ಯಲಬುರ್ತಿ ಗ್ರಾಮದ ಹೊನ್ನಮ್ಮ ದೇವಿಯ ಜಾತ್ರಾ ಮಹೋತ್ಸವ….

Spread the love

ಯಲಬುರ್ತಿ ಗ್ರಾಮದ ಹೊನ್ನಮ್ಮ ದೇವಿಯ ಜಾತ್ರಾ ಮಹೋತ್ಸವ….

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಯಲಬುರ್ತಿ ಗ್ರಾಮದಲ್ಲಿ ಗ್ರಾಮ ದೇವತೆಯಾದ ಶ್ರೀ ಹೊನ್ನಮದೇವಿಯ ಜಾತ್ರಾ ಮಹೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಸರಳವಾಗಿ ಆಚರಿಸಲಾಯಿತು. ನಿನ್ನೆಯಿಂದಲೇ ಪೂಜಾ ಕಾರ್ಯಕ್ರಮಗಳು ನಡೆದಿದ್ದು, ದೇವಿಗೆ ವಿಶೇಷ ಹೂವಿನ ಅಲಂಕಾರ ಮಾಡಿ ಪೂಜೇ ಸಲ್ಲಿಸಲಾಗಿದೆ, ನಿನ್ನೆ ರಾತ್ರಿ ಕುದಿಯುವ ಬಿಸಿ ನೀರಿನ ಮಡಕೆಯಲ್ಲಿ ಅನ್ನ ಮಾಡುವ ಅಕ್ಕಿಪಾಯ ಸ ಹಾಗೂ ಅಗ್ನಿ ಕುಂಡ ಹಾಯುವುದು ಸೇರಿದಂತೆ ಹಲವು ಪವಾಡ ಸದೃಶ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಮತ್ತೊಬ್ಬ ಅಧಿ ದೇವತೆ ದ್ಯಾಮಮ್ಮ ನವರ ಊರ ಮೆರವಣಿಗೆ ಹೊರಟು ಹೊನ್ನಮ್ಮ ದೇವಿಯ ಸನ್ನಿಧಿಗೆ ಬಂದು ನೆಲೆಸಿ ಪೂಜೆ ಸಲ್ಲಿಸಿದ ನಂತರ ಊರಿನ ಹಾಗೂ ಸುತ್ತ ಮುತ್ತಲಿನ ಹತ್ತಾರು ಹಳ್ಳಿಗಳ ಜನರು ತಂಡೋಪತಂಡವಾಗಿ ಎತ್ತಿನ ಬಂಡಿಗಳನ್ನ ಕಟ್ಟಿಕೊಂಡು ಕುಟುಂಬ ಸಮೇತರಾಗಿ ಆಗಮಿಸಿರುತ್ತಾರೆ ಈ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಹರಕೆ ತೀರಿಸಿ ಬಂದ ಭಕ್ತಾದಿಗಳು ಎಲ್ಲರೂ ಸೇರಿ ಮಧ್ಯಾಹ್ನದ ಉಪಹಾರವನ್ನು ಮಾಡಿದರು ನಂತರ ಸಂಜೆ ನಡೆಯುವ ಹುಚ್ಚಾಯ ( ತೇರು ) ಎಳೆದು ಜಾತ್ರೆಯಲ್ಲಿ ಕುಷ್ಟಗಿ ಶಾಸಕರಾದ ಅಮರೇಗೌಡ ಬಯ್ಯಾಪುರ,ಮತ್ತು ಮಾಜಿ ಶಾಸಕರು ಕೊಪ್ಪಳ ಬಿಜೆಪಿ ಜಿಲ್ಲಾ ಅಧ್ಯಕ್ಷ ರಾದ ದೊಡ್ಡನಗೌಡ ಪಾಟೀಲ್, ಜಿಲ್ಲಾ ಪಂಚಾಯತ್ ಸದಸ್ಯರಾದ ಕೆ,ಮಹೇಶ್ ಸಂಗನಗೌಡ,ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಊರಿನ ಮುಖಂಡರುಗಳು ಸೇರಿ ಸಡಗರ ಸಂಭ್ರಮದಿಂದ ಆಚರಣೆ ಮಾಡಿದರು ಊರಿನಲ್ಲಿ ಹಮ್ಮಿಕೊಂಡಿರುವ ಸುಂದರ ಸಾಮಾಜಿಕ ನಾಟಕ ನೋಡಿ ಆನಂದಿಸಿದರು ಎಂದು ಊರಿನ ಹಿರಿಯ ಮುಖಂಡರಾದ ಜಗನ ಗೌಡ ಪಾಟೀಲ್ ಹೇಳಿದರು. ಇದೇ ಸಂದರ್ಭದಲ್ಲಿ ಊರಿನ ಯುವಕರೆಲ್ಲ ಸೇರಿ ಜಾತ್ರೆಯ ಅಂಗವಾಗಿ ಕ್ರಿಕೆಟ್ ಟೂರ್ನಮೆಂಟ್ ಆಯೋಜನೆ ಮಾಡಿ ಒಂದು ವಾರಗಳ ಕಾಲ ಊರಿನ ಸುತ್ತ ಮುತ್ತಲಿನ ಗ್ರಾಮಗಳ ಯುವಕರು ಸ್ಪರ್ಧಿಸಿ ಆಟ ಆಡಿದವರಿಗೆ ಇಂದು ಪ್ರಶಸ್ತಿ ಪ್ರಧಾನ ಮಾಡಲಾಯಿತು. ಜಾತ್ರೆಯಲ್ಲಿ ಊರಿನ ಗ್ರಾಮಸ್ಥರೆಲ್ಲ ಸೇರಿ ಅನ್ನದಾನ ಏರ್ಪಡಿಸಿ ಬಂದಂತಹ ಭಕ್ತರಿಗೆ ಊಟದ ವ್ಯವಸ್ಥೆ ಇರುತ್ತದೆ ಭಕ್ತಾದಿಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಸ್ವಯಂ ಸೇವಕರು ಹಾಗೇ ಊರಿನ ಜನರು ಒಂದು ವಾರ ನಡೆಯುವ ಈ ಜಾತ್ರೆಗೆ ತಮ್ಮ ಉಪಸ್ಥಿತಿ ಮೂಲಕ ಜಾತ್ರೆಯ ಯಶಸ್ವಿಗೆ ಕಾರಣಿಕರ್ತರಗುತ್ತಾರೆ.

ವರದಿ – ಹುಸೇನಬಾಷ ಮೊತೇಖಾನ

Leave a Reply

Your email address will not be published. Required fields are marked *