“ತಲವಾರ್ ಎಕ್ಸ್ ಪ್ರೆಸ್ ” ನಿಂದ ರಂಗ ಕಲಾ ಮಾಸಾಚರಣೆ-

Spread the love

ತಲವಾರ್ ಎಕ್ಸ್ ಪ್ರೆಸ್ನಿಂದ ರಂಗ ಕಲಾ ಮಾಸಾಚರಣೆ

ಮಾನ್ಯರೇ _ ಎಲ್ಲರಿಗೂ ನಮಸ್ಕಾರಗಳು🙏, ನಮ್ಮ ತಾಲೂಕು ರಂಗ ಕಲಾವಿದ ಬೀಡಾಗಿದೆ ಎನ್ನುವುದಕ್ಕೆ ಹೆಮ್ಮೆಯಾಗುತ್ತಿದೆ. “ವಿಶ್ವರಂಗ ಭೂಮಿ ದಿನಾಚರಣೆ” ಪ್ರಯುಕ್ತ, ತಲವಾರ್ ಎಕ್ಸ್ ಪ್ರೆಸ್ ವೆಬ್ ಚಾನೆಲ್. ವಿಜಯನಗರ  ಜಿಲ್ಲೆಯ ಎಲ್ಲಾ ತಾಲೂಕಗಳಲ್ಲಿನ ಯಾವುದೇ ಭಾಗದ ರಂಗ ಕಲಾವಿದರ, ಹಾಗೂ ರಂಗ ನಿರ್ಧೇಶಕರ ಕುರಿತ ಪರಿಚಯಾತ್ಮ ಲೇಖನಗಳನ್ನು ಪ್ರಕಟಿಸಲು ಉತ್ಸುಕತೆ ತೋರಿದ್ದು. ಈ ಅವಕಾಶವನ್ನು ಬರಹಗಾರರು ಸದ್ಬಳಕೆ ಮಾಡಿಕೊಳ್ಳಬಹುದಾಗಿದೆ. ಬರಹ ಗಾರರು ತಮ್ಮ ಸ್ಥಳೀಯ ಹಾಗೂ  ಹತ್ತಿರದ ರಂಗ ಕಲಾ ಪ್ರತಿಭೆಗಳನ್ನು, ಬರಹದ ಮೂಲಕ ನಾಡಿಗೆ ಪರಿಚಯಿಸಲು ಅವಕಾಶ ಒದಗಿಸಲಾಗಿದೆ. ಹಾಗೂ ರಂಗ ನಿರ್ಧೇಶಕರ ಕುರಿತಾದ ಪರಿಚಯಾತ್ಮಕ ಲೇಖನವನ್ನು, ನಾಡಿನ ಓದುಗರಿಗೆ ತಲುಪಿಸುವ ಪ್ರಯತ್ನ “ತಲವಾರ್ ಎಕ್ಸ್ ಪ್ರೆಸ್” ಮಾಡಲು ಮುಂದಾಗಿದೆ.ಕಾರಣ ವಿಜಯನಗರ  ಜಿಲ್ಲೆಯ ಯುವ ಬರಹಗಾರರಿಗೆ ಮಾತ್ರ ಅವಕಾಶ ಇದಾಗಿದೆ,15ರಿಂದ 45ವರ್ಷ ವಯಸ್ಸಿನ ಒಳಗಿನ ವಯೋಮಿತಿಯುಳ್ಳ ಬರಹಗಾರರಿಗೆ ಮ‍‍‍ಾತ್ರ ಆಧ್ಯತೆ ನೀಡಲಾಗುವುದು. ಅವರು ತಮ್ಮ ನೆರೆ ಹೊರೆಯ ಹಿರಿಯ ರಂಗ ಕಲಾವಿದರನ್ನು, ಹಾಗೂ ರಂಗ ನಿರ್ಧೇಶಕರನ್ನು ಪರಿಚಯಿಸುವ ಪ್ರಯತ್ನ ಮಾಡಬಹುದಾಗಿದೆ, 50ವರ್ಷದ ವಯಸ್ಸಿನ ಮೇಲ್ಪಟ್ಟಂತಹ ರಂಗ ಕಲಾವಿದರ ಹಾಗೂ ರಂಗ ನಿರ್ಧೇಶಕರ ಪರಿಚಯ ಲೇಖನಕ್ಕೆ ಆಧ್ಯತೆ ನೀಡಲಾಗುತ್ತದೆ- ಕಾರಣ ವಿಜಯನಗರ  ನಗರ ಜಿಲ್ಲೆಯ ಯಾವುದೇ ಭಾಗದ ಯುವ ಉತ್ಸಾಹಿ ಬರಹಗಾರರು, ತಮ್ಮ ಬರಹ ಪ್ರತಿಭೆಯನ್ನು ಅನಾವರಣ ಮಾಡಲು ಹಾಗೂ ಎಲೆಮರೆ ಕಾಯಿಯಂತಿರುವ ಕಲಾವಿದರನ್ನ ಪರಿಚಯಿಸುವ ಇದು ವೇದಿಕೆಯಾಗಿದ್ದು. ಯುವ ಬರಹಗಾರರು ಸದ್ಬಳಕೆ ಮಾಡಿಕೊಳ್ಳಲು ಕೋರಲಾಗಿದ್ದು,ಲೇಖನ 300ಶಬ್ದಗಳನ್ನು ಮೀರಬಾರದು. ಮೊಬೈಲ್ ನ ವಾಟ್ಸಾಪ್ ನಲ್ಲಿ ಟೈಪ್ ಮಾಡಿ 9008937428 ಗೆ  ಹಾಕಬೇಕಿದೆ. ಬರಹಗಳನ್ನು ಇವತ್ತಿನಿಂದ ಎಪ್ರಿಲ್‌ 30ರವರೆಗೆ ಯಾವಾಗಾದರೂ, ಜಿಲ್ಲೆಯಲ್ಲಿರುವ ಯುವ ಬರಹಗಾರರು ಯಾರೇ ಆದರು ಹಾಕಬಹುದಾಗಿದೆ, ಲೇಖನವನ್ನು ನಮಗೆ ತಲುಪಿದ  ಶೀಘ್ರವೇ “ತಲವಾರ್ ಎಕ್ಸ್ ಪ್ರೆಸ್” ವೆಬ್ ಪೇಪರನಲ್ಲಿ ಪ್ರಕಟಿಸಲಾಗುವುದು. ಲೆಖನ ಕ್ಕೆ ಅಗತ್ಯವಿರೋ ಫೋಟೋ ಹಾಗೂ ವೀಡಿಯೋಗಳನ್ನು ಜೊತೆಗೆ ಹಾಕಬೇಕು,ಲೇಖಕರ ಹಾಗೂ ಕಲಾವಿದರ ವಿಳಾಸ ಮತ್ತು ಮೊಬೈಲ್ ನಂ ಖಡ್ಡಾಯವಾಗಿ ಹಾಕಬೇಕಿದೆ.

ವರದಿ –  🙏ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ  -9008937428

Leave a Reply

Your email address will not be published. Required fields are marked *