ಜವಾಹರ ನವೋದಯ ವಿದ್ಯಾರ್ಥಿಗಳಿಂದ ರಾಗಿಂಗ,,,,,,

Spread the love

ಜವಾಹರ ನವೋದಯ ವಿದ್ಯಾರ್ಥಿಗಳಿಂದ ರಾಗಿಂಗ,,,,,,

ಮುದಗಲ್: ಸಮೀಪದ ಕನ್ನಾಪುರಹಟ್ಟಿ ಹೊರವಲಯದ ಜವಾಹರ ನವೋದಯ ವಿದ್ಯಾಲಯದಲ್ಲಿ 9 ನೇ ತರಗತಿಯ ವಿದ್ಯಾರ್ಥಿಗಳು 8 ನೇ ತರಗತಿಯ ವಿದ್ಯಾರ್ಥಿಗಳಿಗೆ ರ‌್ಯಾಗಿಂಗ್ ಮಾಡಲು ಮುಂದಾದಗ ಶಿಕ್ಷಕರ ಎದುರೇ ಪರಸ್ಪರ ಹೊಡೆದಾಡಿಕೊಂಡು ಸುಮಾರು 20 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಂಭೀರ ಗಾಯಗಳಾಗಿರುವ ಘಟನೆ ಗುರುವಾರ ತಡರಾತ್ರಿ ನಡೆದಿದೆ. 1994 ರಲ್ಲಿ ಆರಂಭವಾದ ಕೇಂದ್ರ ಸರ್ಕಾರದ ಈ ವಿದ್ಯಾಲಯದಲ್ಲಿ ಸುಮಾರು 500 ಕ್ಕೂ ಹೆಚ್ಚು ವಿದ್ಯಾರ್ಥಿಗಳು 6 ರಿಂದ 12 ನೇ ತರಗತಿಯ ವರೆಗೆ ಅಭ್ಯಾಸ ಮಾಡುತ್ತಿದ್ದು, 50 ಕ್ಕೂ ಹೆಚ್ಚು ಶಿಕ್ಷಕರು ಪಾಠ ಭೋದನೆ ಮಾಡುತ್ತಿದ್ದಾರೆ. ಈ ವಿದ್ಯಾಲಯದಲ್ಲಿ ಅಭ್ಯಾಸ ಮಾಡುತ್ತಿರುವ 8 ಮತ್ತು 9 ನೇ ತರಗತಿಯ ವಿದ್ಯಾರ್ಥಿಗಳು ಗುರುವಾರ ರಾತ್ರಿ 10 ಗಂಟೆಗೆ ಅನ್ಯ ವಿಷಯಕ್ಕೆ ಸಂಭಂದಿಸಿದಂತೆ ಶಿಕ್ಷಕರ ಎದುರೇ ಬಡಿಗೆ ಹಿಡಿದುಕೊಂಡು ಪರಸ್ಪರ ಮಾರಾಮಾರಿ ಹಲ್ಲೇ ಮಾಡಿಕೊಂಡು, ಗಂಭೀರ ಗಾಯಗಳು ಮಾಡಿಕೊಂಡಿದ್ದಾರೆ. ವಿದ್ಯಾಲಯದ ಕಟ್ಟಡದ ಕಿಟಕಿಯ ಗಾಜು, ವಿದ್ಯುತ್ ಸಾಮಗ್ರಿಗಳು ಇನ್ನಿತರ ಸಾಮ್ರಾಗಿಗಳನ್ನು ಧ್ವಂಸ ಮಾಡಿದ್ದಾರೆ. ಗಾಯಗೊಂಡವರನ್ನು ಪ್ರಾಚಾರ್ಯರು ಮರುದಿನ ಅವರ ಪಾಲಕರನ್ನು ಕರೆಯಿಸಿ ಊರಿಗೆ ಕಳಿಸಿದ್ದಾರೆ. ಈ ಘಟನೆಯಲ್ಲಿ ಭಾಗಿಯಾದ 9 ನೇ ತರಗತಿಯ 15 ವಿದ್ಯಾರ್ಥಿಗಳನ್ನ ಅಮಾನತ್ತು ಮಾಡಲಾಗಿದೆ. ವಿದ್ಯಾಲಯದ ಪ್ರಾಚಾರ್ಯ ಹಾಗೂ ಕೆಲ ಶಿಕ್ಷಕರ ಮದ್ಯ ಹೊಂದಾಣಿಕೆ ಇರದೇ ಇದ್ದರಿಂದ ಕೆಲ ಮಕ್ಕಳನ್ನು ಪ್ರಾಚಾರ್ಯರು ಎತ್ತಿಕಟ್ಟದರೆ, ಇನ್ನೂ ಕೆಲವರನ್ನು ಶಿಕ್ಷಕರು ಎತ್ತಿಕಟ್ಟಿ ಜಗಳವಾಡಿಸಲು ಮುಂದಾಗುತ್ತಿದ್ದಾರೆ. ಇದರಿಂದ ವಿದ್ಯಾಲಯ ಕೊಂಡವಾಡವಾಗಿ ಮಾರ್ಪಟ್ಟಿದ್ದು ದಿನನಿತ್ಯ ಒಂದಿಲೊಂದು ಜಗಳ ನಡೆದರೂ ಯಾರುಕೂಡಾ ತಲೆಕೆಡಿಸಿಕೊಳ್ಳುತ್ತಿಲ್ಲ. ಕೂಡಲೇ ಜಿಲ್ಲಾಧಿಕಾರಿಗಳು ಎಚ್ಚೆತ್ತು ಪಾಚಾರ್ಯ ಬಸವರಾಜ ಹಾಗೂ ಶಿಕ್ಷಕರನ್ನು ಬೇರೆಡೆಗೆ ವರ್ಗಾವಣೆ ಮಾಡಿದರೆ ಮಾತ್ರ ಶಾಲೆ ಸುಗಮವಾಗಿ ನಡೆಯುತ್ತದೆ ಹಾಗೂ ಪರಸ್ಪರ ಬಡಿದಾಡಿಕೊಂಡ ಗಾಯಗೊಂಡಿರುವ ವಿದ್ಯಾರ್ಥಿಗಳನ್ನು ಶಾಲೆಯಿಂದ ಅಮಾನತ್ ಮಾಡಬೇಕೆಂದು ಪಾಲಕರಾದ ವಿರೇಶ ಮಸ್ಕಿ, ಬಸವರಾಜ, ಶರಣಗೌಡ, ದೇವಣ್ಣ, ಹನಮಗೌಡ, ಸೇರಿದಂತೆ ಇತರರು ಒತ್ತಾಯಿಸಿದ್ದಾರೆ. ವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಹೊಡೆದಾಡಿಕೊಂಡಿರುವುದು ನನ್ನ ಗಮಕ್ಕಿಲ್ಲ. ಈ ಕುರಿತು ಪ್ರಾಚಾರ್ಯರನ್ನು ವಿಚಾರಿಸಿ, ವರದಿ ನೀಡಲು ಸೂಚಿಸಲಾಗುವುದು, ವರದಿ ಬಂದ ನಂತರ ಜಿಲ್ಲಾಧಿಕಾರಿಗಳ ಗಮನಕ್ಕೆ ತರುತ್ತೇನೆ -ರಾಹುಲ್ ಸಂಕನೂರು ಉಪ ವಿಭಾಗಾಧಿಕಾರಿ ಲಿಂಗಸುಗೂರು.

 ವರದಿ – ಸಂಪಾದಕೀಯ

Leave a Reply

Your email address will not be published. Required fields are marked *