ಕೂಡ್ಲಿಗಿ:ಪಟ್ಟಣದಲ್ಲಿ ಯೂಜುಡಿ ಯೂಜ್ಲೆಸ್.!?

Spread the love

ಕೂಡ್ಲಿಗಿ:ಪಟ್ಟಣದಲ್ಲಿ ಯೂಜುಡಿ ಯೂಜ್ಲೆಸ್.!?

ವಿಜಯನಗರ  ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ,ಒಳ ಚರಂಡಿ ಕಾಮಗಾರಿ ಅಸ್ಥವ್ಯಸ್ಥವಾಗಿದ್ದು. ಪರಿಣಾಮ ಒಳಚರಂಡಿ ಕಾಮಗಾರಿಯಿಂದ ಪಟ್ಟಣದಲ್ಲಿನ ಸಾರ್ವಜನಿಕರು, ಅನುಕೂಲಕ್ಕಿಂತ ಅನಾನುಕೂಲವನ್ನೇ ಅನುಭವಿಸುತ್ತಿದ್ದಾರೆ. ಗಲ್ಲಿ ಗಲ್ಲಿಗಳಲ್ಲಿನ ರಸ್ತೆಗಳು ತಗ್ಗು ಗುಂಡಿಗಳು ನಿರ್ಮಾಣವಾಗಿದ್ದು, ವಾಹನ ಮಾತ್ರವಲ್ಲ ಪಾದಾಚಾರಿಗಳೂ ಸಹ ಸಂಚರಿಸಲು ಹರಸಾಹಸ ಮಾಡುವಂತಾಗಿದೆ. ಹಾಗಾಗಿ ಮೂರು ವರ್ಷಗಳಿಂದ ಸಾರ್ವಜನಿಕರ ಪಾಲಿಗೆ ಒಳ ಚರಂಡಿ ಕಾಮಗಾರಿ,ಯೂಜ್ ಲೆಸ್ ಆಗಿದೆ ಕಾಮಗಾರಿಯು ಯಾರಿಗೂ ಯಾವುದಕ್ಕೂ ಉಪಯೋಗವಾಗಿಲ್ಲ ಎನ್ನುತ್ತಾರೆ ಪಟ್ಟಣದ ನಾಗರೀಕರು.ಕೂಡ್ಲಿಗಿ ಪಟ್ಟಣದ ಒಳಚರಂಡಿ ಕಾಮಗಾರಿ, ಭಾಗಶಹಃ ಅವ್ಯವಸ್ಥೆಯ ಆಗರವಾಗಿರುವ ದೂರು ಕೇಳಿಬಂದಿದೆ.ಕಾನಗಾರಿ ಸಂಪೂರ್ಣ ಕಳಪೆ ಯಿಂದ ಕೂಡಿದ ಕಾಮಗಾರಿ ನಡೆದಿದೆ ಎನ್ನಲಾಗಿದೆ, ಒಳಚರಂಡಿ ಯೋಜನೆಯಲ್ಲಿ ಭಾರೀ ಹಗರಣ ಜರುಗಿರುವುದಾಗಿ ಆರೋಪಗಳು ಕೇಳಿಬಂದಿದ್ದು, ಕಳೆದ ಮೂರು ವರ್ಷಗಳಿಂದ ಜರುಗುತ್ತಿರುವ ಒಳಚರಂಡಿ ಕಾಮಗಾರಿ,ಬಹುತೇಕ ಕಡೆ ಇನ್ನೂ ಪೂರ್ಣಗೊಂಡಿಲ್ಲ ಪೂರ್ಣಗೊಂಡಿರುವೆಡೆ ಬಳಕೆಯಾಗಿಲ್ಲ. ಕಾಮಗಾರಿಯಿಂದ ಸಾರ್ವಜನಿಕರಿಗೆ ‍ಅನುಕೂಲಕ್ಕಿಂತ ಅನಾನು ಕೂಲಗಳೇ ಹೆಚ್ಚು ಎಂದು ಪ್ರಜ್ಞಾವಂತ ನಾಗರೀಕರು ದೂರಿದ್ದಾರೆ. ಒಳಚರಂಡಿ ಕಾಮಗಾರಿ ಬಗ್ಗೆ ಹಲವಾರು ಗಂಭೀರ ಆರೋಪಗಳಿವೆ. ಆರೋಪಗಳ ಕುರಿತು ಸೂಕ್ತ ತನಿಖೆಯಾದರೆ ಮಾತ್ರ ಸತ್ಯಬಯಲಿಗೆ ಬರಲಿದೆ.

ವರದಿ –ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428

Leave a Reply

Your email address will not be published. Required fields are marked *