ತಾವರಗೇರಾ ಪಟ್ಟಣದ ನಾನಾ ಕಡೆ  ಅಂತರಾಷ್ಟ್ರೀಯ ಕಾರ್ಮಿಕ  ದಿನಾಚರಣೆ.

Spread the love

ತಾವರಗೇರಾ ಪಟ್ಟಣದ ನಾನಾ ಕಡೆ  ಅಂತರಾಷ್ಟ್ರೀಯ ಕಾರ್ಮಿಕ  ದಿನಾಚರಣೆ.

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ ಶ್ರೀ ಶ್ಯಾಮೀದಲಿ ಸರ್ಕಲ್ ಮುಂದೆ ಕಾರ್ಮಿಕರೊಂದಿಗೆ  ಮೇ. ಡೇ  ( ಕಾರ್ಮಿಕ)ರ ದಿನಾಚರಣೆಯನ್ನು ಹಮ್ಮಿಕೊಂಡರು, ಈ ಕಾರ್ಮಿಕರ ದಿನಾಚರಣೆಯ ಅಂಗವಾಗಿ ತಮ್ಮದೆಯಾದ ಬೇಡಿಕೆಗಳು ಅಂದರೆ ಲಾಕ್ ಡೌನ್ ಬಾದಿತ ಕಾರ್ಮಿಕರಿಗೆ ಪೂರ್ಣ ವೇತನ ಖಾತ್ರಿಪಡಿಸಿ, ಪ್ರತಿ ಕುಟುಂಬಕ್ಕೆ 10 ಸಾವಿರ ರೂ/ ಹಣ ನೀಡಿ, ತಲಾ 10 ಕೆ.ಜಿ.ಆಹಾರ ಧಾನ್ಯ ನೀಡಿ. ಉಚಿತ ಆಸ್ಪತ್ರೆ ಆಮ್ಲಜನಕ ಔಷದ ನೀಡಿ, ಪ್ರತಿಯೊಬ್ಬರಿಗೂ ಉಚಿತ ಕೊವಿಡ್ ಲಸಿಕೆ ಸಿಗಲಿ. ವಿಶ್ವದ ಕಾರ್ಮಿಕರೆ ಒಂದಾಗಿ, ಜೀವಗಳನ್ನು ಉಳಿಸಿ ಪರಿಹಾರ ಒದಗಿಸಿ, ಮನೆ ಮನೆಗಳಲ್ಲಿ ಕಾರ್ಮಿಕರ ದಿನಾಚರಣೆ, ರೈತ ಕಾರ್ಮಿಕರ ಐಕ್ಯತೆ ಚಿರಾಯುವಾಗಲಿ, ಭರವಸೆ ನಮ್ಮ ಹೋರಾಟದಲ್ಲಿದೆ,  ಕಾರ್ಮಿಕರೆಂದು ಗುಲಾಮರಲ್ಲ, ದುಡಿಮೆಯೆ ದುಡ್ಡಿನ ತಾಯಿ, ಎಂದು ರೈತ ಕಾರ್ಮಿಕರ ದಿನಾಚರಣೆಯ ಅಂಗವಾಗಿ  ಘೋಷಣೆ ಕೂಗುತ್ತ ಸರ್ಕಾರಕ್ಕೆ ಒತ್ತಾಯಿಸಿದರು, ಈ ಸಂದರ್ಬದಲ್ಲಿ ಕಲಾವತಿ ಸಿಐಟಿಯುನ ತಾಲೂಕ ಅಧ್ಯಕ್ಷರು ತಾವರಗೇರಾ, ರಮೇಶ್ ತಿಮ್ಮಾಪುರ, ಜುಬೇರ್  ಇತರರು ಉಪಸ್ಥಿತರಿದ್ದರು  ಈ ಕಾರ್ಯಕ್ರಮದ ಜೊತೆಗೆ ತಾವರಗೇರಾ ಪಟ್ಟಣದ ಮತ್ತೊಂದು ಕಡೆ ಅಂದರೆ ಶ್ರೀ  ಬಸವೇಶ್ವರ ಸರ್ಕಲನಲ್ಲಿ ಶ್ರೀ ಶ್ಯಾಮೀದಲಿ ಬಾರ ಬೈಡಿಂಗ್ ಕಟ್ಟಡ ಕಾರ್ಮಿಕ ಸಂಘದವತಿಯಿಂದ ಅಂತರಾಷ್ಟ್ರೀಯ ಕಾರ್ಮಿಕರ  ದಿನಾಚರಣೆಯನ್ನು ಸಂಕ್ಷೀಪ್ತವಾಗಿ ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದ ಜೊತೆಗೆ ಶ್ರೀ ಶ್ಯಾಮೀದಲಿ ಬಾರ ಬೈಡಿಂಗ್ ಕಟ್ಟಡ ಕಾರ್ಮಿಕರ ಸಂಘದ ಬ್ರೋಡ್ ಗೆ ಅವರಿಂದ ಮಾಲಾರ್ಪಣೆ ಮಾಡಲಾಯಿತು, ಇದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಮಾಡಿದರು, ಇದೆ ಸಂದರ್ಭದಲ್ಲಿ ಕಾರ್ಮಿಕರ ಸಲಕರಣೆಗಳಾದ ವಿವಿಧ ಸಾಮಾನುಗಳಿಗೆ  ಸಲಿಕೆ, ಪುಟ್ಟಿ, ಗುದ್ದಲಿಗೆ, ಪೂಜೆ ಸಲ್ಲಿಸಲಾಯಿತು. ಹಾಗೂ ಕಾಮಿ೯ಕರಿಗೆ ಬರುವ ಸವಲತ್ತುಗಳನ್ನು ಮಧ್ಯವತಿ೯ಗಳ ಹಾವಳಿಯಿಂದ ನಿಜವಾದ ಕಾಮಿ೯ಕರಿಗೆ ಮುಟ್ಟುವುದಿಲ್ಲ ಅದಕ್ಕಾಗಿ ಸಕಾ೯ರ ಬರುವ ಸವಲತ್ತುಗಳನ್ನು ಕಟ್ಟು ನಿಟ್ಟಿನ ಕ್ರಮವನ್ನು ನೀಡಬೇಕು ನಿಜವಾದ ಕಾಮಿ೯ಕರಿಗೆ ಮುಟ್ಟುಬೇಕು ಸಕಾ೯ರ ಆದೇಶ ಮಾಡಬೇಕು ಈ ಕಾರ್ಯಕ್ರಮದಲ್ಲಿ ತಾವರಗೇರಾ ಪಟ್ಟಣದ ಶ್ರೀ ಶ್ಯಾಮೀದಲಿ ಬಾರ ಬೈಡಿಂಗ್ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷರಾದ ಜೀಲಾನಿಸಾಬ ಬಳೂಟಗಿ, ರಾಮಣ್ಣ ಭೋವಿ, ರಾಜಾನಾಯಕ ಸಮಾಜ ಸೇವಕರು ಹಾಗೂ ಉಳಿದ ಶ್ರೀ ಶ್ಯಾಮೀದಲಿ ಬಾರ ಬೈಡಿಂಗ್ ಕಟ್ಟಡ ಕಾರ್ಮಿಕರ ಸಂಘದ  ಇನ್ನೂ ಅನೇಕ ಕಾಮಿ೯ಕರು  ಈ ಕಾಯ೯ಕ್ರಮದಲ್ಲಿ ಬಾಗಿಯಾಗಿದರು, ವರದಿ – ಅಮಾಜಪ್ಪ ಹೆಚ್.ಜುಮಲಾಪೂರ

Leave a Reply

Your email address will not be published. Required fields are marked *