ಉಕ್ಕಡಗಾತ್ರಿ ಪವಾಡ ಪುರುಷ ಅಜ್ಜಯ್ಯ ಸಿರಗುಂಪಿ ಗ್ರಾಮದಲ್ಲಿ ಜಾತ್ರಾಮಹೋತ್ಸವ..

Spread the love

ಉಕ್ಕಡಗಾತ್ರಿ ಪವಾಡ ಪುರುಷ ಅಜ್ಜಯ್ಯ ಸಿರಗುಂಪಿ ಗ್ರಾಮದಲ್ಲಿ ಜಾತ್ರಾಮಹೋತ್ಸವ..

ಶ್ರೀ ಕರಿಬಸವೇಶ್ವರ 7ನೇ ವರ್ಷದ ಜಾತ್ರಾ ಮಹೋತ್ಸವ ಹಾಗೂ ಎರಡನೇ ವರ್ಷದ ರಥೋತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಸಂಸ್ಥಾನ ಮೈಸೂರು ಮಠ ಕುದುರೆಮೋತಿಯ ಶಾಕ ವಿಜಯ ಮಹಾಂತ ಸ್ವಾಮಿಗಳು ಗ್ರಾಮದ ಕರಿಬಸವೇಶ ಕರೆಬಸವೇಶ ಎಂದು ನೆನೆದರೆ ಉಕ್ಕಡಗಾತ್ರಿ ಇಂದ ಬಂದು ನೀಲಮ್ಮ ತಾಯಿಗೆ ಒಲಿದು ಸುತ್ತಮುತ್ತಲ ಗ್ರಾಮದವರಿಗೆ ಸುಖ ಶಾಂತಿಯನ್ನು ನೀಡುತ್ತಿದ್ದಾರೆ ಎಂದು ಹೇಳಿದರು, ಯಲಬುರ್ಗಾ. ತಾಲೂಕಿನ ಶಿರಗುಂಪಿ ಗ್ರಾಮದಲ್ಲಿ ದೈವಶಕ್ತಿ ಯಾಗಿರುವ ಮಾತೋ ಶ್ರೀ ನೀಲಮ್ಮ ಹೂಗಾರ್ ಇವರ ದಿವ್ಯ ಸಾನಿಧ್ಯದಲ್ಲಿ ಕಳೆದ ಎಂಟು ವರ್ಷಗಳ ಹಿಂದೆ ತಾಲ್ಲೂಕಿನ ಗಡಿ ಗ್ರಾಮ ವಾಗಿರುವ ಶಿರಗುಂಪಿ ಗ್ರಾಮದಲ್ಲಿ ಕರಿಬಸವೇಶ್ವರ ಅಜ್ಜಯ್ಯನ ದೇವಸ್ಥಾನವನ್ನು ನಿರ್ಮಿಸಿದ್ದಾರೆ ಉಕ್ಕಡಗಾತ್ರಿ  ಅಜ್ಜಯ್ಯನ ಆಶೀರ್ವಾದದಿಂದ ದೈವಭಕ್ತಿ ಯಾಗಿರುವ ನೀಲಮ್ಮ ನವರ ಆಶೀರ್ವಾದದಿಂದ ಕೂಡ ಗ್ರಾಮದ ಸುತ್ತಮುತ್ತಲಿನ ಭಕ್ತಾದಿಗಳ ನೆರವಿನಿಂದ ಗ್ರಾಮದಲ್ಲಿ ವಿಶಾಲವಾದ ದೇವಸ್ಥಾನವನ್ನು ನಿರ್ಮಿಸಿದ್ದಾರೆ ಇಲ್ಲಿ ಪ್ರತಿ ಸೋಮವಾರ ಗುರುವಾರ ಅಮಾವಾಸ್ಯೆ ದಿನ ಸುತ್ತಮುತ್ತಲಿನ ಗ್ರಾಮದ ಅವರೆಲ್ಲರೂ ದೇವಸ್ಥಾನಕ್ಕೆ ಬಂದು ದರ್ಶನ ಪಡೆಯುತ್ತಾರೆ, ಶಶಿಧರ ಹೂಗಾರ್ ಗಜೇಂದ್ರಗಡ ತಾಲೂಕು ಪಂಚಾಯಿತಿ ಉಪಾಧ್ಯಕ್ಷರು ಪ್ರಾಸ್ತಾವಿಕವಾಗಿ ಮಾತನಾಡಿದರು, ಕರಿಬಸವೇಶ್ವರ ಜಾತ್ರೆಗೆ ಸ್ನೇಹಬಳಗದ ಗೆಳೆಯರು ಮಲ್ಲಿಕಾರ್ಜುನ್ ಪ್ರಶಾಂತ್ ವೀರೇಶ್ ದೊಡ್ಡನಗೌಡ ಗಣೇಶ ನಾಗಪ್ಪ ಇವರೆಲ್ಲ ಸೇರಿ 20 ಚೀಲ ಮಂಡಕ್ಕಿ 18 ಕೆಜಿ ಕಾರ ಡಾನಿ ಜಾತ್ರೆಗೆ ಬರುವ ಭಕ್ತಾದಿಗಳಿಗೆ ಹಂಚಿಕೆ ಮಾಡಿದರು, ಸಂದರ್ಭದಲ್ಲಿ ಗ್ರಾಮದ ಹಿರಿಯ ಮುಖಂಡರು ವೀರಯ್ಯ ಹಿರೇಮಠ ಶಿವಾನಂದ್ ಗೋಗೇರಿ ಮತ್ತು ಶಿವಪುತ್ರಯ್ಯ ಹಿತ್ತಲಮನಿ ದಾವಲ್ ಸಾಬ್ ಮುಲ್ಲಾನವರ ಶರಣು ಹೂಗಾರ್ ಸುತ್ತ ಮುತ್ತಲಿನ ಸದ್ಭಕ್ತರು ಭಾಗಿಯಾದ್ದರು,

ವರದಿಹುಸೇನ್ ಮೋತೆಖಾನ

Leave a Reply

Your email address will not be published. Required fields are marked *