ಉಜ್ಜಿನಿ:ಹೊಲಗಳಲ್ಲಿ ವಿದ್ಯುತ್ ಕಂಪನಿಯ ದರ್ಭಾರು..ಬೆದರು ಗೊಂಬೆಗಳಾಗಿರುವ ಇಲಾಖಾಧಿಕಾರಿಗಳು,,

Spread the love

ಉಜ್ಜಿನಿ: ಹೊಲಗಳಲ್ಲಿ ವಿದ್ಯುತ್ ಕಂಪನಿಯ ದರ್ಭಾರು.. ಬೆದರು ಗೊಂಬೆಗಳಾಗಿರುವ ಇಲಾಖಾಧಿಕಾರಿಗಳು,,

ವಿಜಯನಗರ  ಜಿಲ್ಲೆ ಕೊಟ್ಟೂರು ತಾಲೂಕು ಉಜ್ಜಿನಿಯಲ್ಲಿ,ಇತ್ತೀಚೆಗೆ ಖಾಸಗೀ ಕಂಪನಿಯೊಂದು ರೈತರ ಹಾಗೂ ಸರ್ಕಾರಿ ಸ್ವತ್ತಿನಲ್ಲಿ. ಸರ್ಕಾರಿ ನಿಯಮಗಳನ್ನು ಪಾಲಿಸದೇ ಸ್ಥಳೀಯ ಸಂಸ್ಥೆಗಳಿಂದ ಪರವಾನಗೀ ಹೊಂದದೇ, ರೈತರ ಸಮಕ್ಷಮ ಒಪ್ಪಿಗೆ ಪಡೆಯದೇ ನಿಗದಿತ ನಿಯಮಗಳನ್ನು ಪಾಲಿಸದೇ ಕಂಬಗಳನ್ನು ನೆಡುತ್ತಿದೆ ಎಂದು ರೈತರು ಪಂಕನಿ ವಿರುದ್ಧ ತೀವ್ರ ಆಕ್ರೋಶ ವ್ಯೆಕ್ತಪಡಿಸಿರುವ ಘಟನೆ ಜರುಗಿದೆ. ತಿಂಗಳುಗಳಿಂದಲೂ ಈ ಪ್ರಕ್ರಿಯೆ ನಿರಂತರ ಜರುಗುತ್ತಿದ್ದು,ಕಂದಾಯ ಹಾಗೂ ಪೊಲೀಸ್ ಇಲಾಖೆ ಸೇರಿದಂತೆ ಇತರೆ ಇಲಾಖಾಧಿಕಾರಿಗಳು  ಮೌನ ಸಮ್ಮತಿ ನೀಡಿರುವುದು ಖಚಿತವಾಗಿದೆ. ಇದರಲ್ಲಿ  ಪೊಲೀಸ್ ಕೆಲ ಇಲಾಖಾಧಿಕಾರಿಗಳು,ಸ್ಥಳೀಯ ಹಾಗೂ ತಾಲೂಕು ಕಂದಾಯ ಅಧಿಕಾರಿಗಳು. ಕೆಲ ಸ್ಥಳೀಯ ಭ್ರಷ್ಟ ಜನಪ್ರತಿನಿಧಿಗಳು, ಕೆಲ ಗ್ರಾಪಂ ಅಧಿಕಾರಿಗಳು ಕಂಪನಿಯೊಂದಿಗೆ ಶಾಮೀಲಾಗಿರುವುದಾಗಿ  ಗುಮಾನಿ ಇದೆ. ಸಂಬಂಧಿಸಿದಂತೆ ಸಾರ್ವಜನಿಕ ಹಿತಾಸಕ್ತಿಯ ದೂರು ದಾಖಲಿಸಿ,ಸೂಕ್ತ ತನಿಖೆಯಾದಲ್ಲಿ ಸತ್ಯ ಹೊರಬರಲಿದ್ದು ಡಿಸಿರವರು ಧಕ್ಷರಿದ್ದಾರೆ ಅವರು ತನಿಖೆ ಮಾಡಬೇಕೆಂದು ಹೊರಾಟಗಾರರು ಕೋರಿದ್ದಾರೆ. ಕಂಪನಿ ತಿಂಗಳು ಗಳಿಂದ  ರೈತರ ಹಾಗೂ ಗ್ರಾಮಸ್ಥರ ಮೇಲೆ ದೌರ್ಜನ್ಯ ಎಸಗುತ್ತಿದೆ ಎಂದು ಹೋರಾಟಗಾರರು ದೂರಿದ್ದಾರೆ. ಸ್ಥಳಿಯ ಪೊಲೀಸರು ಆಡಳಿತ ಕಂಪನಿಯ ಕೀಲಿಕೊಟ್ಟ ಗೊಂಬೆಯಂತೆ ವರ್ತಿಸುತ್ತಿದ್ದು, ರೈತರಿಗೆ ಗ್ರಾಮಸ್ಥರಿಗೆ ‍ಅನ್ಯಾಯವಾಗುತ್ತಿದೆ ಎಂದು ರೈತರು ದೂರಿದ್ದಾರೆ, ಸಂಬಂಧಿಸಿದಂತೆ ಜಿಲ್ಲಾಡಾಳಿತ ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಈ ನಿಟ್ಟಿನಲ್ಲಿ ರೈತಪರ ಹೋರಾಟಗಾರರು ಈ ಮೂಲಕ ಜಿಲ್ಲಾಡಾಳಿತಕ್ಕೆ ಒತ್ತಾಯಿಸಿದ್ದಾರೆ. ಕಂಪನಿಗೆ ಹೊಲ ನೀಡಿದರೆ ವ್ಯವಸಾಯ ಮಾಡಲು ತೊಂದರೆಯಾಗುತ್ತದೆ, ಕಾರಣ ಗ್ರಾಮದ ಯಾರೇ ಆಗಲಿ ಯಾವುದೇ ಕಾರಣಕ್ಕೂ ಕಂಪನಿಗೆ ಭೂಮಿ ನೀಡದಿರಲು ನಿರ್ಧರಿಸಿರುವುದಾಗಿ ರೈತ ಮುಖಂಡರು ಹೇಳಿಕೆ ನೀಡಿದ್ದಾರೆ. ಬದಲಿಗೆ ಕೆಲ ಭ್ರಷ್ಟ ಮುಖಂಡರ ಕುಮ್ಮಕ್ಕಿನೊಂದಿಗೆ ಕಂಪನಿಯವರು,ಹೋರಾಟಗಾರರ ಮೇಲೆ ಸ್ಥಳೀಯ ಠಾಣೆಯಲ್ಲಿ ದೂರು ನೀಡೋ ಪ್ರಯತ್ನ ಮಾಡಿದ್ದು. ಇದು ಕಂಪನಿಯ ದೌರ್ಜನ್ಯಕ್ಕೆ ಸಾಕ್ಷಿಯಾಗುದೆ ಇದನ್ನು ತಾವು ಖಂಡಿಸುವುದಾಗಿ ಹೋರಾಟಗಾರರು ಆ್ರಕ್ರೋಶ ವ್ಯೆಕ್ತಪಡಿಸಿದ್ದಾರೆ. ಕಾರಣ ಸಂಬಂಧಿಸಿದಂತೆ ವಿಜಯನಗರ  ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಳು, ಮತ್ತು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿಗಳು ಶೀಘ್ರವೇ ಖುದ್ದು ಪರಿಶೀಲಿಸಿ.ಕಾನೂನು ನಿಯಮಗಳನ್ನು ಗಾಳಿಗೆ ತೂರಿ ಕಂಬಗಳನ್ನು ನಿರ್ಮಿಸುತ್ತಿರುವುದರ ವಿರುದ್ಧ,ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಹೋರಾಟಗಾರರಿಗೆ ಹಾಗೂ ಗ್ರಾಮದ ರೈತರಿಗೆ ಸೂಕ್ತ ರಕ್ಷಣೆ ನೀಡಬೇಕೆಂದು,ರೈತರು ಹೋರಾಟಗಾರರು ಈ ಮೂಲಕ ಜಿಲ್ಲಾಡಾಳಿತಕ್ಕೆ ಮನವಿ ಮಾಡಿದ್ದಾರೆ.

ವರದಿ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428

Leave a Reply

Your email address will not be published. Required fields are marked *