ಇಂದು ಯಲಬುರ್ಗಾದಲ್ಲಿ ಜೀ ಕನ್ನಡದ “ ಹಿಟ್ಲರ್ ಕಲ್ಯಾಣ ಜಾತ್ರೆ “

Spread the love

ಇಂದು ಯಲಬುರ್ಗಾದಲ್ಲಿ ಜೀ ಕನ್ನಡದಹಿಟ್ಲರ್ ಕಲ್ಯಾಣ ಜಾತ್ರೆ

ಕರ್ನಾಟಕದಲ್ಲಿ ಕನ್ನಡಿಗರ ಮನೆಮಾತಾಗಿರುವ ಜೀ ಕನ್ನಡ ವಾಹಿನಿ ಯವರು ಸತತವಾಗಿ ಸೂಪರ್ ಹಿಟ್ ಸೀರಿಯಲ್ ಗಳನ್ನು ನೀಡುತ್ತಿರುವ ಜೀ ಕನ್ನಡ ವಾಹಿನಿ ತನ್ನ ಶ್ರೀಮಂತ ನಿರೂಪಣೆಯ ಮೂಲಕ ಕಿರುತೆರೆಯಲ್ಲೇ ಹೊಸ ಅಧ್ಯಾಯ ಬರೆದಿದೆ. ಅದರ ಮುಂದುವರೆದ ಭಾಗವಾಗಿ ಆರಂಭವಾದ ” ಹಿಟ್ಲರ್ ಕಲ್ಯಾಣ ” ಸೀರಿಯಲ್ ಲೋಕದಲ್ಲೇ ಹೊಸತನವನ್ನು ತಂದಿದೆ. ಕೊಪ್ಪಳ ಜಿಲ್ಲೆಯ ಯಲಬುರ್ಗದ ತಾಲೂಕು ಕ್ರೀಡಾಂಗಣಕ್ಕೆ ಆಗಮಿಸುತ್ತಿದ್ದು ” ಹಿಟ್ಲರ್ ಕಲ್ಯಾಣ ಜಾತ್ರೆ ” ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಜೀ ಕನ್ನಡ ವಾಹಿನಿ ನಿಮ್ಮೂರಿನಲ್ಲಿ ನಿಮಗೆಂದೇ ಆಯೋಜಿಸಿರುವ ಈ ಕಾರ್ಯಕ್ರಮಕ್ಕೆ ನೀವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಿ. ಇಂದು ಸಂಜೆ 5.30 ಗಂಟೆಗೆ ಈ ಕಾರ್ಯಕ್ರಮ ನಡೆಯಲಿದೆ. ಈ ಹಿಟ್ಲರ್ ಕಲ್ಯಾಣ ಧಾರಾವಾಹಿ 200 ಸಂಚಿಕೆಗಳ ಸನಿಹದಲ್ಲಿರುವ ಈ ಧಾರವಾಹಿ ಯ ಪರ್ಫೆಕ್ಟ್ ರಾಜ ಎಜೆ ಪಾತ್ರದಲ್ಲಿ ನಟ ದಿಲೀಪ್ ರಾಜ್ , ಎಡವಟ್ ರಾಣಿ ಲೀಲಾ ಪಾತ್ರದಲ್ಲಿ ಮಲೈಕಾ ತಮ್ಮ ಅದ್ಭುತ ಅಭಿನಯದ ಮೂಲಕ ವೀಕ್ಷಕರ ಮನಗೆದ್ದಿದ್ದಾರೆ. ಮೂವರು ಸೊಸೆಯಂದಿರು ಸೇರಿ ಅತ್ತೆಯನ್ನು ಹುಡುಕುವ ವಿಭಿನ್ನ ಕಥೆಯನ್ನು ವಿನೂತನವಾಗಿ ನಿರೂಪಣೆ ಮಾಡುತ್ತಿರುವುದು ಈ ಸೀರಿಯಲ್ ನ ಜನಪ್ರಿಯತೆ ಹೆಚ್ಚಿಸಿದೆ. 200 ಸಂಚಿಕೆಗಳ ಸನಿಹದಲ್ಲಿರುವ ಈ ಧಾರವಾಹಿ ಪ್ರೀತಿಯಿಂದ ಪ್ರೋತ್ಸಾಹಿಸಿದ ಜನರ ಬಳಿಗೆ ಬಂದು ಅವರೊಟ್ಟಿಗೆ ಬೆರೆತು ಧನ್ಯವಾದ ತಿಳಿಸಲೆಂದು ಇಡೀ ಹಿಟ್ಲರ್ ಕಲ್ಯಾಣ ತಂಡ ಪಾರು ಧಾರಾವಾಹಿಯ ನಾಯಕ, ನಾಯಕಿಯೊಟ್ಟಿಗೆ ಆಗಮಿಸಲಿದ್ದಾರೆ,

ವರದಿ – ಹುಸೇನಬಾಷ ಮೊತೇಖಾನ

Leave a Reply

Your email address will not be published. Required fields are marked *