ಮಾಜಿ ಶಾಸಕ ಗುಳಗಣ್ಣನವರ್ ಇನ್ನಿಲ್ಲ,,,,,

Spread the love

ಮಾಜಿ ಶಾಸಕ ಗುಳಗಣ್ಣನವರ್ ಇನ್ನಿಲ್ಲ,,,,,

ಯಲಬುರ್ಗಾ ತಾಲೂಕಿನ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಈಶಣ್ಣ ಗುಳಗಣ್ಣನವರ್ ಇಂದು ಲೋಕವನ್ನು ತ್ಯಜಿಸಿದ್ದಾರೆ,ಈಶಣ್ಣ ನವರು ದೀರ್ಘಕಾಲ ಅನಾರೋಗ್ಯದಿಂದ ಪೀಡಿತರಾಗಿದ್ದರು ಅವರನ್ನು ಚಿಕಿತ್ಸೆಗಾಗಿ ಗದಗ ನಗರಕ್ಕೆ ಜರ್ಮನ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು, ಫಲಕಾರಿಯಾಗದೆ ಇಂದು ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ, 2008 ರಲ್ಲಿ ದಾನ ಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ವಿಶ್ ಅಣ್ಣನವರು ಕಾಂಗ್ರೆಸ್ ಪಕ್ಷದ ಬಸವರಾಜ ರಾಯರೆಡ್ಡಿ ಅವರನ್ನು ಸೋಲಿಸಿ ವಿಧಾನಸಭೆ ಪ್ರವೇಶಿಸಿದರು, ಈ ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಜನಮನ್ನಣೆ ಗಳಿಸಿದರು, ಶಾಸಕರಾಗಿ ಆಯ್ಕೆಯಾದ ಸುಮಾರು ಎರಡು ವರ್ಷದಲ್ಲಿ ವಿದೇಶ ಪ್ರವಾಸದ ವೇಳೆ ಪಾರ್ಶವಾಯು ಗೆ ತುತ್ತಾಗಿ ಸುದೀರ್ಘ ಕಾಲದಿಂದ ಚಿಕಿತ್ಸೆಗೆ ಗುರಿಯಾಗಿದ್ದರು,ವಿಧಾನಸಭೆ ಕಲಾಪಗಳ ವೇಳೆ ಆಸ್ಪತ್ರೆಯಿಂದಲೇ ವಿಲ್ ಚೇರ್ ಮೂಲಕ ವಿಧಾನಸಭೆಗೆ ಹಾಜರಾಗುತ್ತಿದ್ದರು, ಇವರು ಬಿ ಎಸ್ಸಿ ಪದವೀಧರರಾಗಿದ್ದು ಇವರಿಗೆ 68 ವರ್ಷ ವಯಸ್ಸಾಗಿತ್ತು, ಇವರ ಸುಪುತ್ರ ಯಲಬುರ್ಗಾ ಕ್ಷೇತ್ರದ ಬಿಜೆಪಿಯ ಪ್ರಭಾವಿ ಯುವ ಮುಖಂಡ ನವೀನ್ ಗುಳಗಣ್ಣನವರ್ ಜೊತೆ ಅಪಾರ ಬಂಧು-ಬಳಗವನ್ನು ಹಾಗೂ ಈ ಕ್ಷೇತ್ರದ ಜನರನ್ನು ಬಿಟ್ಟು ಅಗಲಿದ್ದಾರೆ, ಇಂದು ರವಿವಾರ 3:00 ಗಂಟೆಗೆ ಸ್ವಗ್ರಾಮ ಇಟಗಿಯಲ್ಲಿ ಇವರ ಅಂತ್ಯ ಸಂಸ್ಕಾರ ನೆರವೇರಲಿದೆ,

ವರದಿ – ಹುಸನಬಾಷಾ ಮೊತೇಖಾನ್

Leave a Reply

Your email address will not be published. Required fields are marked *