ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಇಂದು ಕಿಲ್ಲಾರಹಟ್ಟಿ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ತಾಲೂಕಾಡಳಿತ ಹಾಗೂ ಶಾಸಕರು….

Spread the love

ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಇಂದು ಕಿಲ್ಲಾರಹಟ್ಟಿ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ತಾಲೂಕಾಡಳಿತ ಹಾಗೂ ಶಾಸಕರು….

ರಾಜ್ಯ ಸರ್ಕಾರದ ಮಹತ್ವದ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆಗೆ’ ಕಾರ್ಯಕ್ರಮವು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಿಲ್ಲಾರಹಟ್ಟಿ ಗ್ರಾಮದಲ್ಲಿ ನಡೆಯಿತು. ಜನರ ಮನೆಬಾಗಿಲಿಗೆ ಆಡಳಿತ ಎನ್ನುವ ಆಶಯದಡಿ ಮಾನ್ಯ ಜಿಲ್ಲಾಧಿಕಾರಿಗಳ ಬದಲಾಗಿ ತಹಶೀಲ್ದಾರ್ ಎಮ್.ಸಿದ್ದೇಶರವರು ಕಿಲ್ಲಾರಹಟ್ಟಿ ಗ್ರಾಮಕ್ಕೆ ಖುದ್ದು ಬೇಟೆ ನೀಡಿ ಅಲ್ಲಿನ ಗ್ರಾಮಸ್ಥರಿಂದ ನಾನಾ ಮನವಿಗಳನ್ನು ಸ್ವೀಕರಿಸಿ ಜನತೆಗೆ ಸ್ಪಂದಿಸಿದರು. ಜಳಜಳ ಸುರಿಯುತ್ತಿದ್ದ ಬಿಸಿಲಿನ ಮಧ್ಯೆಯೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು. ಗ್ರಾಮದ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ದೀಪ ಹಚ್ಚುವ ಮೂಲಕ ಉದ್ಘಾಟಿಸಿ. ಸಾರ್ವಜನಿಕರು ಹಲವಾರು ಮನವಿಗಳಿಗೆ ಅಧಿಕಾರಿಗಳು ಸ್ಥಳದಲ್ಲೇ ಪ್ರತಿಕ್ರಿಯಿಸುವ ಈ ಕಾರ್ಯಕ್ರಮವು ಅತ್ಯಂತ ಮಹತ್ವಪೂರ್ಣದ್ದಾಗಿದೆ ಎಂದು ತಿಳಿಸಿದರು. ಜನತೆಗೆ ಸ್ಪಂದನೆ ನೀಡುವಂತಹ ಈ ಕಾರ್ಯಕ್ರಮವನ್ನು ಮುಂದಿನ ದಿನಗಳಲ್ಲಿ ಇನ್ನೂ ಅರ್ಥಪೂರ್ಣವಾಗಿ ನಡೆಸಲಾಗುವುದು ಎಂದು ತಿಳಿಸಿದರು. ಕಿಲ್ಲಾರಹಟ್ಟಿ ಗ್ರಾಮ ವಾಸ್ತವ್ಯದ ಕಾರ್ಯಕ್ರಮದಲ್ಲಿ ಸ್ವೀಕೃತವಾದ ಹಲವಾರು ಅರ್ಜಿಗಳಲ್ಲಿ, ಜೊತೆಗೆ ಗೌಂವಠಾಣ ಜಮೀನಿಗೆ ಸಂಬಂಧಿಸಿದಂತೆ  ಅರ್ಜಿಗಳ ಸಹ ಇದ್ದವು. ಸರ್ಕಾರ ನೀಡುವ ಗುರಿಯನುಸಾರ ಹಂತಹಂತವಾಗಿ ಆದ್ಯತೆಯೆ ಮೇರೆಗೆ ಒತ್ತು ಕೊಡಲಾಗುವುದು ಎಂದು, ತಿಳಿಸಿದರು. ಪ್ರಮಾಣ ಪತ್ರ ವಿತರಣೆ: ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಸಂದರ್ಭದಲ್ಲಿ ಕೆಲವು ಫಲಾನುಭವಿಗಳಿಗೆ ಸ್ಥಳದಲ್ಲೇ ಪಿಂಚಣಿ, ಆದಾಯ ಮತ್ತು ಜಾತಿ ಪ್ರಮಾಣ ಸೇರಿದಂತೆ ವಿವಿಧ ಪ್ರಮಾಣ ಪತ್ರಗಳನ್ನು ವಿತರಿಸಲಾಗುವುದೆಂದರು. ನಾಡಗೀತೆ, ಪ್ರಾರ್ಥನಾ ಗೀತೆಗಳನ್ನು ಹೇಳಿ ಕಾರ್ಯಕ್ರಮಕ್ಕೆ ಮೆರುಗು ನೀಡಿದ ಗ್ರಾಮದ ಶಾಲಾ ಮಕ್ಕಳಿಗೆ ಮಾನ್ಯ ತಹಶೀಲ್ದಾರರಾದ ಎಮ.ಸಿದ್ದೇಶರವರು ಪುಸ್ತಕಗಳನ್ನು ನೀಡಿ ಪ್ರೋತ್ಸಾಹಿಸಿದರು. ಅಧಿಕಾರಿಗಳು ಜನತೆಗೆ ಸ್ಪಂದಿಸಬೇಕು ಎಂದು ಸಮಾಜ ಸೇವಕರು ಮನವಿ ಮಾಡಿದರು. ಮಾನ್ಯ ತಶೀಲ್ದಾರ್ ಎಮ್.ಸಿದ್ದೇಶ ಕುಷ್ಟಗಿ ಹಾಗೂ ಶಾಸಕರಾದ ಶ್ರೀ ಅಮರೇಗೌಡ ಎಲ್. ಬಯ್ಯಾಪುರವರು, ಕೆಬಿ ಅಧಿಕಾರಿಗಳು ಹಾಗೂ ನಾಡಕಛೇರಿ ಅಧಿಕಾರಿಗಳು, ಸಿಬ್ಬಂದಿಗಳು ಜೊತೆಗೆ C D P O ಅಧಿಕಾರಿಗಳು, ಮಾಜಿ ಜಿಲ್ಲಾ ಪಂಚಾಯತ ಸದಸ್ಯರು, ಹಾಗೂ ಕಿಲ್ಲಾರಹಟ್ಟಿ ಗ್ರಾಮದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಸರ್ವ ಸದಸ್ಯರು ಹಾಗೂ ಊರಿನ ಗುರು, ಹಿರಿಯರು ಸೇರಿ ಈ ಕಾರ್ಯಕ್ರಮವನ್ನುಯಶಸ್ವಿಯಾಗಿ ನೆರವೇರಿಸಿ ಕೊಟ್ಟರು.

ವರದಿ – ಸೋಮನಾಥ ಹೆಚ್.ಎಮ್.

4 thoughts on “ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಇಂದು ಕಿಲ್ಲಾರಹಟ್ಟಿ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ತಾಲೂಕಾಡಳಿತ ಹಾಗೂ ಶಾಸಕರು….

Leave a Reply

Your email address will not be published. Required fields are marked *