು ಉಪನ್ಯಾಸ ಮಾಡುವ ಜವಾಬ್ದಾರಿ  ನಮಗೆ ವಹಿಸಿದ್ದರು. ಬಿಹಾರದ ಚಾಂದ್ವ ಗ್ರಾಮದ ಶೋಭಿರಾಮ ಮತ್ತು  ಬಾಸಂತಿಯ ಪುತ್ರರಾದ ಬಾಬು ಜಗಜೀವನರಾಂ 1908 ಎಪ್ರಿಲ್ 5  ರಂದು ಜನಿಸಿದರು.  ಹಸಿರು ಕ್ರಾಂತಿಯೆಂದರೆ ಕೇವಲ ನೀರಾವರಿ  ಯೋಜನೆಗಳು,  ಆಧುನಿಕ ಕೃಷಿ ತಂತ್ರಜ್ಞಾನ ಅಷ್ಟೇ ಅಲ್ಲ, ಭೂಮಿಯ ಸಣ್ಣ ಸಣ್ಣ ಹಿಡುವಳಿಗಳನ್ನಾಗಿ ಮಾರ್ಪಡಿಸಲಾಯಿತು. ಈ ಯೋಜನೆಗಳ ಭಾಗವಾಗಿ 1960 ದಶಕದಲ್ಲಿ ಭೂ ಸುಧಾರಣೆ, ಭೂ ಮಿತಿ ಕಾಯ್ದೆ ಜಾರಿಗೆ ತರಲಾಯಿತು. ದೇಶದ ಸಂಪತ್ತು ಸರ್ವ ಜನರಿಗೆ ಸಮಾನವಾಗಿ ಹಂಚಿಕೆಯಾಗದ ಹೊರತು ಸ್ವಾಂತಂತ್ರ್ಯ ಮತ್ತು ಪ್ರಜಾಪ್ರಭುತ್ವಕ್ಕೆ ಅರ್ಥವಿಲ್ಲ ವೆಂದು ಅಂಬೇಡ್ಕರ್ ಗಟ್ಟಿಯಾಗಿ ಪ್ರತಿಪಾದನೆ ಮಾಡಿದ್ದರು. ಆದು ಸಾಧ್ಯವಾಗಲಿಲ್ಲ.ದುರಂತವೆಂದರೆ 1991 ರಿಂದ ಈಚೆಗೆ  ಅಂಬೇಡ್ಕರ್ ಕೊಡಮಾಡಿದ್ದ ಮೀಸಲಾತಿ ಇತರೆ ಸಾಂವಿಧಾನಿಕ ಹಕ್ಕುಗಳನ್ನು ಒಂದೊಂದಾಗಿ ಕಿತ್ತಿ ಕೊಳ್ಳಲಾಗುತ್ತಿದೆ. ಮಧ್ಯಪ್ರದೇಶ, ಮಹಾರಾಷ್ಟ್ರ  ಪ್ರಕರಣವೊಂದರಲ್ಲಿ ತೀರ್ಪು ನೀಡಿದ  ಸುಪ್ರೀಂ ಕೋರ್ಟ್, ಹಿಂದುಳಿದ ಜನಾಂಗದ ರಾಜಕೀಯ ಮೀಸಲಾತಿಗೆ  ಕೊಕ್ಕೆ ಹಾಕಿದೆ.  ಈ ಜನಾಂಗದ ಆರ್ಥಿಕ, ಸಾಮಾಜಿಕ ಸಮೀಕ್ಷೆ ನಡೆಸದ ಹೊರತು  ರಾಜಕೀಯ ಮೀಸಲಾತಿ ಕೊಡಬಾರದೆಂದು ತೀರ್ಪು ನೀಡಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ದಲ್ಲಿ  ತಾಲೂಕ ಜಿಲ್ಲಾ ಪಂಚಾಯತ್ ಚುನಾವಣೆಗಳು  ಮುಂದೂಡಲಾಗಿದೆ.  ಬಡ್ತಿ ಮೀಸಲಾತಿಗೆ ಸಂಬಂಧಿಸಿ (ಉತ್ತರ ಖಂಡ ರಾಜ್ಯ ದ ಪ್ರಕರಣ)  2019 ರಲ್ಲಿ ತೀರ್ಪು ನೀಡಿದ ಸುಪ್ರೀಂ ಕೋರ್ಟ್, ಮೀಸಲಾತಿ ಆಯಾ  ವ್ಯಕ್ತಿಯ ಮೂಲಭೂತ ಹಕ್ಕಲ್ಲವೆಂದು ಮತ್ತು ಮೀಸಲಾತಿ ಕೊಡುವುದು ಬಿಡುವುದು ಸರ್ಕಾರದ ವಿವೇಚನೆಗೆ ಬಿಟ್ಟಿದ್ದೆಂದು  ಪ್ರತಿಪಾದಿಸಿದೆ. ಕೇಂದ್ರ ಸರ್ಕಾರ, ಜನರ ಸಾಂವಿಧಾನಿಕ ಪ್ರಮುಖ ಹಕ್ಕುಗಳಗನ್ನು  ಕೋರ್ಟ್ ಗಳ ಮೂಲಕ  ಕಿತ್ತಿಕೊಳ್ಳುತ್ತಿದೆ. ಒಟ್ಟಾರೆಯಾಗಿ ಅಂಬೇಡ್ಕರ್ ವರ ಅಂತಿಮ ಗುರಿಗಳ ಈಡೇರಿಕೆಗಾಗಿ, ಸಂವಿಧಾನದ ರಕ್ಷಣೆಗಾಗಿ  ಸ್ವಾತಂತ್ರ್ಯ ಸಂಗ್ರಾಮ ಮಾದರಿಯಲ್ಲಿ ಹೋರಾಡಬೇಕಾಗಿದೆ. ಡಿ.ಹೆಚ್.ಪೂಜಾರ.

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *